10 sentence about teacher in kannada
Answers
ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಗುರುವೊಬ್ಬರು ಬೇಕೇ ಬೇಕು. ಜಗತ್ತಿನಲ್ಲಿ ಅಮ್ಮನ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲ ಸೃಷ್ಟಿ ಎಂದರೆ ಅದು ಶಿಕ್ಷಕರು ಮಾತ್ರ. ವಿದ್ಯೆ, ಜ್ಞಾನ, ಮಾಹಿತಿ ಪಡೆಯುವುದು ಈಗ ಸುಲಭವಾದರೂ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ತಿಳಿ ಹೇಳಲು ಗುರುವೊಬ್ಬರ ಅಗತ್ಯ ಇದ್ದೇ ಇರುತ್ತದೆ. ಸರಳತೆ, ತಾಳ್ಮೆ, ಸಮಗ್ರತೆಯ ಪ್ರತಿರೂಪವಾಗಿ ಶಿಕ್ಷಕರನ್ನು ನಾನು ಕಾಣುತ್ತೇನೆ. ಶಿಕ್ಷಕರೇ ನಿಜವಾದ ಅನುಕರಣೀಯ ವ್ಯಕ್ತಿಗಳು. ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿ ಸರಿ ಮಾರ್ಗವನ್ನು ತೋರುವವರು ಅವರೇ. ಶಾಲಾ ದಿನಗಳಲ್ಲಿ ಶಿಕ್ಷಕರ ದಿನಾಚರಣೆ ತುಂಬಾ ಸಂಭ್ರಮ ದಿನವಾಗಿರುತ್ತಿತ್ತು. ವರ್ಷವಿಡಿ ಶಿಕ್ಷಕರ ಮಾತು ಕೇಳಿಸಿಕೊಳ್ಳುತ್ತಿದ್ದ ನಾವು, ಟೀಚರ್ಸ್ ಡೇ ದಿನ ಶಿಕ್ಷಕರನ್ನು ನಮ್ಮ ಪ್ರೀತಿಯಿಂದ ಕಟ್ಟಿ ಹಾಕುತ್ತಿದ್ದೆವು. ಕೇಕ್ ಕತ್ತರಿಸಿ, ಉಡುಗೊರೆಗಳನ್ನು ನೀಡುತ್ತಿದ್ದೆವು. ಟೀಚರ್ಸ್ ಜತೆ ಹಾಡಿ ನಲಿದು ಖುಷಿ ಪಡುತ್ತಿದ್ದೆವು.
ಮರ್ವಾಡಿ ಸಮುದಾಯದಿಂದ ಬಂದಿರುವ ನನಗೆ ಬೆಂಗಳೂರಿನಲ್ಲಿ ಕನ್ನಡ ಎಷ್ಟು ಮುಖ್ಯ ಎಂಬುದನ್ನು ಹೇಳಿಕೊಟ್ಟ ಗುರು ಮಿಸ್ ಶೀಲಾ. ನನ್ನ ಕನ್ನಡ ಟೀಚರ್. ನಾನು ಸದಾ ಕಾಲ ತಪ್ಪು ತಪ್ಪು ಕನ್ನಡ ಮಾತನಾಡುತ್ತಿದೆ. ಆದರೂ ಅದನ್ನು ತಿದ್ದಿ ಭಾಷೆ ಬಳಕೆ ಹೆಚ್ಚಿದರೆ ಮಾತ್ರ ಉಳಿಯಲು ಸಾಧ್ಯ. ನಿನ್ನ ಸುತ್ತಮುತ್ತಲಿನ ಜನರ ಜತೆ ಆತ್ಮೀಯವಾಗಿ ಬೆರೆಯಲು ಅವರ ಭಾಷೆಯಲ್ಲೇ ಮಾತನಾಡುವುದು ಒಳ್ಳೆ ವಿಧಾನ ಎಂದರು. ಹಾಗಾಗಿ ನಾನು ತಪ್ಪು ತಪ್ಪಾದರೂ ಕನ್ನಡ ಭಾಷೆ ಮಾತನಾಡಲು ಕಲಿತೆ. ಈಗ ಕನ್ನಡಿಗಳಾಗಿಬಿಟ್ಟಿದ್ದೇನೆ. ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ ಶೀಲಾ ಟೀಚರ್ಸ್ ಗೆ ನಮನಗಳು. ಒಟ್ಟಾರೆ, ಶಾಲಾ ದಿನಗಳಲ್ಲಿ ಗುರುಗಳು ಕಲಿಸಿದ ಪಾಠಗಳು ನನಗೆ ಶಾಲಾ ಮಟ್ಟದಲ್ಲಷ್ಟೇ ಅಲ್ಲದೆ ನನ್ನ ಜೀವನದಲ್ಲಿ ಅಭಿವೃದ್ಧಿ ಕಾಣಲು ಕಾರಣವಾಗಿದೆ. ನನ್ನ ಎಲ್ಲಾ ಗುರುಗಳಿಗೆ ಅನಂತಾನಂತ ವಂದನೆಗಳು
Please Mark me Brainlist