India Languages, asked by npnihaar, 6 months ago

ಕೋವಿಡ್ 19 ಪ್ರಭಂದ ಕನ್ನಡದ​

Answers

Answered by Vivek2425
9

Answer:

please follow me I am from KARNATAKA I know Kannada

Explanation:

ಕೊರೋನಾ ವೈರಸ್ ಎಂದರೇನು?

ಕೊರೋನಾ ವೈರಸ್ ಸಾಮಾನ್ಯವಾಗಿ ನೆಗಡಿ, ಕೆಮ್ಮು, ಅಥವಾ ಇತರೆ ಉಸಿರಾಟದ ಸಮಸ್ಯೆಗಳು ಅಥವಾ ಸೋಂಕಿಗೆ ಕಾರಣವಾಗುವ ವೈರಸ್‍ಗಳ ಜಾತಿಗೆ ಸೇರಿದ್ದು.1 ಈ ವೈರಸ್‍ಗಳು ಸಾಮಾನ್ಯವಾಗಿ ಕಂಡುಬರುವುದು ಪ್ರಾಣಿಗಳಲ್ಲಿ, ಆದರೆ SARS ವೈರಸ್‍ನಂತಹ ಕೆಲವು ವೈರಸ್‍ಗಳು ಮನುಷ್ಯರ ಮೇಲೆಯೂ ಸಹ ಪ್ರಭಾವ ಬೀರಿರುವುದು ಕಂಡುಬಂದಿದೆ. ಆದರೆ, ಈಗ SARS-CoV-2 ಎಂದು ಕರೆಯಲಾಗುತ್ತಿರುವ ಈ ವೈರಸ್, ಮೊದಲು ಕಂಡುಬಂದಿದ್ದು ಡಿಸೆಂಬರ್ 2019 ರಂದು ಚೈನಾದಲ್ಲಿ, ಹಾಗೂ ಇದು ಮನುಷ್ಯರಲ್ಲಿ ಕಂಡುಬಂದಿದ್ದು ಇದೇ ಮೊದಲು2. ಈ ಹೊಸ ವೈರಸ್‍ನಿಂದ ಬರುವ ರೋಗದ (ಉಸಿರಾಟಕ್ಕೆ ಸಂಬಂಧಿಸಿದ) ಹೆಸರೇ COVID-19.

ಇದರ ಗುಣಲಕ್ಷಣಗಳೇನು?

ಗುಣಲಕ್ಷಣಗಳು ಕಾಣಿಸಿಕೊಳ್ಳುವ ಸಮಯ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಾಗಬಹುದು. ಕೆಲವೊಂದು ಜನರಲ್ಲಿ, ವೈರಸ್ ದೇಹದೊಳಗೆ ಹೋದ ಎರಡೇ ದಿನದಲ್ಲಿ ಕಾಣಿಸಿಕೊಳ್ಳಬಹುದು ಹಾಗೂ ಮತ್ತೆ ಕೆಲವರಲ್ಲಿ 14 ದಿನಗಳಷ್ಟು ಸಮಯವನ್ನು ತೆಗೆದುಕೊಳ್ಳಬಹುದು3. ಸಾಮಾನ್ಯವಾಗಿ ಕಂಡುಬರುವ ಗುಣಲಕ್ಷಣಗಳು ಇವು:

ಜ್ವರ,

ಕೆಮ್ಮು,

ಉಸಿರಾಟದ ತೊಂದರೆ.

ಇತರೆ ಕಡಿಮೆ ಸಾಮಾನ್ಯ ಗುಣಲಕ್ಷಣಗಳು ಹೀಗಿರುತ್ತವೆ:

ಗಂಟಲು ನೋವು

ಸೀನುವುದು

ಮೈಕೈ ನೋವು

ಭೇದಿ

ವಾಂತಿ

ತಲೆತಿರುಗುವಿಕೆ

COVID-19 ಅನ್ನು ಗುರುತಿಸಲು ನಿಮಗೆ ನೆರವಾಗಬಲ್ಲ, ದಿನದಿಂದ ದಿನಕ್ಕೆ ಗುಣಲಕ್ಷಣಗಳು ಹೇಗೆ ಕಾಣಿಸಿಕೊಳ್ಳುತ್ತವೆ ಎಂಬ ಪಟ್ಟಿ ಇಲ್ಲಿದೆ (5,6)

ದಿನ 1: ಜ್ವರ ಮತ್ತು ಒಣ ಕೆಮ್ಮು. ದಣಿವು ಮತ್ತು ಮೈಕೈ ನೋವಿನ ದೂರುಗಳು ಕೂಡ ಕೇಳಿಬಂದಿದೆ.

