India Languages, asked by pavithra6338, 11 hours ago

ಕೆರೆಗಳ ಮಹತ್ವ ಹಾಗೂ ಅವುಗಳ ಉಳಿವಿಗೆ ನಿಮ್ಮ ಸಲಹೆಗಳನ್ನು ನೀಡಿರಿ.​

Answers

Answered by pradanimulimani456
3

ನಮ್ಮ ಪೂರ್ವಿಕರು ಕೆರೆ, ಹಳ್ಳ, ಕುಂಟೆ, ಮದಗ, ತೆರೆದ ಬಾವಿ, ಮೊದಲಾದ ಜಲಾಶಯಗಳಿಗೆ ವಿಶೇಷ ಮಹತ್ವ ನೀಡಿದರು. ಕೆರೆಗಳನ್ನು ತೋರಿಸುವುದು ತೆರೆದ ಬಾವಿಗಳನ್ನು ನಿರ್ಮಿಸುವುದು ಮುಂತಾದವು ಲೋಕೋಪ ಕಾರ್ಯಗಳೆಂದು ಅವರು ತಿಳಿದಿದ್ದರು. ತಾಯಂದಿರು ಮಗುವಿಗೆ ಹಾಲಿ ಕುಡಿಸುವಾಗಲೇ ಈ ಬಗೆಯ ಕೆಲಸಗಳನ್ನು ಮುಂದೆ ಕೈಗೊಳ್ಳುವಂತೆ ಉದ್ದೇಶಿಸುತ್ತಿದ್ದರೆಂಬ ಉಲ್ಲೇಖ ಶಾಸನಗಳಲ್ಲಿದೆ. ಮಳೆ ನೀರು ಸಂಗ್ರಹವಾಗುವ, ಇಂಗುವ, ಅಂತರ್ಜಲ, ಹೆಚ್ಚುವಂತೆ ಮಾಡುವ ಜೀವಿಗಳಿಗೆ ಆಸರೆಯಾಗುವ ತಾಣವೇ ಕೆರೆಯಾಗಿದೆ. ಕೆರೆಯ ನೀರಿನಿಂದ ನೂರಾರು ಎಕರೆ ಪ್ರದೇಶಗಳಲ್ಲಿ ನಾನಾ ಬೆಳೆಗಳನ್ನು ಬೆಳೆಯಬಹುದು. ಮನುಷ್ಯರಿಗೆ, ಪ್ರಾಣಿಗಳಿಗೆ ಕುಡಿಯಲು, ಬಟ್ಟೆ, ಪಾತ್ರೆಗಳನ್ನು ತೊಳೆಯಲು ನೀರನ್ನು ಒದಗಿಸುತ್ತದೆ. ಮೀನು ಕಪ್ಪೆ ಮೊದಲಾದ ಜಲಚರಗಳಿಗೆ ಕೆರೆ ಆಸರೆ ನೀಡುತ್ತದೆ. ಅವುಗಳನ್ನು ಅವಲಂಬಿಸಿದೆ ಬಗೆ ಬಗೆಯ ಪಕ್ಷಿಗಳು ಅದು ಆಶ್ರಯ ಸ್ಥಾನವಾಗಿದೆ ಕೆಲವು ಕೆರೆಗಳು ನದಿಗಳು ಮೂಲ ಸ್ಥಾನಗಳು ಆಗಿವೆ. ನಮ್ಮ ನಾಡಿನಲ್ಲಿ ಇಂತಹ ಹಲವಾರು ಕೆರೆಗಳನ್ನು ರಾಜರು ಪಾಳೆಗಾರರು ಹಿರಿಯ ದಾನಿಗಳು ಕಟ್ಟಿಸಿದ್ದಾರೆ. ಇವು ಕೆರೆಗಳನ್ನು ನಿರ್ಮಿಸುವ ಉದಾಹರಣೆಯಾಗಿವೆ.

