10th standard 3rd language Kannada state level preparatory examination question paper Karnataka
Answers
ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ
1) ಶಿಶುನಾಳ್ ಶರೀಫರು ಸ್ವಪ್ರಯತ್ನದಿಂದ ಏನನ್ನು ಕಲಿತರು?
2) ಗಾಂಧೀಜಿಯವರು ಕೊಟ್ಟ ಮಂತ್ರ ಯಾವುದು?
3) ರಾಮಸಿಂಗನು ಸಿಪಾಯಿಗಳಿಗೆ ಯಾವ ಮಾತನ್ನು ಸೆರಗಿಗೆ ಗಂಟು ಹಾಕಿಕೊಳ್ಳುವಂತೆ ತಿಳಿಸಿದನು?
4) 'ಸಂಧ್ಯಾರಾಗ' ಪುಸ್ತಕವನ್ನು ಬೀಚಿಯವರು ಏಕೆ ಓದಿದರು?
5) ಬೀಚಿಯವರನ್ನು ಮಂತ್ರಮುಗ್ಧಗೊಳಿಸಿದ ಕೃತಿ ಯಾವುದು?
6) ಸತೀಶ ಕುಲಕರ್ಣಿಯವರು ಕಟ್ತಬಸಿದ ಮನುಕುಲವು ಮೆಚ್ಚುವಂತದ್ದು ಏಕೆ?
7) ಭಿತ ವಿಸ್ಮಿತರಾದ ಕವಿ ಸಿ.ಪಿ.ಕೆ.ಯವರು ಯಾರ ಹಾಗೆ ತತ್ತರಿಸಿದರು?
8) ಪುರಂದರದಾಸರು ಯಾವುದನ್ನು ಉದರ ವೈರಾಗ್ಯವೆಂದಿದ್ದಾರೆ?
9) ಬೇರೆಯವರ ಸಾಲಕ್ಕೆ ಯಾವಾಗ ಹೊಣೆಯಾಗಬೇಕೆಂದು ಕವಿ ಸೋಮನಾಥ್ ಹೇಳಿದ್ದಾರೆ?
10) ಧರ್ಮಪದನಿಗೆ ವಿಷವುಣಿಸಲು ಪ್ರಯತಿಸಿದ್ದೇಕೆ?
ಮೂರೂ-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ
1) ಗೊರೂರನ್ನು ಮಿನಿ ಪೊಲೀಸ್ ನಗರದ ಪೊಲೀಸರು ಹೇಗೆ ಉಪಚರಿಸಿದರು?
2) ಪೊಲೀಸರು ಗೊರೂರನ್ನು ಲಾಕಪ್ಪಿನಲ್ಲಿ ಮಲಗಿಸಲು ಯೋಚಿಸಿದ್ದೇಕೆ?
3) ರಾಮಸಿಂಗನ್ ತಾಯಿ ತುಳಜಾಭಾಯಿಯ ದೇಶಪ್ರೇಮ ಮತ್ತು ತ್ಯಾಗವನ್ನು ಕುರಿತು ಬರೆಯಿರಿ.
4) ಕಿತ್ತೂರು ರಾಣಿ ಚೆನ್ನಮ್ಮ ಸೆರೆಯಾದುದೇಕೆ?
5) ಹೈಸ್ಕೂಲ್ ಗ್ರಂಥಾಲಯದಲ್ಲಿದ್ದ ಪುಸ್ತಕಗಳು ಬೀಚಿಯವರ ಮೇಲೆ ಯಾವ ಪ್ರಭಾವವನ್ನು ಬೀರಲಿಲ್ಲ ಏಕೆ?
6) ಭೌಗೋಳಿಕವಾಗಿ ಭಾರತೀಯರೆಲ್ಲ ಒಂದೇ ಎಂದು ಕವಿ ಕೆ.ಎಸ್. ನಿಸಾರ್ ಅಹಮದ್ ರವರು ಹೇಗೆ ನಿರೂಪಿಸಿದ್ದಾರೆ?
