1: ನಮ್ಮ ಸುಂದರ ಕನ್ನಡ ನಾಡಿನ ಬಗ್ಗೆ ಪುಟ್ಟ
ಪ್ರಬಂಧವನ್ನು ಬರೆಯಿರಿ
Answers
Explanation:
ನಮ್ಮ ನಾಡು ಸಂಸ್ಕೃತಿಯ ನೆಲೆವೀಡು. ಇದು ಸಾಧಕರ ಕರ್ಮಭೂಮಿ. ನಾಡು - ನುಡಿ - ಸಂಸ್ಕೃತಿಗಳಿಗಾಗಿ ಸರ್ವಸ್ವದೊಂದಿಗೆ ಜೀವವನ್ನೂ ತೆತ್ತವರ ಮಣ್ಣಿದು. ಶತಮಾನಗಳ ಹಿಂದೆ ಮದರಾಸು ಸರಕಾರದ ವ್ಯಾಪ್ತಿಯಲ್ಲಿದ್ದುದರಿಂದ ಅಲ್ಲಿನ ಪ್ರಭಾವ, ನಂತರ ಕರ್ನಾಟಕದ ಪ್ರೇರಣೆ, ಅಲ್ಲಿಂದ ನಂತರ ಕೇರಳಕ್ಕೆ ಸೇರಿಕೊಂಡ ಬಳಿಕ ಮಲೆಯಾಳಂ ಮನೆ-ಮನಗಳ ಆವರಣ. ಹೀಗೆ ಭೌಗೋಳಿಕವಾಗಿ ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಗೆ - ಕಲಾವಂತಿಕೆಗೆ ಹಲವು ಮಜಲುಗಳು - ಕವಲುಗಳು. ಸುಸಂಸ್ಕೃತವಾದುದು, ಆರೋಗ್ಯಪೂರ್ಣವಾದುದು, ಸಕಾರಾತ್ಮಕವಾದುದು ಎಲ್ಲಿಂದ ಲಭಿಸಿದರೂ ನಮಗದು ಸ್ವೀಕೃತ. ಈ ಎಲ್ಲ ಅಂಶಗಳನ್ನು ಒಂದೇ ಕಡೆ ನೀಡುವ ನಮ್ಮ ಕನ್ನಡ ನಾಡು ಯತ್ನವಿದು.ಸೀಮಿತತೆಯ ನಡುವೆಯೂ ಸಂಸ್ಕೃತಿ-ಕಲೆಗಳ ಸುಗಂಧವನ್ನು ಬೀರುವ ವರಕರ್ಪೂರ ಕವಳದ ತಟ್ಟೆಯಿದು. ನೀವೂ ಮೆಚ್ಚಿಕೊಂಡ ಕಲಾ-ಸಾಂಸ್ಕೃತಿಕ ವಿಚಾರಗಳ ಕುರಿತು ಈ ಪುಟದಲ್ಲಿ ಬರೆಯಬಹುದು. ಸುಂದರ ಫೊಟೋಗಳಿದ್ದರೆ ಚಂದದ ಬರಹಗಳಿಗೊಂದು ಬಂಗಾರದ ಆವರಣವಾದೀತು. ಹಾಗಾಗಿಯೇ ಚಂದದ ನುಡಿ, ಅಂದದ ಅಡಿ, ಇದು ನಮ್ಮ ಕನ್ನಡ ನಾಡು
ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಕನ್ನಡ... ಕನ್ನಡ... ಕಸ್ತೂರಿ... ಕನ್ನಡ... ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. ಬದುಕಿದು ಜಟಕಾಬಂಡಿ, ಇದು ವಿಧಿ ಓಡಿಸುವ ಬಂಡಿ... ಬದುಕಿದು ಜಟಕಾ ಬಂಡಿ, ವಿಧಿ ಗುರಿ ತೋರಿಸುವ ಬಂಡಿ ಎಂದು ಅಂದು ಡಾ.ರಾಜ್ ಕುಮಾರ್ ಹಾಡಿದ್ದರು. ಹೌದು ನಮ್ಮ ಕನ್ನಡ ನಾಡು-ನುಡಿಯಲ್ಲಿ ಆ ಒಂದು ಶ್ರೇಷ್ಠತೆ ಇದೆ. "ಕನ್ನಡ ಭಾಷೆ ನಮ್ಮ ಸಂಸ್ಕೃತಿ" ಇಂದು ನಾವು 62 ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ನಾವು ನಮ್ಮ ಕನ್ನಡದ ಸುಗ್ಗಿಯನ್ನು ಕೇವಲ ನವೆಂಬರ್ ಮಾಸದಲ್ಲಿ ಮಾತ್ರವಲ್ಲ ಪ್ರತಿ ದಿನ ಆಚರಿಸಬೇಕು.
ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ನಾಡು. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬಂತೆ ನಾವು ದೇಶದ ಯಾವುದೇ ಮೂಲೆಯಲ್ಲಿದ್ದರು ಕನ್ನಡವನ್ನು ಉಳಿಸಿ, ಬೆಳೆಸುವ ಸಂಸ್ಕೃತಿ ಪ್ರತಿಯೊಬ್ಬನ ಕನ್ನಡಿಗನದಾಗಲಿ.
ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ, ಅದು ಕರುನಾಡ ನೆಲ, ಜಲ, ಜನ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡಿದೆ. ಕರುನಾಡು ಸ್ವರ್ಗದ ಸೀಮೆ-ಕಾವೇರಿ ಹುಟ್ಟಿನ ನಾಡು. ಕಲ್ಲಲ್ಲಿ ಕಲೆಯನು ಕಂಡ-ಬೇಲೂರ ಶಿಲ್ಪದ ಬೀಡು. ಬಸವೇಶ್ವರ, ರನ್ನ-ಪಂಪರ ಕವಿವಾಣಿಯ ನಾಡು ನಮ್ಮ ಕನ್ನಡ ನಾಡು. ಚಾಮುಂಡಿ ರಕ್ಷೆಯು ನಮಗೆ- ಗೊಮ್ಮಟೇಶ್ವರ ಕಾವಲು ಇಲ್ಲಿ. ಶೃಂಗೇರಿ ಶಾರದೆ ವೀಣೆ- ರಸತುಂಗೆ ಆಗಿದೆ ಇಲ್ಲಿ. ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು. ಇದೆ ನಾಡು- ಇದೆ ಭಾಷೆ ಎಂದೆಂದೂ ನನ್ನದಾಗಿರಲಿ ಎಂಬ ಎಸ್.ಪಿ.ಬಿ ಅವರ ಗಾಯನದಂತೆ ಎಲ್ಲೇ ಇರಲಿ ಹೇಗೆ ಇರಲಿ ನಮ್ಮ ಉಸಿರಲ್ಲಿ ಕನ್ನಡ ಸದಾ ಅಚ್ಚ ಹಸಿರಾಗಿರಲಿ ಎಂಬುದು ನಮ್ಮ ಆಶಯ.