ಆ ಕಾಲ ಈಗ ಕಾಣುತ್ತಿಲ್ಲ ಜನರ ಮನೋಭಾವವೇ ಬದಲಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಸ್ವಾರ್ಥವೂ ಹೆಚ್ಚಾಗಿದೆ ಅಂದಿಂದ ಹಲವಾರು ಕೆರೆಗಳು ಜನರಿಂದಲೇ ಕುರುಹು ಇಲ್ಲದಂತೆ ಮಾಯವಾಗಿವೆ, ಆಗುತ್ತಲೆ ಇವೆ. ಮನೆಗಳನ್ನು ನಿಲ್ದಾಣಗಳನ್ನು ರಸ್ತೆಯನ್ನು ನಿರ್ಮಿಸಲು ಕೆರೆಗಳನ್ನು ಮುಚ್ಚಲಾಗಿದೆ. ಅಲ್ಪ ಸ್ವಲ್ಪ ಉಳಿದ ಕೆರೆಗಳಿಗೂ ಕಸ-ಕಡ್ಡಿ, ಕಟ್ಟಡದ ಆವೇಶಗಳು ಕಾರ್ಖಾನೆಯ ಕುಶಲ್ಯ ವಸ್ತುಗಳು, ನಗರದ ಕೊಳಚೆ, ಮೊದಲಾದವುಗಳನ್ನು ಸುರಿದು ತುಂಬಿಸಲಾಗುತ್ತಿದೆ ಜೀವಿಗಳು ಬದುಕದಂತೆ ವಾತಾವರಣವೇ ಕೆಡುವಂತೆ ಮಾಡಲಾಗುತ್ತಿದೆ. ಅದರ ಪರಿಣಾಮವನ್ನು ಈಗೀಗ ಅನುಭವಿಸುವಂಥಾಗಿದೆ ಕೆರೆಗಳಲ್ಲಿ ನೊರೆ ತುಂಬುವುದು, ದುರ್ವಾಸನೆ ಹರಡುವುದು, ಬೆಂಕಿ ಕಾಣಿಸುವುದು ಇತ್ಯಾದಿ ಆರಂಭವಾಗಿದೆ.

ಮಾನವರ ಅತಿಯಾಸೆ, ದುಷ್ಟತೆ ಪರಿಣಾಮವನ್ನು ಅವನೇ ಅನುಭವಿಸುವಂಥಾಗಿದೆ. ಪ್ರಕೃತಿ ಮೋನಿದ್ದಿದೆ ಸೇಡು ತೀರಿಸಿಕೊಳ್ಳುತ್ತಿದೆ ಶೀಘ್ರದಲ್ಲಿ ಈ ಸ್ಥಿತಿಯನ್ನು ಪರಿಸರದಲ್ಲಿ ಇನ್ನಷ್ಟು ದುಷ್ಪರಿಣಾಮಗಳು ಎದೆಗೊಡಬೇಕಾಗುತ್ತದೆ.

ಕೆರೆಗಳಲ್ಲಿ ತುಂಬಿರುವ ಕೊಳೆಯನ್ನು ತೆಗೆಯಬೇಕು, ಅತ್ಯಾಕ್ರಮಣ ತೆಗೆಯಬೇಕು ಕಾರ್ಖಾನೆಗಳ ಊರಿನ ಕೊಳಚೆಗಳು ಕೆರೆಗೆ ಸೇರದಂತೆ ಎಚ್ಚರವಹಿಸಬೇಕು. ಮಳೆ ನೀರು ಸಂಗ್ರಹವಾಗುವಂತೆ ವ್ಯವಸ್ಥೆ ಮಾಡಬೇಕು. ಕೆರೆಯ ಸುತ್ತಲೂ ಬೇಲಿಯನ್ನು ನಿರ್ಮಿಸಬೇಕು. ಗಿಡಮರಗಳನ್ನು, ಉದ್ಯಾನವನಗಳನ್ನು ಬೆಳೆಸಬೇಕು ಒತ್ತುವರಿ ಮಾಡಿ ಕೆರೆಗಳನ್ನು ಹಾಳು ಮಾಡದಂತೆ ಜನರು ಎಚ್ಚರ ವಹಿಸಬೇಕು ಕೆರೆಗಳಿದ್ದರೆ ಊರಿಗೆ ಅಂದ ಜೀವಿಗಳಿಗೆ ರಕ್ಷಣೆ ಆಸರೆ ಎನ್ನುವುದನ್ನು ತಿಳಿಯಬೇಕು ಕೆರೆಗಳು ಎಲ್ಲರಿಗೂ ಆಶ್ರಯವಾಗಿವೆ ನಾವು ಕೆರೆಗಳನ್ನು ನಾಶ ಮಾಡದೆ ಅವುಗಳನ್ನು ಉಳಿಸಬೇಕು.

Answered by poonammishra148218
0

Answer:

ಹೀಗೊಂದು ಕಾಲವಿತ್ತು. ಊರಿನಲ್ಲಿ ಮನೆಯ ಗಂಡಸರನ್ನು ಬೆಳಗ್ಗೆ ಅವರವರ ಕೆಲಸಕಾರ್ಯಗಳಿಗೆ ಕಳಿಸಿಕೊಟ್ಟ ಮೇಲೆ, ಊರಿನ ಹೆಣ್ಣುಮಕ್ಕಳು, ಹೆಂಗಸರು ತೊಳೆಯಲಿರುವ ಬಟ್ಟೆಗಳನ್ನು, ಪಾತ್ರೆಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ಕೆರೆಯ ಕಡೆಗೆ ದೌಡಾಯಿಸುತ್ತಿದ್ದರು.

