Science, asked by bk2156043, 2 months ago

13. ಪಳೆಯುಳಿಕೆಗಳು ಎಂದರೇನು ?

Answers

Answered by Anonymous
2

ಪಳೆಯುಳಿಕೆಗಳು ('ಫಾಸಿಲ್ಸ್‌‌' ಎಂಬ ಪದವು ಲ್ಯಾಟಿನ್‌‌ ಭಾಷೆಯ ಫಾಸಸ್‌ ಎಂಬ ಪದದಿಂದ ಬಂದಿದ್ದು, ಅಕ್ಷರಶಃ ಇದು "ಅಗೆಯುವಿಕೆಗೆ ಒಳಗಾಗಿರುವ" ಎಂಬ ಅರ್ಥವನ್ನು ನೀಡುತ್ತದೆ) ಪ್ರಾಚೀನ ಕಾಲಕ್ಕೆ ಅಥವಾ ತೀರಾ ಹಿಂದಿನ ಕಾಲಕ್ಕೆ ಸೇರಿರುವ ಪ್ರಾಣಿಗಳು, ಸಸ್ಯಗಳು, ಮತ್ತು ಇತರ ಜೀವಿಗಳ ಸಂರಕ್ಷಿಸಲ್ಪಟ್ಟ ಅವಶೇಷಗಳು ಅಥವಾ ಕುರುಹುಗಳು ಆಗಿವೆ. ಆವಿಷ್ಕರಿಸಲ್ಪಟ್ಟ ಮತ್ತು ಆವಿಷ್ಕರಿಸಲ್ಪಡದ ಎರಡೂ ಪ್ರಕಾರಗಳಿಗೆ ಸೇರಿದ ಪಳೆಯುಳಿಕೆಗಳ ಪೂರ್ಣತೆ, ಮತ್ತು ಜೀವ್ಯವಶೇಷಗಳುಳ್ಳ (ಪಳೆಯುಳಿಕೆಯನ್ನು-ಒಳಗೊಂಡಿರುವ) ಬಂಡೆಯ ಸ್ತರಗಳು ಮತ್ತು ಸಂಚಿತ ಪದರಗಳಲ್ಲಿನ (ಸ್ತರಶ್ರೇಣಿಗಳು) ಅವುಗಳ ಇರಿಸುವಿಕೆಯು ಪಳೆಯುಳಿಕೆಯ ದಾಖಲೆ ಎಂದು ಕರೆಸಿಕೊಳ್ಳುತ್ತದೆ. ಭೂವೈಜ್ಞಾನಿಕ ಕಾಲದ ಉದ್ದಗಲಕ್ಕೂ ಇದ್ದ ಪಳೆಯುಳಿಕೆಗಳ ಅಧ್ಯಯನ, ಅವು ಹೇಗೆ ರೂಪುಗೊಂಡವು, ಮತ್ತು ವರ್ಗಗಳ (ಜೀವಿವಿಕಾಸದ) ನಡುವಿನ ವಿಕಸನೀಯ ಸಂಬಂಧಗಳ ಸ್ವರೂಪವೆಂಥದು ಇವೇ ಮೊದಲಾದ ವಿಷಯಗಳು, ಪ್ರಾಗ್ಜೀವಶಾಸ್ತ್ರ ವಿಜ್ಞಾನದ ಕೆಲವೊಂದು ಅತ್ಯಂತ ಪ್ರಮುಖ ಕಾರ್ಯಚಟುವಟಿಕೆಗಳಾಗಿವೆ. ಇಂಥದೊಂದು ಸಂರಕ್ಷಿಸಲ್ಪಟ್ಟ ಮಾದರಿಯು ಒಂದು ವೇಳೆ ಒಂದಷ್ಟು ಕನಿಷ್ಟ ವಯಸ್ಸಿಗಿಂತಲೂ ಹಳೆಯದಾಗಿದ್ದಲ್ಲಿ, ಅದು ಒಂದು "ಪಳೆಯುಳಿಕೆ" ಎಂದು ಕರೆಸಿಕೊಳ್ಳುತ್ತದೆ; ಮತ್ತು ಈ ಕನಿಷ್ಟ ವಯಸ್ಸು ಬಹುತೇಕ ವೇಳೆ 10,000 ವರ್ಷಗಳಷ್ಟು ಹಿಂದಿರುವ ಇಚ್ಛಾನುಸಾರವಾದ ದಿನಾಂಕವಾಗಿರುತ್ತದೆ.[೧]