7) ಬೆಳಕಿನ ಸತ್ವ ಮತ್ತು ರಸಕವಿತ್ವ ಒಂದೇ ಎನ್ನುವದಕ್ಕೆ ಕವಿ ಕೆ.ಎಸ್. ನಿಸಾರ್ ಅಹಮದ್ ರವರು ನೀಡಿರುವ ನಿದರ್ಶನಗಳಾವವು?
8) ರೈತನು ಮಳೆರಾಯನಲ್ಲಿ ದನಕರುಗಳು ಹೇಗಾಗಿವೆಯೆಂದು ನಿವೇದಿಸಿಕೊಂಡಿದ್ದಾನೆ?
9) ಮೋಡಗಳನ್ನು ಕಂಡ ರೈತರ ಸಂಭ್ರಮವನ್ನು ಜನಪದರು ವರ್ಣಿಸಿರುವುದು ಮೆಚ್ಚುವಂತದ್ದೇಕೆ?
10) ಈರಪ್ಪ ಎಂ. ಕಂಬಳಿಯವರನ್ನು ಕಂಡ ಸಹ ಪ್ರಯಾಣಿಕರು ಪಕಪಕನೆ ನಗಲು ಕರಣವೇನು?
ಈ ಕೆಳಗಿನ ಹೇಳಿಕೆಗಳನ್ನು ಸಂದರ್ಭದೊಡನೆ ಸ್ವಾರಸ್ಯವನ್ನು ವಿವರಿಸಿ :
1) "ದೊರಕಿದಾ ಗುರು ದೊರಕಿದಾ ಸದ್ಗುರು"
2) "ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟತೇವ"
ಈ ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ ಬರೆಯಿರಿ
ಕಂಚುಗಾರನ ......................ಮಾಡುವುದು
ಅಥವಾ
ನಾನು ಎಂಬುದ ………………… ಕಾರ್ಯಗಳೆಲ್ಲವು
ಈ ಕೆಳಗಿನ ಕವಿಗಳ /ಸಾಹಿತಿಗಳ ಜನ್ಮಸ್ಥಳ, ಕಾಲ ಮತ್ತು ಕೃತಿಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ: ಡಾ।। ವಿಜಯಲಕ್ಷ್ಮಿ ಬಾಳೇಕುಂದ್ರಿ ಮತ್ತು ಸಿ.ಪಿ.ಕೆ
ಮೂರೂ-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ
ಗಾಂಧೀಜಿಯವರು ಕೊಡಗಿನಲ್ಲಿ ತಂಗಿದ್ದಾಗ ನಡೆದ ಸಂಗತಿಗಳನ್ನು ಕುರಿತು ವಿವರಿಸಿ.
ಕೊಡಗಿನ ಗೌರಮ್ಮನವರ ಸಾಹಿತ್ಯ ಸೃಷ್ಟಿಗೆ ಪೂರಕವಾದ ವಿಚಾರಗಳನ್ನು ಕುರಿತು ಬರೆಯಿರಿ.