Explanation:

Step 1: ಸರೋವರಗಳನ್ನು ಅತ್ಯಂತ ಪ್ರಾಯೋಗಿಕ ಮತ್ತು ಸ್ಪಷ್ಟವಾದ ಅರ್ಥದಲ್ಲಿ ಜಲಮೂಲ ಎಂದು ವಿವರಿಸಬಹುದು, ಇದು ಸ್ಥಳೀಯ ನೀರಿನ ಸಂಪನ್ಮೂಲವಾಗಿದೆ.

ಇದು ಸರೋವರ ಇರುವ ಪ್ರದೇಶದ ಜೀವವೈವಿಧ್ಯತೆಯನ್ನು ಸುಧಾರಿಸುತ್ತದೆ ಮತ್ತು ಸಂರಕ್ಷಿಸಲು ಸಹಾಯ ಮಾಡುತ್ತದೆ.

ಪ್ರದೇಶದ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಸರೋವರಗಳು ಆರ್ಥಿಕತೆಗೆ ಸಹಾಯ ಮಾಡುತ್ತವೆ. ಸರೋವರಗಳನ್ನು ಯಾವಾಗಲೂ ಮನರಂಜನಾ ಸ್ಥಳವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಅವು ಪ್ರವಾಸೋದ್ಯಮಕ್ಕೆ ಒಲವು ತೋರುತ್ತವೆ. ಅದಕ್ಕಾಗಿಯೇ ಅವುಗಳನ್ನು ಸಂರಕ್ಷಿಸಬೇಕಾಗಿದೆ.

Step 2: ಆರೋಗ್ಯಕರ ಸರೋವರಗಳು ಮತ್ತು ಅವುಗಳ ತೀರಗಳು ನಮಗೆ ಹಲವಾರು ಪರಿಸರ ಪ್ರಯೋಜನಗಳನ್ನು ಒದಗಿಸುತ್ತವೆ ಆದರೆ ಅವು ನಮ್ಮ ಜೀವನದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತವೆ ಮತ್ತು ಅವು ನಮ್ಮ ಆರ್ಥಿಕತೆಯನ್ನು ಬಲಪಡಿಸುತ್ತವೆ.

Step 3:ಸರಿಯಾದ ಸರೋವರದ ಕಾರ್ಯವು ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸುವ ಮೂಲಕ ಮತ್ತು ಕೊರತೆಯ ಸಮಯದಲ್ಲಿ ಅದನ್ನು ಬಿಡುಗಡೆ ಮಾಡುವ ಮೂಲಕ ಪ್ರವಾಹ ಮತ್ತು ಅನಾವೃಷ್ಟಿಯ ಪರಿಣಾಮವನ್ನು ತಗ್ಗಿಸಬಹುದು. ಸರೋವರಗಳು ಅಂತರ್ಜಲವನ್ನು ಮರುಪೂರಣಗೊಳಿಸಲು ಸಹ ಕೆಲಸ ಮಾಡುತ್ತವೆ, ಕೆಳಭಾಗದ ಜಲಮೂಲಗಳ ನೀರಿನ ಗುಣಮಟ್ಟವನ್ನು ಧನಾತ್ಮಕವಾಗಿ ಪ್ರಭಾವಿಸುತ್ತವೆ ಮತ್ತು ಪ್ರದೇಶದ ಜೀವವೈವಿಧ್ಯತೆ ಮತ್ತು ಆವಾಸಸ್ಥಾನವನ್ನು ಸಂರಕ್ಷಿಸುತ್ತವೆ. ಸರೋವರದ ಪರಿಸರ ಒಗಟು ತುಣುಕುಗಳು ಒಟ್ಟಿಗೆ ಸೇರಿದಾಗ ಮತ್ತು ಸರೋವರವು ಕೆಲಸ ಮಾಡಲು ಸಾಧ್ಯವಾದರೆ, ದೊಡ್ಡ ಚಿತ್ರವು ಸ್ಪಷ್ಟವಾಗಿದೆ, ಈ ಪ್ರಮುಖ ಸಂಪನ್ಮೂಲದಿಂದ ನಾವೆಲ್ಲರೂ ಪ್ರಯೋಜನ ಪಡೆಯುತ್ತೇವೆ.

Learn more about similar questions visit:

https://brainly.in/question/48313064

https://brainly.in/question/14340167?referrer=searchResults

#SPJ3

Similar questions