Social Sciences, asked by rajeshraju141423, 2 months ago


1885 ರಿಂದ 1920ರವರೆಗಿನ ಭಾರತದ ರಾಷ್ಟ್ರೀಯ ಚಳುವಳಿಯನ್ನು ವಿಷದಪಡಿಸಿರಿ.​

Answers

Answered by Anonymous
4

Answer:

ಭಾರತದ ರಾಷ್ಟ್ರೀಯ ಚಳುವಳಿ ಯಾವಾಗ ಪ್ರಾರಂಭವಾಯಿತೆಂದು ಹೇಳುವದು ಚರ್ಚಾಸ್ಪದ ವಿಷಯವಾದರೂ ಭಾರತದ ರಾಷ್ಟ್ರೀಯ ಕಾಂಗ್ರಸ್ ನ ಸ್ಥಾಪನೆಯೊಂದಿಗೆ ಖಚಿತವಾಗಿ ಪ್ರಾರಂಭವಾಯಿತೆಂದು ಹೇಳಬಹುದು.

ಅಲನ್ ಆಕ್ಟೇವಿಯನ್ನು ಹ್ಯೂಮ್ 1À885 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿಸಲು ಪ್ರೇರೇಪಿಸಿದ. ಇದರ ಮೊದಲ ಅಧಿವೇಶನ ಬೊಂಬಾಯಿಯಲ್ಲಿ ನಡೆಯಿತು. ಮೊದಲ ಅಧ್ಯಕ್ಷರು ಉಮೇಶ ಚಂದ್ರ ಬ್ಯಾನರ್ಜಿ, ಇದರಲ್ಲಿ ಭಾರತದ ವಿವಿಧ ಭಾಗಗಳಿಂದ 72 ಪ್ರತಿನಿಧಿಗಳು ಭಾಗವಹಿಸಿದ್ದರು ಇದರ ಮುಖ್ಯ ಉದ್ದೇಶಗಳೆಂದರೆ ರಾಷ್ಟ್ರೀಯ ಏಕತೆಯನ್ನು ಪ್ರೋತ್ಸಾಹಿಸುವದು,ಧರ್ಮ ಜಾತಿ,ಪ್ರಾಂತ್ಯ ಮತ್ತಿತರ ಪೂರ್ವಾಗ್ರಹ ಹೋಗಲಾಡಿಸುವದು,ಭಾರತೀಯ ಜನಸಮೂಹಕ್ಕೆ ರಾಜಕೀಯ ಶಿಕ್ಷಣ ನೀಡುವದು ಮತ್ತು ಸಾರ್ವಜನಿಕ ಅಭಿಪ್ರಾಯ ಮೂಡಿಸುವದು ಮುಂತಾದವು.

1885 ರಿಂದ 1905 ರ ಅವದಿಯನ್ನು ಮಂದಗಾಮಿಗಳ ಅವದಿ ಎಂದು ಕರೆಯುತ್ತಾರೆ ಈ ಅವದಿಯ ಪ್ರಮುಖರೆಂದರೆ ದಾದಾ ಬಾಯಿ ನವರೋಜಿ, ಗೋಪಾಲಕ್ರಷ್ಣ ಘೋಖಲೆ, ಸುರೇಂದ್ರ ನಾಥ ಬ್ಯಾನರ್ಜಿ, ಫಿರೋಜಷಾ ಮೆಹತಾ ಮುಂತಾದವರು ಇವರು ಬ್ರಿಟಿಷರ ಆಡಳಿತದಲ್ಲಿ ನಿಷ್ಠೆ ವ್ಯಕ್ತಪಡಿಸಿದರು ಮತ್ತು ಪ್ರಾರ್ಥನೆ ,ಬಿನ್ನಹಗಳ ಮೂಲಕ ಬ್ರಟಿಷ ಸರಕಾರದ ಮೇಲೆ ಒತ್ತಡ ತರುವ ಉದ್ದೇಶ ಹೊಂದಿದ್ದರು.ದಾದಾಬಾಯಿ ನವರೋಜಿ 1866 ರಲ್ಲಿ ಈಸ್ಟ ಇಂಡಿಯಾ ಅಸೋಸಿಯೇಷನ್ ಸ್ಥಾಪಿಸಿದರು ಇದು ಭಾರತಿಯರಿಗೆ ಅನಕೂಲವಾಗುವ ಕಾನೂನು ಜಾರಿಗೆ ತರುವಂತೆ ಪ್ರಯತ್ನಿಸತು. ಆದರೆ ಬ್ರಿಟಿಷರು ಕಾಂಗ್ರೆಸ್‍ನ್ನು ರಾಜದ್ರೋಹದ ಕಾರ್ಖಾನೆ ಎಂದು ಕರೆದರು. ಈ ಹಂತದಲ್ಲಿ ತೀವ್ರತರ ಬದಲಾವಣೆ ಸಾದ್ಯವಾಗದಿದ್ದರು ಬ್ರಿಟಷರ ಶೋಷಣಾತ್ಮಕ ವಸಾಹತುಷಾಹಿ ಅಡಳಿತ ಮತ್ತು ನೀತಿಯನ್ನು ಹೊರಗೆಳಿದರು.