ಅಂತರಂಗ ಮತ್ತು ಬಹಿರಂಗವನ್ನು ಶುದ್ಧಿಯಾಗಿಡುವುದು ಹೇಗೆಂದು ಬಸವಣ್ಣನವರು ತಿಳಿಸಿದ್ದಾರೆ? ವಿವರಿಸಿ
ಬಸವಣ್ಣನವರ ವಚನಗಳಲ್ಲಿ ಕಂಡುಬರುವ ಮಾನವೀಯ ಮೌಲ್ಯಗಳನ್ನು ಕುರಿತು ವಿವರಿಸಿ
ಈ ಕೆಳಗಿನ ಪ್ರಶೆಗಳಿಗೆ ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ
ಇವುಗಳಲ್ಲಿ ಅನ್ವರ್ಥಕನಾಮ ಪದವಿದು
(ಎ) ಕಾಡು
(ಬಿ) ಧಾರವಾಡ
(ಸಿ) ವಿದ್ವಂಸ
(ಡಿ) ಅವರು
'ಕುಲವೆನ್ನದ' - ಪದವು ಈ ಸಂಧಿಗೆ ಉದಾಹರಣೆಯಾಗಿದೆ
(ಎ) ಲೋಪ
(ಬಿ) ವಕಾರಾಗಮ
(ಸಿ) ಯಕಾರಾಗಮ
(ಡಿ) ಆದೇಶ
ಕೆಳಗಿನ ಪದಗಳಲ್ಲಿ ತದ್ಭವ ರೂಪವಿದು
(ಎ) ಕವಿ
(ಬಿ) ಕಾವ್ಯ
(ಸಿ) ವರುಷ
(ಡಿ) ಯೋಗಿ
'ವಿದ್ಯಾರ್ಥಿಗಳು ಶಾಲೆಗೆ ಶಿಸ್ತಿನಿಂದ ಬರುತ್ತಿದ್ದಾರೆ'. ಎಂಬ ವಾಕ್ಯವು ಈ ಕಲಾರೂಪದಲ್ಲಿದೆ
(ಎ) ವರ್ತಮಾನ ಕಾಲ
(ಬಿ) ಭೂತಕಾಲ
(ಸಿ) ಭವಿಷ್ಯತ್ ಕಾಲ
(ಡಿ) ಅಪೂರ್ಣ ಭವಿಷ್ಯತ್ ಕಾಲ
'ಹೃದಯವು ಕಮಲದಂತೆ ಅರಳಿತು' - ಈ ವಾಕ್ಯದಲ್ಲಿರುವ ಉಪಮಾನ
(ಎ) ಹೃದಯ
(ಬಿ) ಕಮಲ
(ಸಿ) ಆಂತೆ
(ಡಿ) ಅರಳಿತು
ಕಚೇರಿ ಪದವು ಈ ಭಾಷೆಗೆ ಸೇರಿದೆ
(ಎ) ಸಂಸ್ಕೃತ
(ಬಿ) ಹಿಂದೂಸ್ತಾನಿ
(ಸಿ) ಪೋರ್ಚುಗೀಸ್
(ಡಿ) ಇಂಗ್ಲಿಷ್
'ಕಪ್ಪಕಾಣಿಕೆ' - ಪದದ ವ್ಯಾಕರಣಾಂಶ
(ಎ) ದ್ವಿರುಕ್ತಿ
(ಬಿ) ಅನುಕರಣಾವ್ಯಯ
(ಸಿ) ಜೋಡುನುಡಿ
(ಡಿ) ನುಡಿಗಟ್ಟು
'ಸಂಬಂಧದಲ್ಲಿ' - ಪದದ ವ್ಯಾಕರಣಾಂಶ
(ಎ) ಅನ್ನು
(ಬಿ)ಇಂದ
(ಸಿ) ಆ
(ಡಿ) ಅಲ್ಲಿ
'ಕೆರೆಕಟ್ಟೆ ಭಾವಿಗಳು' - ಪದವು ಈ ಸಮಾಸಕ್ಕೆ ಸೇರಿದೆ
(ಎ) ದ್ವಿಗು
(ಬಿ) ದ್ವಂದ್ವ
(ಸಿ) ಕ್ರಿಯಾ
(ಡಿ) ಗಮಕ
'ಕುವೆಂಪುರವರ ಭಾವಗೀತೆಗಳನ್ನು ಕೇಳಿ ವಿದ್ಯಾರ್ಥಿಗಳು ಮೈಮರೆತರು' - ಈ ವಾಕ್ಯವು
(ಎ) ಸಾಮಾನ್ಯ ವಾಕ್ಯ
(ಬಿ) ಸಂಯೋಜಿತ ವಾಕ್ಯ
(ಸಿ) ಮಿಶ್ರ ವಾಕ್ಯ
(ಡಿ)ಅಲಂಕಾರಿಕ ವಾಕ್ಯ
'ಸತ್ಯಕ್ಕಾಗಿ ಆಗ್ರಹಿಸುವದೇ 'ಸತ್ಯಾಗ್ರಹ' ಎಂಬ ಅರ್ಥವನ್ನು ನೀಡುತ್ತದೆ'. - ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿಹ್ನೆ
(ಎ) ಉದ್ಧರಣ
(ಬಿ) ವಾಕ್ಯವೇಷ್ಟನ
(ಸಿ) ವಿವರಣಾತ್ಮಕ್
(ಡಿ) ಆವರಣ
'ಘನದೊಳ್' - ಈ ಪದಕ್ಕೆ ಪ್ರಸ್ತಾರ ಹಾಕಿದಾಗ ಹೀಗಾಗುತ್ತದೆ.
