ಕರೋನಾ ದಿನಗಳಲ್ಲಿ ನಾವು ಯಾವ ಪಾಠವನ್ನು ಕಲಿತಿದ್ದೇವೆ. 100 ರಿಂದ 120 ಪದಗಳಲ್ಲಿ ಪ್ರಬಂಧ ಬರೆಯಿರಿ
please answer fast preparation for exams if u don't know answer or this language plz Don't touch my question humble request no spamming report will be sent immediately
Answers
Answer:
I THINK IT HAD HELPED YOU
Explanation:
ಜನರಿಗೆ ಅಗತ್ಯ ವಸ್ತುಗಳ ಕೊರತೆಯೂ ಆಗಲಿಲ್ಲ. ದಿನಪೂರ್ತಿ ತೆಗೆದಿರುವ ದಿನಸಿ ಅಂಗಡಿಗಳು, ಬೇಕರಿಗಳು, ತರಕಾರಿ, ಮಾಂಸದಂಗಡಿಗಳು, ಮೆಡಿಕಲ್‌ಗಳು ಜನರ ಅಗತ್ಯಗಳನ್ನು ಪೂರೈಸುತ್ತಿವೆ. ಓಡಾಟ ಮತ್ತು ಕೆಲಸ, ಮದುವೆ ಮತ್ತಿತರ ಕಾರ‍್ಯಕ್ರಮಗಳು ಸ್ಥಗಿತವಾಗಿದ್ದರಿಂದ ಆರ್ಥಿಕ ವಹಿವಾಟು ಕುಸಿದು ಬಿದ್ದಿರುವುದು ವಾಸ್ತವ.ಕೋವಿಡ್-19 ಕಾರಣಕ್ಕೆ ಪೂರ್ವ ನಿಗದಿಯಾಗಿದ್ದ ನೂರಾರು ಮದುವೆಗಳು, ಆರತಕ್ಷತೆಗಳು, ಶುಭ ಸಮಾರಂಭಗಳಿಗೆ ತೀವ್ರ ಅಡ್ಡಿಯಾಗಿದೆ. ಆಹ್ವಾನ ಪತ್ರಿಕೆ ಮುದ್ರಿಸಿ ನಿಗದಿಯಾಗಿದ್ದ ಮದುವೆಗಳು ಕೂಡ ಮುಂದೂಡಲ್ಪಟ್ಟಿವೆ. ಹಬ್ಬ ಹರಿದಿನ, ಜಾತ್ರೆ, ಶುಭ ಸಮಾರಂಭಗಳಿಗೆ ಪ್ರಶಸ್ತವಾಗಿದ್ದ ಕಾಲದಲ್ಲೇ ಅಪ್ಪಳಿಸಿದ ಕೊರೊನಾ ಜನಜೀವನವನ್ನು ಸ್ತಬ್ಧಗೊಳಿಸಿದೆ.
ಇಂತಹದ್ದೊಂದು ಇಕ್ಕಟ್ಟಿನ ಸ್ಥಿತಿಯಿಂದ ಹೊರಬಂದು ಸಹಜ ಜೀವನಕ್ಕೆ ಮರಳಲು ಜನ ಹಂಬಲಿಸುತ್ತಿದ್ದಾರೆ. ಕೆಲಸವಿಲ್ಲದೆ ಮನೆಯಲ್ಲಿಕುಳಿತವರು ಮುಂದಿನ ಬದುಕು ಕಟ್ಟಿಕೊಳ್ಳುವ ಸವಾಲು ಎದುರಿಸುತ್ತಿದ್ದಾರೆ. ಮುರಿದು ಬಿದ್ದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳಲು ಹಲವು ದಿನಗಳೇ ಬೇಕಾಗಿದೆ. ಅಷ್ಟರೊಳಗೆ ಎದುರಾಗುವ ಮಳೆಗಾಲ ತಂದೊಡ್ಡುವ ಸವಾಲುಗಳನ್ನೂ ಎದುರಿಸಬೇಕಿದೆ.ಲಾಕ್‌ಡೌನ್‌ನಿಂದ ತಕ್ಷಣಕ್ಕೆ ಮತ್ತು ಭವಿಷ್ಯದಲ್ಲಿಅತಿಹೆಚ್ಚು ಸಮಸ್ಯೆಗಳಿಗೆ ಒಳಗಾಗುವವರು ಮಧ್ಯಮ ವರ್ಗದ ಜನ. ಆದರೆ, ಲಾಕ್‌ಡೌನ್ ಸಮಯದಲ್ಲಿಭಾರತದ ಬಡತನದ ಮುಖ ಅನಾವರಣಗೊಂಡಿದೆ. ಹೊಟ್ಟೆಪಾಡಿಗೆ ಎಲ್ಲೆಲ್ಲೋ ದುಡಿಯುತ್ತಿದ್ದ ವಲಸೆ ಕಾರ್ಮಿಕರು, ನಿರ್ಗತಿಕರು, ಕಡುಬಡ ಕುಟುಂಬಗಳ ಚಿಂತಾಜನಕ ಸ್ಥಿತಿ ತೆರೆದುಕೊಂಡಿದೆ. ಲಾಕ್‌ಡೌನ್ ಸಮಯದಲ್ಲಿಇಂತಹವರು ಹಸಿವಿನಿಂದ ಬಳಲದಂತೆ ಸರಕಾರ, ಸಂಘ ಸಂಸ್ಥೆಗಳು, ದಾನಿಗಳು ಮಾನವೀಯ ನೆಲೆಯಲ್ಲಿಸ್ಪಂದಿಸಿದ್ದಾರೆ. ಆದರೆ, ಲಾಕ್‌ಡೌನ್ ತೆರವಿನ ನಂತರ ಈ ಜೀವಗಳ ಭವಿಷ್ಯವೇನು? ದುಡಿಮೆಯ ಮಾರ್ಗ ಯಾವುದು? ಹೊಸ ಬದುಕು ಕಟ್ಟಿಕೊಳ್ಳುವುದು ಎಲ್ಲಿಮತ್ತು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸುಲಭವಲ್ಲ. ಧುತ್ತನೆ ಬಂದೆರಗಿದ ಸವಾಲೊಂದಕ್ಕೆ ಎದೆಯೊಡ್ಡಿ ನಿಲ್ಲಲಾಗದೆ ಜಗತ್ತೇ ತತ್ತರಿಸುತ್ತಿರುವಾಗ ಬೀದಿಗೆ ಬಿದ್ದ ಜೀವಗಳನ್ನು ರಕ್ಷಿಸುವವರು ಯಾರು? ಕಾಲವೇ ಉತ್ತರ ಹೇಳಬೇಕಿದೆ.