ದಿನ 5 ರಿಂದ 7: ಉಸಿರಾಟದಲ್ಲಿ ತೊಂದರೆ.

ಪರಿಸ್ಥಿತಿಯು ಹದಗೆಟ್ಟಷ್ಟು, ಹೆಚ್ಚೆಚ್ಚು ಅಂಗಾಂಗಗಳ ಮೇಲೆ ಪ್ರಭಾವ ಹೆಚ್ಚಾಗುತ್ತದೆ. ಹೆಚ್ಚು ಸಾಮಾನ್ಯವಾದವು ಶ್ವಾಸಕೋಶ, ಮೂತ್ರಪಿಂಡ, ಮತ್ತು ಹೃದಯ. ಅದಲ್ಲದೆ, COVID-19 ಸೋಂಕು ತೀವ್ರವಾದಷ್ಟು, ಆ ವ್ಯಕ್ತಿಯು ಇತರೆ ಸೋಂಕುಗಳಿಗೆ ಮತ್ತು ಸೆಪ್ಸಿಸ್‍ಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. COVID-19 ಸೋಂಕಿನಿಂದ ಪಾರಾದವರು ಸರಾಸರಿಯಾಗಿ ಆಸ್ಪತ್ರೆಗೆ ಸೇರಿದ ನಂತರ 10 ದಿನಗಳು ಅಲ್ಲಿಯೇ ಇರಬೇಕಾಗುತ್ತದೆ. ಆ ವ್ಯಕ್ತಿಯನ್ನು ಸಾಮಾನ್ಯವಾಗಿ ಕೆಮ್ಮು ಮತ್ತು ಜ್ವರ ಶುರುವಾಗಿ 20 ರಿಂದ 22 ದಿನಗಳ ನಂತರ ರೋಗಮುಕ್ತರೆಂದು ಘೋಷಿಸುತ್ತಾರೆ.

ನೀವು ಏನು ಮಾಡಬಹುದು?

COVID-19 ನಿಂದ ನಿಮಗೆ ಏನೂ ಆಗಬಾರದೆಂದರೆ ನೀವು ಮಾಡಲಾಗುವುದೊಂದೇ, ಅದೇ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳುವುದು. ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ನೀವು ಮಾಡಬಹುದಾದ ಕೆಲವೊಂದು ವಿಷಯಗಳು ಇಲ್ಲಿವೆ.7

ಕನಿಷ್ಟ 20 ಸೆಕೆಂಡುಗಳ ಕಾಲ ಆಗಾಗ್ಗೆ ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆಯಿರಿ.

ನಿಮ್ಮ ಕೈಗಳಿಂದ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಬೇಡಿ, ವಿಶೇಷವಾಗಿ ತೊಳೆಯದ ಕೈಗಳಿಂದ.

ನೀರಿನ ವ್ಯವಸ್ಥೆ ಇಲ್ಲದಿರುವಂತಹ ಸಂದರ್ಭದಲ್ಲಿ ಆಲ್ಕೋಹಾಲ್ ಇರುವ ಸ್ಯಾನಿಟೈಸರ್ (ಕನಿಷ್ಟ ಶೇ. 60 ರಷ್ಟು ಆಲ್ಕೋಹಾಲ್ ಇರುವ) ಬಳಸಿ.

ಸೋಂಕಿತರೊಂದಿಗಿನ ಒಡನಾಟವನ್ನು ಆದಷ್ಟೂ ಕಡಿಮೆ ಮಾಡಿ ಅಥವಾ ಸಾಧ್ಯವಾದರೆ ಸಂಪೂರ್ಣವಾಗಿ ತಪ್ಪಿಸಿ. ರೋಗಿಗಳಿಂದ ಕನಿಷ್ಟಪಕ್ಷ 3 ರಿಂದ 6 ಅಡಿ ಅಂತರವನ್ನು ಕಾಯ್ದುಕೊಳ್ಳುವುದು ಒಳಿತು.

ಸಾಮಾಜಿಕ ಅಂತರವೇ ಕೀಲಿಕೈ.

ನೀವು ಸೋಂಕಿತರಾಗಿದ್ದರೆ, ಈ ಕೆಳಗಿನಂತೆ ವರ್ತಿಸುವುದನ್ನು ಮರೆಯಬೇಡಿ:

ಕೆಮ್ಮುವಾಗ ಅಥವಾ ಸೀನುವಾಗ, ನಿಮ್ಮ ಮೂಗು ಮತ್ತು ಬಾಯಿಯನ್ನು ಕರವಸ್ತ್ರದಿಂದ ಅಥವಾ ಟಿಶ್ಯೂ ಬಳಸಿ ಮುಚ್ಚಿಕೊಳ್ಳಿ. ಅಥವಾ ಸೀನುವಾಗ ನಿಮ್ಮ ಮೊಣಕೈಯನ್ನು ಅಡ್ಡಹಿಡಿಯಿರಿ.