(ಎ) U U -
(ಬಿ) - -
(ಸಿ) – U U
(ಡಿ) U – U
ಕೆಳಗಿನ ಗದ್ಯಭಾಗವನ್ನು ಮನಸ್ಸಿನಲ್ಲಿ ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಭಾಂವ್ರಿದೇವಿಯು ರಾಜಸ್ಥಾನದ ಒಂದು ಬಡ ಕುಟುಂಬದಲ್ಲಿ ಜನಿಸಿದಳು. ಇವಳು ಮನೆಗೆಲಸ ಮತ್ತು ಪ್ರತಿನಿತ್ಯ ಕತ್ತೆಗಳನ್ನು ಬಯಲಿನಲ್ಲಿ ಮೇಯಿಸುವ ಕೆಲಸವನ್ನು ಮಾಡಿಕೊಂಡಿದ್ದಳು. ಇವಳಿಗೆ ತಂದೆ ತಾಯಿ ಚಿಕ್ಕ ವಯಸ್ಸಿನಲ್ಲಿ ಮೋಹನ್ ಲಾಲ್ ಎಂಬ ಹುಡುಗನೊಂದಿಗೆ ವಿವಾಹವನ್ನು ಮಾಡಿದರು. ಇವಳು ಬಡತನದ ಕಷ್ಟ ಮತ್ತು ಚಿಕ್ಕ ವಯಸ್ಸಿನಲ್ಲೇ ತಾಯ್ತನದಿಂದಾಗುವ ಪರಿಣಾಮಗಳನ್ನರಿತಿದ್ದಳು. ಈಕೆ ತನ್ನ ಮಗಳಿಗೆ ಬಾಲ್ಯವಿವಾಹವನ್ನು ಮಾಡುವದನ್ನು ವಿರೋಧಿಸಿದಳು. ಧೃತಿಗೆಡದೆ ಈಕೆ ಊರಿನ ಹೆಂಗಸರಿಗೆ ಇದರ ಸಾಧಕ-ಭಾದಕಗಳನ್ನು ಕುರಿತು ತಿಳಿಸಿ, ಅವರಲ್ಲಿ ಜಾಗೃತಿಯನ್ನು ಮೂಡಿಸಿದಳು. ಇವಳ ಸಮಾಜಸೇವೆಗೆ 'ನಿರ್ಜಾಭನೋಟ್' ಪ್ರಶಸ್ತಿ ನೀಡಲಾಗಿದೆ. ಇದರಿಂದ ಬಂದ ಒಂದು ಲಕ್ಷ ರೂಪಾಯಿ ಮೊತ್ತದ ಹಣವನ್ನು ಹಳ್ಳಿಯಲ್ಲಿರುವ ಹೆಣ್ಣು ಮಕ್ಕಳ ಶಾಲೆಗೆ ಶೌಚಾಲಯ ನಿರ್ಮಾಣ ಮಾಡಲು ನೀಡಿದಳು.