ಆದ್ದರಿಂದ, ಹಾಲಸೀನ್‌ ಕಲ್ಪದ ಕಾಲದ ಪ್ರಾರಂಭದಲ್ಲಿನ ಅತ್ಯಂತ ಕಿರಿಯ ಪಳೆಯುಳಿಕೆಯಿಂದ ಮೊದಲ್ಗೊಂಡು, ಹಲವಾರು ಶತಕೋಟಿ ವರ್ಷಗಳಷ್ಟು ಹಳೆಯದಾದ ಆರ್ಕಿಯನ್‌ ಯುಗದ ಮಹಾಕಲ್ಪಕ್ಕೆ ಸೇರಿದ ಅತ್ಯಂತ ಹಳೆಯ ಪಳೆಯುಳಿಕೆಯವರೆಗೆ, ಪಳೆಯುಳಿಕೆಗಳ ವಯಸ್ಸಿನ ವ್ಯಾಪ್ತಿಯಿರುತ್ತದೆ. ಕೆಲವೊಂದು ಬಂಡೆಯ ಸ್ತರಶ್ರೇಣಿಗಳೊಂದಿಗೆ ನಿರ್ದಿಷ್ಟ ಪಳೆಯುಳಿಕೆಗಳು ಸಂಬಂಧಹೊಂದಿದ್ದವು ಎಂಬ ವೀಕ್ಷಣೆಗಳು, 19ನೇ ಶತಮಾನದಲ್ಲಿ ಆರಂಭಿಕ ಭೂವಿಜ್ಞಾನಿಗಳು ಒಂದು ಭೂವೈಜ್ಞಾನಿಕ ಕಾಲಪ್ರಮಾಣವನ್ನು ಗುರುತಿಸುವುದಕ್ಕೆ ಕಾರಣವಾದವು. 20ನೇ ಶತಮಾನದ ಆರಂಭದಲ್ಲಿ ಕಂಡುಬಂದ ರೇಡಿಯೋಮಾಪನದ ಕಾಲನಿರ್ಣಯ ಕೌಶಲಗಳ ಅಭಿವೃದ್ಧಿಯು, ಹಲವಾರು ಸ್ತರಶ್ರೇಣಿಗಳ ಸಂಖ್ಯಾತ್ಮಕ ಅಥವಾ "ಪರಿಪೂರ್ಣ" ವಯಸ್ಸನ್ನು ಮತ್ತು ಅದು ಒಳಗೊಂಡಿದ್ದ ಪಳೆಯುಳಿಕೆಗಳನ್ನು ತನ್ಮೂಲಕ ನಿರ್ಣಯಿಸುವಲ್ಲಿ ಭೂವಿಜ್ಞಾನಿಗಳಿಗೆ ಅವಕಾಶ ನೀಡಿತು.

