India Languages, asked by sweetyrishika25, 4 months ago

ಅಭ್ಯಾಸ ಯೋಗ್ಯ ಗಾದೆಗಳು
1. ಬೆಳೆಯುವ ಪೈರು ಮೊಳಕೆಯಲ್ಲಿ
ಈ‌ ಗಾದೆ ಮಾತುಗೆ ಅ ಅರ್ಥ ಬರೆಯಿರಿ.
Please, I want this in Kannada language only.. Kindly send useful questions and not the unwanted messages so, who ever knows the answer can answer..
Thank you ​

Answers

Answered by sunitakatkade12
1

Answer:

I don't know this language can u ask questions in English or Hindi

Answered by devika2271
4

Answer:

“ಬೆಳೆಯುವ ಸಿರಿ ಮೊಳಕೆಯಲ್ಲಿ”ಎಂಬುದು ಅರ್ಥ ಪೂರ್ಣವಾದ ಗಾದೆ ಮಾತಾಗಿದೆ. ಯಾವುದೇ ಒಂದು ಬೀಜ ಮೊಳಕೆ ಬಿಟ್ಟ ಕೂಡಲೇ ಅದರ ಆರೈಕೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಬೇಕಾದ ಪೋಷಕಾಂಶಗಳನ್ನೂ ನೀಡಬೇಕು. ನೀರು ಗೊಬ್ಬರ ಸರಿಯಾಗಿ ಹಾಕಿ, ಚೆನ್ನಾಗಿ ನೋಡಿಕೊಂಡರೆ ಆ ಮೊಳಕೆಯೊಡೆದ ಬೀಜವು ಸಮೃದ್ದವಾಗಿ ಬೆಳೆದು, ಉತ್ತಮ ಫಸಲನ್ನು ಕೊಡಲು ಸಾಧ್ಯ.

ಅಂತೆಯೇ ಮಕ್ಕಳಿಗೆ ನಾವು ಬಾಲ್ಯದಲ್ಲಿಯೇ ಒಳ್ಳೆಯ ಬುದ್ದಿ, ಸಂಸ್ಕಾರಗಳನ್ನು ನೀಡಬೇಕು. ಮಕ್ಕಳ ಆಸಕ್ತಿಗಳನ್ನು ಗಮನಿಸಬೇಕು. ಅದಕ್ಕೆ ಹೆತ್ತವರು ಪ್ರೋತ್ಸಾಹ ಕೊಡಬೇಕು. ಬೆಳೆಯುವ ಮಕ್ಕಳನ್ನು ಬಾಲ್ಯದಲ್ಲಿಯೇ ಬೇಕಾದಂತೆ ತಿದ್ದಿಕೊಳ್ಳಬೇಕು. “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ” ಎಂಬ ಮಾತಿನಂತೆ ಮಕ್ಕಳನ್ನು ಎಳೆವಯಸ್ಸಿನಲ್ಲೇ ತಿದ್ದಬೇಕು. ಬಾಲ್ಯದಲ್ಲಿ ನಾವು ಕಲಿಸುವ ಎಲ್ಲವನ್ನೂ ಮಗು ಕಲಿತುಕೊಳ್ಳುತ್ತದೆ. ಆದಕಾರಣ ಮಕ್ಕಳಿಗೆ ಬಾಲ್ಯದಿಂದಲೇ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿದರೆ ಮುಂದೆ ಮಕ್ಕಳು ಯಶಸ್ಸಿನ ಗುರಿಯನ್ನು ತಲುಪಬಹುದು. ಒಳ್ಳೆಯ ಸತ್ಪ್ರಜೆಗಳಾಗಿ ಬಾಳಬಹುದು.

Similar questions