ಪ್ರಶ್ನೆಗಳು:
೧) ಪ್ರತಿನಿತ್ಯ ಭಾಂವ್ರಿದೇವಿ ಮಾಡುತ್ತಿದ್ದ ಕೆಲಸಗಳೇನು?
೨) ಭಾಂವ್ರಿದೇವಿಯ ಅರಿವಿಗೆ ಬಂದ ವಿಚಾರಗಳೇನು?
೩) ಭಾಂವ್ರಿದೇವಿಗೆ ನೀಡಿದ ಪ್ರಶಸ್ತಿ ಯಾವುದು?
೪) ಭಾಂವ್ರಿದೇವಿಯು ತನಗೆ ಬಂದ ಪ್ರಶಸ್ತಿಯ ಹಣವನ್ನು ಯಾವ ಕಾರ್ಯಕ್ಕೆ ನೀಡಿದಳು?
ಈ ಕೆಳಗೆ ಕೊಟ್ಟಿರುವ ಗಾದೆಮಾತುಗಳನ್ನು ವಿಸ್ತರಿಸಿ ಬರೆಯಿರಿ
1) ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ
2) ಮಾಡಿದ್ದುಣ್ಣೋ ಮಹಾರಾಯ
3) ಉಪ್ಪು ತಿಂದವನು ನೀರು ಕುಡಿಯಲೇಬೇಕು
ನಿಮ್ಮನ್ನು ರಾಮನಗರದ ಸರ್ಕಾರಿ ಪ್ರೌಢಶಾಲೆಯಲ್ಲಿರುವ 'ವಿಕ್ರಮ್ / ಅಕ್ಷತಾ' ಎಂದು ಭಾವಿಸಿಕೊಂಡು, ಮೈಸೂರಿನಲ್ಲಿರುವ ನಿಮ್ಮ ತಾಯಿಯವರಿಗೆ ನಿಮ್ಮ ಶಾಲೆಯಲ್ಲಿ ಆಚರಿಸಿದ 'ಮಕ್ಕಳ ದಿನಾಚರಣೆ ಕಾರ್ಯಕ್ರಮ'ವನ್ನು ಕುರಿತು ಪತ್ರವೊಂದನ್ನು ಬರೆಯಿರಿ.
ಅಥವಾ
ನಿಮ್ಮನ್ನು 'ಕಿರಣ / ಸನಿಶಾ' ಎಂದು ಭಾವಿಸಿಕೊಂಡು, ನಿಮ್ಮ ಊರಿನಲ್ಲಿ ಹಾಳಾಗಿರುವ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಕೋರಿ ನಗರಸಭಾ ಅಧ್ಯಕ್ಷರಿಗೆ ಮನವಿ ಪಾತ್ರವೊಂದನ್ನು ಬರೆಯಿರಿ.
ಈ ಕೆಳಗಿನ ಯಾವುದಾದರು ಒಂದು ವಿಷಯದ ಬಗ್ಗೆ ಹತ್ತು ವಾಕ್ಯಗಳಿಗೆ ಕಡಿಮೆಯಿಲ್ಲದಂತೆ ಪ್ರಬಂಧ ಬರೆಯಿರಿ.
1) ಅರಣ್ಯಗಳು ಮತ್ತು ಅವುಗಳಿಂದಾಗುವ ಉಪಯೋಗಗಳು
2) ಸಂಪರ್ಕ ಮಾಧ್ಯಮಗಳು ಮತ್ತು ಅವುಗಳ ಪ್ರಯೋಜನಗಳು
3) ಜ್ಞಾನ ಸಂಪಾದನೆಯಲ್ಲಿ ಗ್ರಂಥಾಲಗಳ ಪಾತ್ರ.
Answer:
ಡಗಗಂಂಗಂಗಝಡಡಝಞೀಗಝಛನಠಶ