ಒಂಟಿಯಾಗಿರುವುದು ಹಾಗೂ ಇತರರಿಂದ ಸ್ವಯಂ-ಕ್ವಾರಂಟೈನ್‌ ಅನ್ನು ತಪ್ಪದೇ ಪಾಲಿಸಿ.

ಭಾರತದಿಂದ ಹೊರಗೆ ಪ್ರಯಾಣ ಮಾಡಿರುವ ಇತಿಹಾಸವಿರುವ ನೀವು ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೆ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರೆ, ಹೆಚ್ಚಿನ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ.

ಒಬ್ಬ ಕೇರ್ ಗಿವರ್8 ಆಗಿ, ತುರ್ತು ಪರಿಸ್ಥಿತಿಗಳ ಮೇಲೆ ಗಮನವಿರಲಿ, ನೈರ್ಮಲ್ಯವನ್ನು ಕಾಯ್ದುಕೊಳ್ಳಿ ಹಾಗೂ ವೈರಸ್‍ನ ಹರಡುವಿಕೆಯನ್ನು ತಪ್ಪಿಸಿ, ಸೂಚಿಸಿರುವ ಚಿಕಿತ್ಸಾ ಪ್ರಕ್ರಿಯೆಯನ್ನು ಪಾಲಿಸಿ ಹಾಗೂ ಚಿಕಿತ್ಸೆ ಅಥವಾ ಮನೆಯಲ್ಲಿ ಒಂಟಿಯಾಗಿರುವುದನ್ನು ಯಾವಾಗ ನಿಲ್ಲಿಸಬಹುದೆಂಬುದನ್ನು ಪರಿಗಣಿಸಿ.

ಸಾಧ್ಯವಾದರೆ, ಪ್ರತ್ಯೇಕವಾದ ಬಾತ್‍ರೂಮ್ ಅನ್ನು ಬಳಸಲಿ.

ಪಾತ್ರೆಗಳು ಮತ್ತು ಆಹಾರವನ್ನು ಹಂಚಿಕೊಳ್ಳಬೇಡಿ.

ಅವರಿಗೆ ಸೇವೆ ನೀಡುವಾಗ ಮಾಸ್ಕ್ ಒಂದನ್ನು ಧರಿಸಿ.

ಆಗಾಗ ಮುಟ್ಟುವಂತಹ ವಸ್ತು ಅಥವಾ ಜಾಗವನ್ನು ಸ್ವಚ್ಛಗೊಳಿಸುತ್ತಿರಿ.

ಡಾಕ್ಟರ್? ಡಾಕ್ಟರ್!

ಒಂದು ವೇಳೆ ನೀವು COVID-19 ನ ಪರಿಸರದಲ್ಲಿದ್ದು, ಪಟ್ಟಿ ಮಾಡಲಾದ ಗುಣಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ, ನಿಮ್ಮ ವೈದ್ಯರಿಗೆ ಕರೆ ಮಾಡಿ9. ದಯವಿಟ್ಟು ಅವರನ್ನು ಭೇಟಿ ಮಾಡುವ ಮುನ್ನ ಅವರಿಗೆ ಕರೆ ಮಾಡಿ, ಆಗ ಅವರು ತಯಾರಾಗಿ, ಅಗತ್ಯಕ್ಕೆ ತಕ್ಕಂತೆ ನಿಮಗೆ ಏನು ಮಾಡಬಹುದೆಂದು ಸೂಚಿಸಬಹುದು.

ನಿಮಗಾಗಿ ಸಹಾಯವಾಣಿಗಳು!

ಅಲ್ಲದೆ, ಸರ್ಕಾರ ಸ್ಥಾಪಿಸಿದ ಸಹಾಯವಾಣಿಗಳಿಗೆ ನೀವು ಕರೆ ಮಾಡಬಹುದು: + 91-11-23978046. +91 9013151515 ಗೆ ಮೆಸೇಜ್ ಮಾಡುವ ಮೂಲಕ ಭಾರತ ಸರ್ಕಾರ ಪ್ರಾರಂಭಿಸಿರುವ ವಾಟ್ಸಾಪ್ ಚಾಟ್‌ಬಾಟ್ ಅನ್ನು ಸಹ ನೀವು ಬಳಸಬಹುದು. ಭಾರತ ಸರ್ಕಾರ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವೂ ಈ ಉದ್ದೇಶಕ್ಕಾಗಿ ಇಮೇಲ್ ಅನ್ನು ಕೂಡ ಸ್ಥಾಪಿಸಿದೆ.

Similar questions