Science, asked by yashvardhan1644, 23 hours ago

ಸಸ್ಯ ಹಾರ್ಮೋನ್ ಗಳನ್ನು ಹೆಸರಿಸಿ ಮತ್ತು ಅವುಗಳ ಕಾರ್ಯಗಳನ್ನು ತಿಳಿಸಿ ​

Answers

Answered by khushbuvishwakama
1

Answer:

ಅಂಗಾಂಶ ಸಂಪಾದಿಸಿ

ದೇಹದಲ್ಲಿರುವ ಜೀವಕೋಶಗಳ[೧] ಸಂಖ್ಯೆಯ ಆಧಾರದ ಮೇಲೆ ಜೀವಿಗಳನ್ನು ಏಕಕೋಶೀಯ ಹಾಗೂ ಬಹುಕೋಶೀಯ ಎಂದು ವರ್ಗೀ ಕರಿಸಲಾಗಿದೆ. ಅಮೀಬಾ, ಪ್ಯಾರಮೀಸಿಯಂ ಮುಂತಾದ ಏಕಕೋಶ ಜೀವಿಗಳಲ್ಲಿ ದೇಹದ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಒಂದೇ ಒಂದು ಜೀವಕೋಶವಿದೆ. ಆದರೆ, ಬಹುಕೋಶೀಯ ಸಸ್ಯ ಮತ್ತು ಪ್ರಾಣಿಗಳ ರಚನೆಯು ಹೆಚ್ಚು ಸಂಕೀರ್ಣವಾಗಿದೆ. ಇವುಗಳಲ್ಲಿ ನಿರ್ದಿಷ್ಟವಾದ ಕೆಲಸವನ್ನು ನಿರ್ವಹಿಸುವ ಸಲುವಾಗಿ ವಿಶಿಷ್ಟ ಜೀವಕೋಶಗಳ ಗುಂಪುಗಳಿವೆ. ಒಂದು ನಿರ್ದಿಷ್ಟ ಮೂಲದಿಂದ ಬಂದ, ಒಂದೇ ರೀತಿಯ ರಚನೆ ಹಾಗೂ ಕಾರ್ಯಗಳನ್ನು ಮಾಡುವಜೀವಕೋಶಗಳ ಗುಂಪಿಗೆ ಅಂಗಾಂಶ ಎಂದು ಹೆಸರು. ಅಂಗಾಂಶಗಳು ತಮ್ಮ ರಚನೆಯಲ್ಲಿ ಹೆಚ್ಚಿನ ವೈವಿಧ್ಯವನ್ನು ತೋರುತ್ತವೆ. ವಿಶೇಷವಾಗಿ ಕೋಶದ ಆಕಾರ, ಕೋಶಭಿತ್ತಿಯ ಮಂದತ್ವ ಹಾಗೂ ಇನ್ನಿತರ ಲಕ್ಷಣಗಳಲ್ಲ್ಲಿ ಈ ಭಿನ್ನತೆ ಇದೆ,. ಪ್ರತಿಯೊಂದು ಅಂಗಾಂಶವು ಒಂದು ನಿರ್ದಿಷ್ಟಕಾರ್ಯವನ್ನು ನಿರ್ವಹಿಸುತ್ತದೆ. ನಿರ್ದಿಷ್ಟಕಾರ್ಯವನ್ನು ನಿರ್ವಹಿಸಲು ಜೊತೆಗೂಡುವ ಅಂಗಾಂಶಗಳ ಗುಂಪಿಗೆ ಅಂಗ(organ) ಎಂದು ಹೆಸರು. ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುವ ಅಂಗಗಳ ಗುಂಪಿಗೆ ಅಂಗ ವ್ಯವಸ್ಥೆ(organ system) ಎಂದು ಹೆಸರು. ಅಂಗಾಂಶಗಳ ಅಧ್ಯಯನವನ್ನು ಮಾಡುವ ಜೀವಶಾಸ್ತ್ರದ ಶಾಖೆಗೆ ಅಂಗಾಂಶಶಾಸ್ತ್ರ(histology) ಎಂದು ಹೆಸರು. ಸಸ್ಯಗಳಲ್ಲಿ ಕೇವಲ ಅಂಗಾಂಶ ಮಟ್ಟದ ವ್ಯವಸ್ಥೆ ಕಂಡುಬರುತ್ತದೆ. ಅವುಗಳಲ್ಲಿ ಅಂಗಗಳು ಮತ್ತು ಅಂಗವ್ಯವಸ್ಥೆ ಇರುವುದಿಲ್ಲ.

