India Languages, asked by vspratham671, 3 days ago

ಎಲ್ಲಾ ಸಮಾಸಗಳ ಸೂತ್ರವನ್ನು ತೂರಿಸಿ​

Answers

Answered by yuvikamd18
0

Answer:

ಸಮಾಸಗಳು

(೧) ಅರಸನ-ಮನೆಯಲ್ಲಿ – ಸಂಭ್ರಮ ಬಹಳ

ಈ ವಾಕ್ಯದಲ್ಲಿ ಕೆಳಗೆ ಗೆರೆ ಹಾಕಿರುವ ‘ಅರಸನ’ ಎಂಬ ಪದದ, ‘ಮನೆಯಲ್ಲಿ’ ಎಂಬ ಪದದ ಅರ್ಥಗಳೂ ಬೇರೆಬೇರೆ. ಆದರೆ ಅದೇ ಅರ್ಥವೇ ಬರುವಂತೆ ಅವೆರಡು ಪದಗಳನ್ನು ‘ಅರಮನೆಯಲ್ಲಿ’ ಎಂಬ ಒಂದೇ ಪದ ಮಾಡಿ ಹೇಳಬಹುದು. ಹೀಗೆ ಒಂದೇ ಪದ ಮಾಡಿ ಹೇಳಿದುದರಿಂದ ಸ್ವಲ್ಪ ಕಾಲವೂ, ಧ್ವನಿಯೂ, ಬರೆಯುವ ಶ್ರಮವೂ ಕಡಿಮೆಯಾಯಿತಲ್ಲವೆ? ಅರ್ಥವೂ ಕೆಡುವುದಿಲ್ಲ.

(೨) ಹಿರಿದಾದ ತೊರೆಯು ಹರಿಯುತ್ತಿತ್ತು-

ಈ ವಾಕ್ಯದಲ್ಲೂ, ‘ಹಿರಿದಾದ’ ‘ತೊರೆಯು’ ಎಂಬೆರಡು ಪದಗಳಿವೆ. ಇವನ್ನು ಮೇಲಿನಂತೆ ‘ಹೆದ್ದೊರೆ’ ಹರಿಯುತ್ತಿತ್ತು ಎನ್ನಬಹುವುದು.

(೩) ಕಾಲಿನ ಬಳೆಗಳನ್ನು ತಂದನು-

ಈ ವಾಕ್ಯದಲ್ಲೂ ‘ಕಾಲಿನ’ ‘ಬಳೆಗಳನ್ನು’ ಎಂಬೆರಡು ಪದಗಳನ್ನು ‘ಕಾಲುಬಳೆಗಳನ್ನು’ ತಂದನು-ಎಂದು ಹೇಳಬಹುದು.

