1. ಇವುಗಳಲ್ಲಿ ಯಣ್ ಸಂಧಿಗೆ ಉದಾಹರಣೆಯಾದ ಪದವಿದು :
(ಎ) ಮನ್ವಂತರ
(ಬಿ) ರಾಜ್ಯಾಭಿಷೇಕ
(೧) ಸೂರ್ಯೋದಯ
(ಡಿ) ಸದ್ವಂಶ
Answers
Answered by
2
Answer:
ಯಣ್ ಸಂಧಿ:ರಚನೆಯಲ್ಲಿ 'ಯ' 'ವ' 'ರ' ಈ ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ. ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ 'ಯ್'ಕಾರವೂ, ಉ ಊಕಾರಗಳಿಗೆ 'ವ್'ಕಾರವೂ, ಋಕಾರಕ್ಕೆ 'ರ್'(ರೇಫ)ವೂ ಆದೇಶವಾಗಿ ಬರುತ್ತದೆ. ಇದಕ್ಕೆ ನಾವು 'ಯಣ್ ಸಂಧಿ'ಎನ್ನುತ್ತೇವೆ.
ನಿಯಮ :-
ಇ,ಈ + (ಸವರ್ಣವಲ್ಲದ ಸ್ವರ) = ಯ್
ಉ,ಊ + (ಸವರ್ಣವಲ್ಲದ ಸ್ವರ) = ವ್
ಋ + (ಸವರ್ಣವಲ್ಲದ ಸ್ವರ) = ರ್
ಉದಾಹರಣೆ :-
ಅತಿ + ಅಂತ = ಅತ್ಯಂತ
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯತೀತ
ಕೋಟಿ +ಅಧಿಪತಿ =ಕೋಟ್ಯಾಧಿಪತಿ
ಕೋಟಿ+ ಅಧೀಶ = ಕೋಟ್ಯಾಧೀಶ
ಅತಿ + ಅವಸರ = ಅತ್ಯವಸರ
ಮನು + ಅಂತರ = ಮನ್ವಂತರ
Similar questions