ಸಸ್ಯ ಅಂಗಾಂಶಗಳು ಸಂಪಾದಿಸಿ

ಆವೃತ ಬೀಜ ಸಸ್ಯಗಳಲ್ಲಿ ಬೆಳವಣಿಗೆ, ಹೀರಿಕೆ, ದ್ಯುತಿ ಸಂಕ್ಲೇಷಣೆ, ರಕ್ಷಣೆ ಹಾಗೂ ನೀರು ಮತ್ತು ಪೋಷಕಾಂಶಗಳ ಸಾಗಾಣಿಕೆ ಮೊಂತಾದ ವಿವಿಧ ಕಾರ್ಯಗಳನ್ನು ನಿರ್ವಹಿಸಲು ವಿವಿಧ ಬಗೆಯ ಅಂಗಾಂಶಗಳಿವೆ. ಕಾರ್ಯದ ಆಧಾರದ ಮೇಲೆ ಸಸ್ಯ ಅಂಗಾಂಶಗಳನ್ನು ವರ್ಧನ ಅಂಗಾಂಶ (meristematic tissue) ಹಾಗೂ ಶಾಶ್ವತ ಅಂಗಾಂಶಗಳು(permanent tissue) ಎಂದು ವರ್ಗೀಕರಿಸಲಾಗಿದೆ. ಸಸ್ಯಗಳು ಜೀವಿತಾವಧಿಯ ಕೊನೆಯವರೆಗೆ ಬೆಳೆಯುತ್ತಿರುತ್ತವೆ ಎಂಬುದು ತಿಳಿದ ಸಂಗತಿ. ಇದಕ್ಕೆ ಕಾರಣ ಬೆಳವಣಿಗೆಗಾಗಿಯೇ ಇರುವ ವರ್ಧನ ಅಂಗಾಂಶ. ವರ್ಧನ ಅಂಗಾಂಶ ನಿರಂತರವಾಗಿ ವಿಭಜನೆಯಾಗುತ್ತಿರುವ ಭ್ರೂಣಕೋಶಗಳಿಂದ ಕೂಡಿದೆ. ಇದಕ್ಕೆ ಬೆಳವಣಿಗೆಯ ಅಂಗಾಂಶ ಎಂಬ ಹೆಸರೂ ಇದೆ. ಇದು ಬೇರಿನ ತುದಿ, ಕಾಂಡದ ತುದಿ, ಮೊಗ್ಗು ಮುಂತಾದ ಬೆಳೆಯುತ್ತಿರುವ ಸಸ್ಯದ ಭಾಗಗಳಲ್ಲಿ ಕಂಡುಬರುತ್ತದೆ. ಎರಡು ರೀತಿಯ ವರ್ಧನ ಅಂಗಾಂಶ ಗಳನ್ನು ಗುರುತಿಸಬಹುದು. ಅವುಗಳೆಂದರೆ, ತುದಿ ವರ್ಧನ ಅಂಗಾಂಶ(apical) ಹಾಗೂ ಪಾರ್ಶ್ವ ವರ್ಧನ(lateral) ಅಂಗಾಂಶ. ತುದಿ ವರ್ಧನ ಅಂಗಾಂಶವು ಕಾಂಡದ ತುದಿಯಲ್ಲಿ ಸಕ್ರಿಯವಾಗಿದ್ದು, ಸಸ್ಯದ ಎತ್ತರ ಹೆಚ್ಚುವುದಕ್ಕೆ ಕಾರಣವಾಗಿದೆ. ಪಾರ್ಶ್ವ ವರ್ಧನ ಅಂಗಾಂಶವು ಸಸ್ಯದ ಸುತ್ತಳತೆಯ ಹೆಚ್ಚಳಕ್ಕೆ ಕಾರಣವಾಗಿದೆ. ವರ್ಧನ ಅಂಗಾಂಶದ ಜೀವಕೋಶಗಳು ಈ ಕೆಳಗಿನ ಲಕ್ಷಣಗಳನ್ನು ತೋರುತ್ತವೆ.

  • ಕೋಶ ಭಿತ್ತಿಯು ತೆಳುವಾಗಿದೆ
  • ಜೀವಕೋಶಗಳು ನಿರಂತರ ವಿಭಜನೆಯಿಂದಾಗಿ ಬೆಳವಣಿಗೆಗೆ ಕಾರಣವಾಗುತ್ತವೆ.
  • ಜೀವಕೋಶಗಳು ಒತ್ತೊತ್ತಾಗಿ ಜೋಡಣೆಯಾಗಿದ್ದು ನಡುವೆ ಅಂತರ್ ಕೋಶೀಯ ಅವಕಾಶಗಳಿರುವುದಿಲ್ಲ.
  • ದೊಡ್ಡ ಕೋಶಕೇಂದ್ರವಿರುತ್ತದೆ. ಆದರೆ ಪ್ಲಾಸ್ಟಿಡ್ ಗಳಿರುವುದಿಲ್ಲ.
  • ಕೋಶಾವಕಾಶಗಳು ಚಿಕ್ಕದಿರಬಹುದು ಅಥವಾ ಇಲ್ಲದಿರಬಹುದು.