(೪) ಈ ಊರ ಜನರು ಕೆರೆಗಳ, ಕಟ್ಟೆಗಳ, ಬಾವಿಗಳ, ಸೌಲಭ್ಯ ಪಡೆದಿದ್ದಾರೆ.-

ಇಲ್ಲಿ ಕೆರೆಗಳ, ಕಟ್ಟೆಗಳ, ಬಾವಿಗಳ ಎಂಬ ಈ ಮೂರು ಪದಗಳನ್ನು ‘ಕೆರೆಕಟ್ಟೆಬಾವಿಗಳ’ ಎಂದು ಒಂದು ಪದ ಮಾಡಿ ಹೇಳಬಹುದು. ಹೀಗೆ ಎರಡು, ಮೂರು ಅಥವಾ ಹೆಚ್ಚು ಪದಗಳನ್ನು ಒಂದೇ ಪದ ಮಾಡಿ ಹೇಳಿದಾಗ ನಮಗೆ ಕಾಲದ ಉಳಿತಾಯವಾಗುತ್ತದೆ; ಬರೆಯುವುದಕ್ಕೆ ಉಪಯೋಗಿಸುವ ಶಕ್ತಿಯ ಉಳಿತಾಯವಾಗುತ್ತದೆ. ಅನ್ನುವುದಕ್ಕೆ (ಹೇಳುವುದಕ್ಕೆ) ಉಪಯೋಗಿಸುವ ಧ್ವನಿಶಕ್ತಿಯ ಉಳಿತಾಯವಾಗುತ್ತದೆ. ಮನುಷ್ಯನು ಯಾವಾಗಲೂ ಸೌಲಭ್ಯಾಕಾಂಕ್ಷಿಯಲ್ಲವೆ? ಭಾಷೆಯಲ್ಲೂ ಈ ತರದ ಸೌಲಭ್ಯಗಳನ್ನು ಮನುಷ್ಯ ಮಾಡಿಕೊಳ್ಳುತ್ತಾನೆ. ಆದರೆ ಹೀಗೆ ಎಲ್ಲ ಕಡೆಗೂ ಮೂರು ಪದಗಳನ್ನು ಕೂಡಿಸಿ ಒಂದು ಪದ ಮಾಡಿ ಹೇಳಲು ಶಕ್ಯವಿಲ್ಲ. ಎರಡು ಪದಗಳು ಸೇರಿ ಸಮಸ್ತಪದವಾಗುವುದೇ ಹೆಚ್ಚು. ಕೆಲವು ಕಡೆ ಮೂರು ನಾಲ್ಕು ಪದಗಳೂ ಸೇರಿ ಸಮಸ್ತಪದವಾಗುವುದು.

(೧) ಅರಸನ ಮನೆ – ಇವೆರಡೂ ಪದಗಳನ್ನೂ ಕೂಡಿಸಿ ಒಂದೇ ಪದ ಮಾಡಿ ಹೇಳಿದಾಗ ಅರಸು ಪ್ರಕೃತಿಯ ಮುಂದೆ ಇರುವ ‘ಅ’ ಎಂಬ ಷಷ್ಠೀ ವಿಭಕ್ತಿಯೂ, ಅದರ ನಿಮಿತ್ತವಾಗಿ ಬಂದ ‘ನ’ ಕಾರಾಗಮವೂ, ಹೋಗುವುವು. ಇದೂ ಅಲ್ಲದೆ ಒಮ್ಮೊಮ್ಮೆ ಪ್ರಕೃತಿಯಲ್ಲಿರುವ ‘ಸ’ ಕಾರವೂ ಹೋಗುವುದುಂಟು. ಹೀಗೆ ಇವೆಲ್ಲ ಲೋಪವಾಗಿ ‘ಅರ’ ಎಂಬ ಪ್ರಕೃತಿಯ ಒಂದು ಭಾಗವುಳಿದು ‘ಅರಮನೆ’ ಎಂಬ ಅರಸನ ಸಂಬಂಧವಾದ ಮನೆ ಎಂಬ ಅರ್ಥ ಬರುವ ಸಮಸ್ತಪದವು ಸಿದ್ಧವಾಯಿತು.

(೨) ಹಿರಿದಾದ ತೊರೆ – ಇವೆರಡೂ ಪದಗಳನ್ನು ಸೇರಿಸಿ ಒಂದು ಪದ ಮಾಡಿ ಹೇಳಿದಾಗ ‘ಹಿರಿದು’ ಎಂಬ ಪ್ರಕೃತಿಯು ‘ಹೆದ್’ ಎಂಬ ರೂಪ ಧರಿಸುವುದು. ‘ತೊರೆ’ ಎಂಬಲ್ಲಿಯ ಮೊದಲ ವ್ಯಂಜನವಾದ ‘ತ್’ ಕಾರವು ದಕಾರವಾಗಿ ‘ಹೆದ್ದೊರೆ’ ಎಂಬ ಸಮಸ್ತಪದವಾಯಿತು. ಹೀಗೆಲ್ಲ ಮೂಲಪದಗಳು ರೂಪಾಂತರ ಹೊಂದಿ ಸಮಸ್ತಪದಗಳಾಗುವುದುಂಟು.

