India Languages, asked by vinithavt366, 8 months ago

ಈ ವಾಕ್ಯವನ್ನು ನಕಲು ಮಾಡಿ
1. ನಮ್ಮ ಊರು ನಮಗೆ ಚೆಂದ

IT IS KANNADA LANGUAGE ​

Answers

Answered by sathishnm481
4

ನನ್ನ ಊರು ನನಗೆ ಚಂದ.....

ಹುಟ್ಟಿ ಬೆಳೆದ ಮಣ್ಣಿನಲ್ಲಿ ಪ್ರತಿ ಹೆಜ್ಜೆಗೊಂದು ಕನಸು, ಕಳೆದುಕೊಂಡ ಭಾವ, ಮುನಿಸಿಕೊಂಡ ಪ್ರೇಮ, ವಿರಹದ ನಿಟ್ಟುಸಿರು ಇರುತ್ತದೆ. ನಿಜದ ಪ್ರೀತಿಗೆ, ಭಗ್ನ ಪ್ರೇಮಕ್ಕೆ, ಅನಿರೀಕ್ಷಿತ ಸುಂದರ ಕ್ಷಣಗಳಿಗೆ, ಯಾರದೋ ಸಾವಿಗೆ, ಮತ್ಯಾರದೋ ನೋವಿಗೆ ಮಣ್ಣು ಮೂಕ ಸಾಕ್ಷಿಯಾಗಿರುತ್ತದೆ. ಲಕ್ಷ್ಮೀಶ ತೋಳ್ಪಾಡಿ ಅವರ ‘ಸೌಂದರ್ಯ ಲಹರಿ’ಯಲ್ಲಿ ಬರುವ ಮಗುವಿನ ಅಳುವಿನಲ್ಲಿ ಅಮ್ಮ ಹಾಜರಿ ಹಾಕಿದಳು ಎನ್ನುವ ಸಾಲಿನ ಹಾಗೆ ವ್ಯಕ್ತಿಗಳನ್ನು, ವ್ಯಕ್ತಿತ್ವಗಳನ್ನು ಕೆದಕುತ್ತಾ ಹೋದ ಹಾಗೆ ಪ್ರತಿ ಫ್ರೇಮಿನಲ್ಲೂ ಊರು, ಊರಿನ ಮಣ್ಣು ತನ್ನ ಹಾಜರಿ ಹಾಕುತ್ತಲೇ ಹೋಗುತ್ತದೆ. ಮಧ್ಯ ವಯಸ್ಕರು ಅಥವಾ ವಯಸ್ಸಾದವರು ಬೆಳೆದ ಮಕ್ಕಳು ಸಿಟಿಯಲ್ಲಿ ಸೆಟ್ಲ್ ಆದಾಗ ಊರು ಬಿಟ್ಟು ಬರಲಾರದೆ ಬಂದು, ಹೊಸ ಪರಿಸರಕ್ಕೆ, ಹೊಸ ಮಣ್ಣಿನ ವಾಸನೆಗೆ ಹೊಂದಿಕೊಳ್ಳದೇ ಒದ್ದಾಡುವುದೂ ಕೂಡ ಇದೇ ಕಾರಣಕ್ಕೆ ಅಂತ ಅನಿಸುತ್ತೆ....

bro niv ಕನ್ನಡದವರೇ ಹಾಗಿದ್ದರೆ ನನ್ನ brainlist ಅಂತ mark madi.....

ok na...

Similar questions