*ಕನ್ನಡ ನಿಮಗೆಷ್ಟು ಗೊತ್ತು ? *
*ಎಲ್ಲ ಉತ್ತರಗಳು ‘ಣಿ’ಯಿಂದ ಮುಕ್ತಾಯ*
1. ಕೃಷ್ಣನ ಹೆಂಡತಿ
2. ದೂರ ಎಸೆತಕ್ಕೆ ಬಳಸುವ ಯುದ್ಧ ಸಾಧನ
3. ಇಂದ್ರಜಾಲ ವಿದ್ಯೆ
4. ಸೂರ್ಯ
5. ಭೂಮಿ
6. ಪಾರ್ವತಿ
7. ದೇವಸ್ಥಾನದ ಕೊಳ
8. ಇಂದ್ರನ ಹೆಂಡತಿ
9. ಮಳೆ ನಕ್ಷತ್ರಗಳಲ್ಲಿ ಒಂದು
10. ನರಕ ಮಾರ್ಗದಲ್ಲಿರುವ ನದಿ
11. ಕರ್ನಾಟಕದಲ್ಲೂ ಇರುವ ಒಂದು ಜನಾಂಗ
12. ಖಡ್ಗದ ಹೊಡೆತ ತಡೆಯಲು ಬಳಸುತ್ತಿದ್ದ ಸಾಧನ
13. ಗಲ್ಲಿ / ಕೇರಿ
14. ಮೇಲೆ ಹತ್ತಲು ಇದು ಬೇಕೇ ಬೇಕು
15. ಹೆಣ್ಣು ಜಿಂಕೆ
16. ಹೆಂಡತಿ
17. ಉಗ್ರ ಹೊಡೆದಾಟ/ ತೀವ್ರ ಸ್ಪರ್ಧೆ
18. ಹೆಣ್ಣು ದೆವ್ವ
19. ಬಯಸಿದ್ದನ್ನು ಕೊಡುವ ದೇವಲೋಕದ ದಿವ್ಯ ರತ್ನ
20. ಹೊಗೆ ಗೂಡು
21. ಮಹಾಭಾರತದಲ್ಲಿ ಸೈನ್ಯದ ಮಾಪನ / ಅಳತೆ
22. ರೇಡಿಯೋ / ಬಾನುಲಿ
23. ಮದುವೆಯಾದವಳ ಮಂಗಲ ಆಭರಣ
24. ಒಂದು ಜಾತಿಯ ಧಾನ್ಯದ ಕಾಳು
25. ನಿವೃತ್ತಿ ವೇತನ
ಉತ್ತರಿಸಿ
Answers
Answered by
4
Answer:
1.ರುಕ್ಮಿಣಿ
2.ಕ್ಷಿಪಣಿ
3.ಯಕ್ಷಿಣಿ
4. ತರಣಿ
5.ಧರಣಿ
6. ಶೂಲಿಣಿ
7.ಕಲ್ಯಾಣಿ
8.ಇಂದ್ರಾಣಿ
9. ಭರಣಿ
10. ವೈತರಣಿ
11.ಲಂಬಾಣಿ
12.ಗುರಾಣಿ
13. ಓಣಿ
14. ಏಣಿ
15.ಹರಿಣಿ
16. ಸಹಧರ್ಮಣಿ
17. ಹಣಾ ಹಣಿ
18. ಡಾಕಿಣಿ
19 .ಚಿಂತಾಮಣಿ
20. ಚಿಮಣಿ
21.ಅಕ್ಷೋಹಿಣಿ
22.ಆಕಾಶವಾಣಿ
23.ಕರಿಮಣಿ
24.ಬಟಾಣಿ
25. ಪಿಂಚಣಿ
ಧನ್ಯವಾದಗಳು.
kpdp89051 • Genius✔️✔️
Similar questions