ಈಗಲೂ ಇರುವ ಜೀವಿಗಳ ರೀತಿಯಲ್ಲಿ, ಅತಿ ಸೂಕ್ಷ್ಮವಾದ ಗಾತ್ರದಿಂದ ಮೊದಲ್ಗೊಂಡು ದೈತ್ಯಗಾತ್ರದವರೆಗೆ ಪಳೆಯುಳಿಕೆಗಳ ಗಾತ್ರವು ಬದಲಾಗುತ್ತಾ ಹೋಗುತ್ತದೆ; ಏಕ ಬ್ಯಾಕ್ಟೀರಿಯಾ ಜೀವಕೋಶಗಳು [೨] ಹೊಂದಿರುವ ಒಂದು ಮೈಕ್ರೋಮೀಟರು ವ್ಯಾಸದ ಗಾತ್ರದಿಂದ, ಡೈನೋಸರ್‌‌‌ಗಳಂಥ ದೈತ್ಯಗಾತ್ರದ ಜೀವಿಗಳವರೆಗೆ ಮತ್ತು ಅನೇಕ ಮೀಟರುಗಳಷ್ಟು ಉದ್ದವಿದ್ದು ಅನೇಕ ಟನ್ನುಗಳವರೆಗೆ ತೂಗುವ ಮರಗಳ ಗಾತ್ರದವರೆಗೆ ಪಳೆಯುಳಿಕೆಗಳ ಗಾತ್ರವು ಬದಲಾಗುತ್ತಾ ಹೋಗುತ್ತದೆ. ಇತ್ತೀಚೆಗಷ್ಟೇ ಸತ್ತ ಜೀವಿಯ ಕೇವಲ ಭಾಗವೊಂದನ್ನು ಒಂದು ಪಳೆಯುಳಿಕೆಯು ಸಾಮಾನ್ಯವಾಗಿ ಸಂರಕ್ಷಿಸುತ್ತದೆ; ಆ ಭಾಗವು ಸಾಮಾನ್ಯವಾಗಿ ಜೀವಿತಕಾಲದಲ್ಲಿ ಆಂಶಿಕವಾಗಿ ಖನಿಜೀಕರಿಸಲ್ಪಟ್ಟಿದ್ದ ಭಾಗವಾಗಿದ್ದು, ಕಶೇರುಕಗಳ ಮೂಳೆಗಳು ಮತ್ತು ಹಲ್ಲುಗಳು ಅಥವಾ ಅಕಶೇರುಕಗಳ ಕೈಟಿನ್‌‌‌‌‌ಯುಕ್ತ ಅಥವಾ ಸುಣ್ಣಯುಕ್ತ ಹೊರಕವಚಗಳು ಇದಕ್ಕೆ ಉದಾಹರಣೆಗಳಾಗಿರುತ್ತವೆ. ಮೃದು ಅಂಗಾಂಶಗಳ ಸಂರಕ್ಷಣೆಯು ಪಳೆಯುಳಿಕೆಯ ದಾಖಲೆಯಲ್ಲಿ ಅಪರೂಪವಾಗಿರುತ್ತದೆ. ಜೀವಿಯೊಂದು ತನ್ನ ಜೀವಿತಕಾಲದಲ್ಲಿ ಬಿಟ್ಟುಹೋಗಿದ್ದ ಗುರುತುಗಳನ್ನೂ ಸಹ ಪಳೆಯುಳಿಕೆಗಳು ಒಳಗೊಂಡಿರಬಹುದು; ಸರೀಸೃಪವೊಂದರ ಪಾದದ ಗುರುತು ಅಥವಾ ಹಿಕ್ಕೆಗಳು (ಪಳೆಯುಳಿಕೆಗಳಾಗಿರುವ ಹಿಕ್ಕೆಗಳು) ಈ ಗುಂಪಿಗೆ ಸೇರುತ್ತವೆ. ಈ ಬಗೆಯ ಪಳೆಯುಳಿಕೆಗಳನ್ನು ಶರೀರದ ಪಳೆಯುಳಿಕೆಗಳು ಎಂಬುದಕ್ಕೆ ತದ್ವಿರುದ್ಧವಾಗಿ, ಕುರುಹಿನ ಪಳೆಯುಳಿಕೆಗಳು (ಅಥವಾ ಹೆಜ್ಜೆಗುರುತಿನ ಪಳೆಯುಳಿಕೆಗಳು ) ಎಂದು ಕರೆಯಲಾಗುತ್ತದೆ. ಅಂತಿಮವಾಗಿ, ಕಣ್ಣಿಗೆ ಕಾಣದ ಆದರೆ ಜೀವರಾಸಾಯನಿಕ ಸಂಕೇತಗಳ ಸ್ವರೂಪದಲ್ಲಿ ಪತ್ತೆಹಚ್ಚಬಹುದಾದ ಕೆಲವೊಂದು ಗುರುತುಕಾರಕಗಳನ್ನು ಗತಜೀವನವು ಬಿಟ್ಟುಹೋಗುತ್ತದೆ; ಇಂಥವುಗಳನ್ನು ರಾಸಾಯನಿಕ ಪಳೆಯುಳಿಕೆಗಳು ಅಥವಾ ಜೈವಿಕ ಗುರುತುಕಾರಕಗಳು ಎಂದು ಕರೆಯಲಾಗುತ್ತದೆ.

