ಕರೀಮ ಸಣ್ಣ ಪ್ರಾಯದಲ್ಲಿ _____ ಸಹಕಾರಿ ಸಂಘವೊಂದನ್ನು ಸ್ಥಾಪಿಸಿದನು .
Answers
Answer:
೧೯೧೨ರ ಸಹಕಾರಿ ಸಂಘಗಳ ಕಾಯ್ದೆಯ ಪ್ರಕಾರ ಭಾರತದಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಲು ಕನಿಷ್ಟ ಸದಸ್ಯರ ಸಂಖ್ಯೆ ಹತ್ತು ಇರತಕ್ಕದ್ದು.ಇದನ್ನು ಸಹಕಾರಿ ಸಂಘಗಳ ಕಾಯ್ದೆಯ ಪ್ರಕಾರ ನೋಂದಾಯಿಸಲೇಬೇಕು.ಷೇರುಗಳನ್ನು ಸದಸ್ಯರಿಗೆ ನೀಡುವುದರ ಮುಖಾಂತರ ಬಂಡವಾಳವನ್ನು ಸಂಗ್ರಹಿಸುತ್ತದೆ.
Explanation:
ವ್ಯಾಖ್ಯಾನಗಳು
ಈ.ಹೆಚ್.ಕಲ್ವರ್ಟ್ ಅವರ ಪ್ರಕಾರ "ಸಹಕಾರವು ಒಂದು ಪ್ರಕಾರದ ವ್ಯವಹಾರಿ ಸಂಘಟನೆಯಾಗಿದ್ದು,ಅದರಲ್ಲಿರುವ ವ್ಯಕ್ತಿಗಳು ತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸಮಾನತೆಯ ದೃಷ್ಠಿಯಿಂದ ಮಾನವರಾಗಿ ಸ್ವಯಂ ಪ್ರೇರಣೆಯಿಂದ ಒಂದುಗೂಡಿದ ಸಂಸ್ಥೆಯಾಗಿದೆ".
ಸಹಕಾರಿ ಸಂಘಗಳ ಲಕ್ಷಣಗಳೆಂದರೆ:-
೧.ಸ್ವಯಂ ಪ್ರೇರಣೆಯ ಸಂಘಟನೆ:- ಸಹಕಾರಿ ಸಂಘದ ಸದಸ್ಯತ್ವ ಐಚ್ಛಿಕವಾಗಿದೆ.ಸದಸ್ಯತ್ವವು ಮುಕ್ತವಾಗಿದ್ದು,ಯಾವುದೇ ಬೇದವಿಲ್ಲದೆ ಎಲ್ಲಾ ವಯಸ್ಕರಿಗೂ ಸದಸ್ಯರಾಗಲು ಅವಕಾಶವಿದೆ.ಸದಸ್ಯರು ತಮಗೆ ಬೇಡವೆನಿಸಿದಾಗ ಸಂಘವನ್ನು ಬಿಟ್ಟುಹೋಗಬಹುದು.
೨.ಕಾನೂನಿನ ಅಸ್ತಿತ್ವ :- ಈ ಸಂಘದಲ್ಲಿ ನೋಂದಣಿ ಕಡ್ಡಾಯವಾಗಿದೆ. ಆದ್ದರಿಂದ ಸದಸ್ಯರಿಂದ ಪ್ರತ್ಯೇಕ ಅಸ್ತಿತ್ವ ಹೊಂದಿರುತ್ತದೆ. ಪ್ರತ್ಯೇಕ ಅಸ್ತಿತ್ವ ಹೊಂದಿರುವುದರಿಂದ ಅವರವರ ಹೆಸರಿನಲ್ಲೇ ವ್ಯವಹಾರವನ್ನು ನಡೆಸುತ್ತದೆ.ಅಲ್ಲದೇ ತನ್ನ ಹೆಸರಿನಲ್ಲೇ ಮೊಕದ್ದಮೆ ಹೂಡಬಹುದಾಗಿದೆ.ಸದಸ್ಯರ ಆಗಮನ ಮತ್ತು ನಿರ್ಗಮನದಿಂದ ವ್ಯವಹಾರಕ್ಕೆ ಧಕ್ಕೆ ಇಲ್ಲ.
೩.ನಿಯಮಿತ ಹೊಣೆಗಾರಿಕೆ:-ಸಹಕಾರಿ ಸಂಘಗಳಲ್ಲಿ ಸದಸ್ಯರ ಹೊಣೆಗಾರಿಕೆಯು ಅವರು ಆ ಸಂಸ್ಥೆಗೆ ನೀಡಿದ ಬಂಡವಾಳದ ಮೊತ್ತಕ್ಕೆ ಸೀಮಿತವಾಗಿರುತ್ತದೆ. ಆದಾಗ್ಯೂ ಕೆಲವು ಸಂದರ್ಭಗಳಲ್ಲಿ ಸದಸ್ಯರು ಅನಿಯಮಿತ ಭಾರ ಹೊತ್ತುಕೊಳ್ಳಬೇಕಾಗುತ್ತದೆ.
೪.ನಿಯಂತ್ರಣ:-ಸಂಘದ ಆಡಳಿತವು ಚುನಾಯಿತ ಪ್ರತಿನಿಧಿಗಳ ವ್ಯವಸ್ಥಾಪಕ ಮಂಡಳಿಯ ಕೈಯಲ್ಲಿರುತ್ತದೆ.ಒಬ್ಬರಿಗಾಗಿ ಎಲ್ಲರೂ ಮತ್ತು ಎಲ್ಲರಿಗಾಗಿ ಒಬ್ಬರು ಎಂಬ ಪ್ರಜಾಪ್ರಭುತ್ವದ ತತ್ವದಡಿಯಲ್ಲಿ ವ್ಯವಸ್ಥಾಪಕ ಮಂಡಳಿ ರಚನೆಯಾಗಿರುವುದರಿಂದ ಪ್ರಜಾಸತ್ತಾತ್ಮಕ ವ್ಯವಸ್ಥಾಪನೆ ಹೊಂದಿರುತ್ತದೆ.