1905 ರಿಂದ 1920 ರ ಅವದಿಯನ್ನು ತೀವ್ರಗಾಮಿಗಳ ಯುಗ ಎಂದು ಕರೆಯಲಾಗಿದೆ. ಇವರು ಹೋರಾಟ ಪ್ರವತ್ತಿಯುಳ್ಳುವರಾಗಿದ್ದರು ಈ ಅವದಿಯ ಪ್ರಮಖರೆಂದರೆ ಬಾಲಗಂಗಾಧರ ತಿಲಕ,ಲಾಲಾ ಲಜಪತರಾಯ ಮತ್ತು ಬಿಪಿನ ಚಂದ್ರಪಾಲ.

ತೀವ್ರ ಗಾಮಿಗಳ ಉದಯಕ್ಕೆ ಕಾರಣವೆಂದರೆ.

1) ಮಂದಗಾಮಿಗಳು ತಮ್ಮ ಸಂವಿಧಾನಾತ್ಮಕ ಕ್ರಮಗಳಿಂದ ಯಾವುದೆ ಫಲಿತಾಂಶ ಸಾಧಿಸುವಲ್ಲಿ ವಿಫಲರಾದರು.

2) 1896-1901 ರ ವರೆಗೆ ಬಂದ ಕ್ಷಾಮ ನಿರ್ವಹನೆಯಲ್ಲಿ ಉದಾಸೀನತೆ ತೋರಿಸಿ ಸಾವಿರಾರು ಭಾರತಿಯರ ಮರಣಕ್ಕೆ ಕಾರಣರಾದರು.

3) ಭಾರತದ ರಾಷ್ಟ್ರೀಯವಾದಿಗಳ ಪ್ರಯತ್ನ ಭಾರತೀಯರಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನ ಮೂಡಿಸಿದವು

4) ಅಂತರಾಷ್ಟ್ರೀಯ ಪ್ರಭಾವ: ಇಟಲಿ, ಜರ್ಮನಿ ಎಕೀಕರಣ ಹಾಗೂ ಸ್ವಾತಂತ್ರ್ಯ,ರಷ್ಯ ಸೊಲು,ಟರ್ಕಿ,ಪರ್ಷಿಯಾಗಳ ರಾಷ್ಟ್ರೀಯ ಚಳುವಳಿಗಳು

ಈ ಅವದಿಯ ಪ್ರಮುಖ ಘಟನೆಗಳೆಂದರೆ

1) ಬಂಗಾಳದ ವಿಭಜನೆ 1905- ಹಿಂದೂ ಮುಸ್ಲಿಮರಲ್ಲಿ ಒಡಕನ್ನುಂಟು ಮಾಡವ ಉದ್ದೇಶವನ್ನು ಹೊಂದಿದ್ದರು ಇದರಿಂದ ವಿಭಜನಾ ಚಳುವಳಿ ಪ್ರಾರಂಭವಾದವು.ವಿದೇಶಿ ಬಹಿಷ್ಕಾರ ಮತ್ತು ಸ್ವದೇಶಿ ಚಳುವಳಿ ಪ್ರಾರಂಭವಾದವು.

2) ಸೂರತ್ ಒಡಕು 1907- ಸುರತ್ ಅದಿವೇಶನದಲ್ಲಿ ಮಂದಗಾಮಿಗಳು ರಾಸ್ ಬಿಹಾರಿ ಘೋಸ್ ರನ್ನು ,ತೀವ್ರ ಗಾಮಿಗಳು ಲಾಲ ಲಜಪತರಾಯರನ್ನು ಅಧ್ಯಕ್ಷರನ್ನಾಗಿ ಮಾಡಲು ಬಯಸಿದರು. ಎರಡು ಗುಂಪು ಹೊಂದಾಣಿಕೆಯಾಗಲಿಲ್ಲಿ ಇದು ಕಾಂಗ್ರಸ್ ನಲ್ಲಿ ಒಡಕನ್ನುಂಟು ಮಾಡಿತು.ತೀವ್ರಗಾಮಿಗಳನ್ನು ಸೆದೆ ಬಡೆಯಲು ಬ್ರಿಟಿಷರು ಅನೇಕ ಕ್ರಮ ಕೈಕೊಂಡರು.

Similar questions