ವರ್ಧನ ಅಂಗಾಂಶದ ಜೀವಕೋಶಗಳು ಬೇರು ಹಾಗೂ ಕಾಂಡದಲ್ಲಿರುವ ನಾಳಕೂರ್ಚಗಳಲ್ಲಿಯೂ(vascular bundles) ಕಂಡು ಬರುತ್ತವೆ[೨]. ಅಲ್ಲಿ ಅವು ನಾಳಕೂರ್ಚಗಳ ಬೆಳವಣಿಗೆಗೆ ಕಾರಣವಗುತ್ತವೆ. ಈ ಜೀವಕೋಶಗಳು ಎಲೆಗಳ ಮಧ್ಯೆ ಗೆಣ್ಣುಗಳಲ್ಲಿಯೂ ಇರುತ್ತವೆ. ಅಲ್ಲಿ ಕಾಂಡ ಶಾಖೆಯೊಡೆಯಲು ನೆರವಾಗುತ್ತವೆ. ಎಲ್ಲಾ ಶಾಶ್ವತ ಅಂಗಾಂಶಗಳೂ ವರ್ಧನ ಅಂಗಾಂಶಗಳಿಂದಲೇ ಉತ್ಪತ್ತಿಯಾಗುತ್ತವೆ.

ಶಾಶ್ವತ ಅಂಗಾಂಶಗಳು ಸಂಪಾದಿಸಿ

ಈ ಅಂಗಾಂಶಗಳು ಪ್ರೌಡಜೀವಕೋಶಗಳಿಂದ ಉಂಟಾಗಿವೆ. ಜೀವಕೋಶಗಳ ಕೋಶ ಭಿತ್ತಿಯು ಸೆಲ್ಯುಲೋಸ್ ನಿಂದ ಕೂಡಿದೆ. ಜೊತೆಗೆ ಹೆಮಿಸೆಲ್ಯುಲೋಸ್, ಪೆಕ್ಟಿನ್ ಹಾಗೂ ಲಿಗ್ನಿನ್ ಎಂಬ ವಸ್ತುಗಳೂ ಇರಬಹುದು. ಪ್ಲಾಸ್ಟಿಡ್ ಗಳು ಮತ್ತಿತರೆ ಕಣದಂಗಗಳು ಅಭಿವೃದ್ಧಿಯಾದ ಸ್ಥಿತಿಯಲ್ಲಿರುತ್ತ್ತವೆ. ಕೋಶಾವಕಾಶಗಳು ದೊಡ್ಡದಾಗಿದ್ದ್ದು, ಪ್ರಮುಖವಾಗಿರುತ್ತವೆ. ಪ್ರೌಢ ಹಂತದಲ್ಲಿ ಕೋಶಕೇಂದ್ರ ಇರಬಹುದು, ಇಲ್ಲದೆಯೂಇರಬಹುದು. ಶಾಶ್ವತ ಅಂಗಾಂಶಗಳನ್ನು ಎರಡು ಪ್ರಮುಖ ಗುಂಪುಗಳಲ್ಲಿ ಗುರುತಿಸಬಹುದು. ಅವುಗಳೆಂದರೆ, ಸರಳ ಶಾಶ್ವತ ಅಂಗಾಂಶಗಳು ಮತ್ತು ಸಂಕೀರ್ಣ ಶಾಶ್ವತ ಅಂಗಾಂಶಗಳು. ಸರಳ ಷಾಶ್ವತ ಅಂಗಾಂಶಗಳು: ಸರಳ ಶಾಶ್ವತ ಅಂಗಾಂಶಗಳಲ್ಲಿ ಎಲ್ಲ ಜೀವಕೋಶಗಳು ಒಂದೇರೀತಿಯಲ್ಲಿದ್ದು, ಒಂದೇ ರೀತಿಯ ಕಾರ್ಯವನ್ನು ನಿರ್ವಹಿಸುತ್ತವೆ. ಸಸ್ಯ ದೇಹದ ಬಹುಭಾಗವನ್ನು ಆಕ್ರಮಿಸುವ ಈ ಅಂಗಾಂಶಗಳು ಸಂಗ್ರಹ, ಆಧಾರ ಮುಂತಾದ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ. ಮೂರು ಬಗೆಯ ಸರಳ ಶಾಶ್ವಥ ಅಂಗಾಂಶಗಳನ್ನು ಗುರುತಿಸಬಹುದು. ಅವುಗಳೆಂದರೆ:

  • ಪೇರಂಕೈಮ
  • ಕೋಲಂಕೈಮ
  • ಸ್ಕ್ಲೀರಂಕೈಮ.

Similar questions