Answered by krishnaanandsynergy
0

ಯಾವುದೇ ಉಳಿದಿರುವ ಅವಶೇಷಗಳು, ಅನಿಸಿಕೆಗಳು ಅಥವಾ ಹಿಂದಿನ ಭೂವೈಜ್ಞಾನಿಕ ಯುಗದಿಂದ ಒಮ್ಮೆ ಜೀವಂತವಾಗಿರುವ ಜೀವಿಗಳ ಪುರಾವೆಗಳನ್ನು ಪಳೆಯುಳಿಕೆ ಎಂದು ಕರೆಯಲಾಗುತ್ತದೆ.

ಪಳೆಯುಳಿಕೆಗಳ ಬಗ್ಗೆ:

  • ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಿತ ಅವಶೇಷಗಳು ಅಥವಾ ಅವಶೇಷಗಳ ಚಿಹ್ನೆಗಳನ್ನು ಪಳೆಯುಳಿಕೆಗಳು ಎಂದು ಕರೆಯಲಾಗುತ್ತದೆ.
  • ಜೀವಿಯ ಅವಶೇಷಗಳೇ ಪಳೆಯುಳಿಕೆಗಳಲ್ಲ!
  • ಅವು ಕಲ್ಲುಗಳು.
  • ಪೂರ್ಣ ಜೀವಿ ಅಥವಾ ಒಂದರ ಒಂದು ಭಾಗವನ್ನು ಮಾತ್ರ ಪಳೆಯುಳಿಕೆಯಾಗಿ ಸಂರಕ್ಷಿಸಬಹುದು.
  • "ಪಳೆಯುಳಿಕೆ" ಎಂಬ ಪದವು ಲ್ಯಾಟಿನ್ ಪದ ಫಾಸಿಲಿಸ್‌ನಿಂದ ಬಂದಿದೆ, ಇದರರ್ಥ "ಅಗೆದ".
  • "ದೇಹ ಪಳೆಯುಳಿಕೆಗಳು" ಪ್ರಾಚೀನ ಪ್ರಾಣಿಗಳು, ಸಸ್ಯಗಳು ಮತ್ತು ಇತರ ಜೀವಂತ ರೂಪಗಳ ಸಂರಕ್ಷಿತ ಅವಶೇಷಗಳ ಉದಾಹರಣೆಗಳಾಗಿವೆ.
  • "ಟ್ರೇಸ್ ಪಳೆಯುಳಿಕೆಗಳು" ಸಸ್ಯದ ಬೇರುಗಳು, ಬಿಲಗಳು ಮತ್ತು ಹೆಜ್ಜೆಗಳಂತಹ ಜೀವಿಗಳು ಕೆಸರುಗಳಲ್ಲಿ ಬಿಡುವ ಕುರುಹುಗಳಾಗಿವೆ.

ಪಳೆಯುಳಿಕೆಗಳನ್ನು ಹೇಗೆ ರಚಿಸಲಾಗಿದೆ?

  • ಪ್ರಾಣಿಯು ಮರಣಹೊಂದಿದಾಗ ಅಸ್ಥಿಪಂಜರವು ಉಳಿಯುತ್ತದೆ ಏಕೆಂದರೆ ಅದರ ದೇಹದ ಮೃದುವಾದ ಅಂಶಗಳು ಮೊದಲು ವಿಭಜನೆಯಾಗುತ್ತವೆ.
  • ಸಣ್ಣ ಬಂಡೆಯ ತುಣುಕುಗಳನ್ನು ಒಳಗೊಂಡಿರುವ ಸೆಡಿಮೆಂಟ್ ಇದನ್ನು ಹೂತುಹಾಕುತ್ತದೆ.
  • ಅಸ್ಥಿಪಂಜರವನ್ನು ಸುತ್ತುವರೆದಿರುವ ಹೂಳು ಕ್ರೋಢೀಕರಿಸಲು ಮತ್ತು ಹೊಸ ಪದರಗಳ ಕೆಸರುಗಳನ್ನು ಸೇರಿಸಿದಾಗ ಬಂಡೆಯಾಗಿ ಪರಿವರ್ತಿಸಲು ಪ್ರಾರಂಭಿಸುತ್ತದೆ.

#SPJ3

Similar questions