ಲೋಪಾ ಸಂಧಿ 10 ಉದಾಹರಣೆ
please answer don't post irrelevant answer
Answers
ಸಂಧಿ ಎಂದರೇನು ?
ಎರಡು ಅಕ್ಷರಗಳ ನಡುವೆ ಕಾಲವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ಬಾರದಂತೆ ಸೇರಿಸಿ ಉಚ್ಚರಿಸುವದಕ್ಕೆ ಸಂಧಿ ಎಂದು ಕರೆಯುತ್ತೇವೆ.
ಲೋಪ ಸಂಧಿ :
ಸ್ವರದ ಮುಂದೆ ಸ್ವರ ಬಂದು ಅರ್ಥ ಕೆಡದಂತೆ ಪೂರ್ವಪದದ ಕೊನೆಯ ಅಕ್ಷರ ಸಂಧಿ ಪದದಲ್ಲಿ ಸ್ವರಬಿಟ್ಟು ಹೋಗುವುದು.
ಉದಾಹರಣೆ :
➛ ಮನದ + ಒಳಗೆ = ಮನದೊಳಗೆ
(ಅ ಎಂಬ ಸ್ವರವು ಸಂಧಿಪದದಲ್ಲಿ ಲೋಪವಾಗಿದೆ).
➛ ನೀರು + ಇಲ್ಲ = ನೀರಿಲ್ಲ
(ಉ ಎಂಬ ಸ್ವರವು ಸಂಧಿಪದದಲ್ಲಿ ಲೋಪವಾಗಿದೆ).
➛ ದೇವರು + ಇಂದ = ದೇವರಿಂದ
(ಉ ಎಂಬ ಸ್ವರವು ಸಂಧಿಪದದಲ್ಲಿ ಲೋಪವಾಗಿದೆ).
➛ ಊರು + ಅಲ್ಲಿ = ಊರಲ್ಲಿ
(ಉ ಎಂಬ ಸ್ವರವು ಸಂಧಿಪದದಲ್ಲಿ ಲೋಪವಾಗಿದೆ).
➛ ಅವನು + ಊರು = ಅವನೂರು
(ಅ ಎಂಬ ಸ್ವರವು ಸಂಧಿಪದದಲ್ಲಿ ಲೋಪವಾಗಿದೆ).
➛ ಬೇರೆ + ಒಬ್ಬ = ಬೇರೊಬ್ಬ
(ಎ ಎಂಬ ಸ್ವರವು ಸಂಧಿಪದದಲ್ಲಿ ಲೋಪವಾಗಿದೆ).
➛ ಊರು + ಊರು = ಊರೂರು
(ಉ ಎಂಬ ಸ್ವರವು ಸಂಧಿಪದದಲ್ಲಿ ಲೋಪವಾಗಿದೆ).
➛ ಅವನ + ಅಲ್ಲಿ = ಅವನಲ್ಲಿ
(ಅ ಎಂಬ ಸ್ವರವು ಸಂಧಿಪದದಲ್ಲಿ ಲೋಪವಾಗಿದೆ).
➛ ಕೇಳು + ಇಲ್ಲ = ಕೇಳಿಲ್ಲ
(ಉ ಎಂಬ ಸ್ವರವು ಸಂಧಿಪದದಲ್ಲಿ ಲೋಪವಾಗಿದೆ).
➛ ತಂದೆ + ಇಲ್ಲ = ತಂದಿಲ್ಲ
(ಎ ಎಂಬ ಸ್ವರವು ಸಂಧಿಪದದಲ್ಲಿ ಲೋಪವಾಗಿದೆ).