(೩) ಕಾಲಿನ ಬಳೆ - ಇವೆರಡು ಪದಗಳನ್ನು ಸೇರಿಸಿ ಸಮಸ್ತ ಪದ ಮಾಡಿ ಹೇಳುವಾಗ ‘ಕಾಲು’ ಎಂಬ ಪ್ರಕೃತಿಯ ಮುಂದೆ ಬಂದ ‘ಅ’ ವಿಭಕ್ತಿಯೂ, ಆ ವಿಭಕ್ತಿಯ ನಿಮಿತ್ತವಾಗಿ ಬಂದ ‘ನ’ ಕಾರಾಗಮವೂ ಲೋಪವಾಗಿ ‘ಕಾಲು’ ಎಂಬ ಪ್ರಕೃತಿ ಮಾತ್ರ ಉಳಿದು ‘ಕಾಲುಬಳೆ’ ಎಂಬ ಸಮಸ್ತಪದ ಸಿದ್ಧವಾಯಿತು.

(೪) ಕೆರೆಗಳ, ಕಟ್ಟೆಗಳ, ಬಾವಿಗಳ ಎಂಬ ಈ ಮೂರು ಪದಗಳಲ್ಲಿ ಇರುವ ‘ಅ’ ಎಂಬ ಷಷ್ಠೀವಿಭಕ್ತಿಯೂ, ಬಹುವಚನಗಳನ್ನು ಸೂಚಿಸುವ ‘ಗಳು’ ಎಂಬ ಆಗಮವೂ ಲೋಪವಾಗಿ ‘ಕೆರೆ, ಕಟ್ಟೆ, ಬಾವಿ’ ಎಂಬ ಪ್ರಕೃತಿ ಮಾತ್ರ ಉಳಿದು ‘ಕೆರೆಕಟ್ಟೆಬಾವಿ’ ಎಂಬ ಸಮಸ್ತಪದ ಸಿದ್ಧವಾಗುವುದು. ಮುಂದೆ ಗಳು ಎಂಬ ಬಹುವಚನ ಸೂಚಕ ಆಗಮವೂ ಅ ಎಂಬ ಷಷ್ಠೀವಿಭಕ್ತಿಯೂ ಸೇರಿ ಕೆರೆಕಟ್ಟೆಬಾವಿಗಳ ಎಂಬ ಷಷ್ಠೀವಿಭಕ್ತ್ಯಂತ ಸಮಸ್ತಪದವು ಸಿದ್ಧವಾಗುವುದು. ಮೇಲಿನ ವಿವರಣೆಯಿಂದ ಸಮಸ್ತಪದಗಳು ಹೇಗೆ ಸಿದ್ಧಿಸುತ್ತವೆಂಬುದರ ಕಲ್ಪನೆಯಾಗುವುದು. ಸೇರುವ ಪದಗಳು ಅರ್ಥಸಂಬಂಧ ಪಡೆದಿರಬೇಕು. ಒಮ್ಮೊಮ್ಮೆ ಪ್ರಕೃತಿಗಳೂ ವಿಕಾರಗಳಾಗುವುದುಂಟು. ‘ಅರಸು’ ಎಂಬ ಪ್ರಕೃತಿಯು ‘ಅರ’ ಎಂದೂ, ‘ಹಿರಿದು’ ಎಂಬುದು ‘ಹೆದ್’ ಎಂದೂ ಉಳಿದಿರುವುದನ್ನು ತಿಳಿದಿದ್ದೀರಿ. ಇಂಥ ಸಮಸ್ತ ಪದವನ್ನೇ ‘ಸಮಾಸ’ ಎಂದು ಹೇಳುತ್ತಾರೆ. ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

"ಸಮಾಸ-ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾಗುವುದೇ ಸಮಾಸ."

ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವಪದವೆಂದೂ, ಎರಡನೆಯ ಪದವು ಉತ್ತರಪದವೆಂದೂ ಕರೆಯಿಸಿಕೊಳ್ಳುವುದು. ಸಮಸ್ತ ಪದವನ್ನು ಬಿಡಿಸಿ ಬರೆಯುವುದಕ್ಕೆ 'ವಿಗ್ರಹವಾಕ್ಯ' ಎನ್ನುವರು.

Similar questions