2. ಈ ವಾಕ್ಯದಲ್ಲಿರುವ ಸರ್ವನಾಮ ಪದ ಗುರುತಿಸಿ ಬರೆಯಿರಿ,
1. ಟಾಮಿ ಸೋಮನ ನಾಯಿ. ಅದು ಆತನಿಗೆ ಒಯು ಪ್ರಿಯ
Answers
Answer:
ನಾಯಿ, ಆತ
Explanation:
ನಾಮಪದದ ಬದಲಿಗೆ ಬಳಸುವ ಪದಗಳೇ ಸರ್ವನಾಮಗಳು. ಇವುಗಳ ಬಳಕೆಯಿಂದಾಗಿ ಏಕತಾನತೆ ಹಾಗೂ ಪುನರಾವರ್ತನೆ ತಪ್ಪಿಸಿದಂತಾಗುತ್ತದೆ. ಸರ್ವನಾಮಗಳಿಂದ ಯಾವುದೇ ಭಾಷೆಯ ಮೂಲಜಾಯನ ತಿಳಿಯಬಹುದಾಗಿದೆ. ಸರ್ವನಾಮಗಳನ್ನು ಯಾವುದೇ ಭಾಷೆಯಿಂದ ಎರವಲು ಪಡೆಯಲಾಗದು.
ದ್ರಾವಿಡ ಭಾಷೆಯ ಸರ್ವನಾಮ, ಸಂಸ್ಕøತ ಭಾಷೆಯ ಸರ್ವನಾಮಗಳಿಗಿಂತ ಭಿನ್ನವಾಗಿದೆ. ದ್ರಾವಿಡ ಭಾಷೆಯ ಸರ್ವನಾಮಗಳನ್ನು ಎರಡು ವಿಧ ಎಂದು ವಿಂಗಡಿಸಲಾಗಿದೆ.
1. ವ್ಯಕ್ತಿ ವಾಚಕ ಸರ್ವನಾಮ
2. ದರ್ಶಕ ವಾಚಕ ಸರ್ವನಾಮ
ಆದರೆ ಥಾಮಸ್ ಬರೋ ಕನ್ನಡದಲ್ಲಿ ದ್ವಿವಿಧ ಸರ್ವನಾಮ ಇಲ್ಲ ಎಂದಿದ್ದಾರೆ.
• ಸರ್ವನಾಮದಲ್ಲಿ ಮೂರು ವಿಧ
1. ಪುರುಷಾರ್ಥಕ ಸರ್ವನಾಮ
2. ಪ್ರಶ್ನಾರ್ಥಕ ಸರ್ವನಾಮ
3. ಆತ್ಮಾರ್ಥಕ ಸರ್ವನಾಮ
➤ 1. ಪುರುಷಾರ್ಥಕ ಸರ್ವನಾಮ
ಕನ್ನಡದ ಸರ್ವನಾಮಗಳಲ್ಲಿ ಪುರುಷಾರ್ಥಕ ಸರ್ವನಾಮವನ್ನು ಬಹಳ ವ್ಯವಸ್ಥಿತವಾಗಿ ಬಳಸಲಾಗಿದೆ.
• ಪುರುಷಾರ್ಥಕ ಸರ್ವನಾಮದಲ್ಲಿ ಮೂರು ವಿಧ
1. ಉತ್ತಮ ಪುರುಷ ಸರ್ವನಾಮ : ತನ್ನನ್ನು ತಾನೇ ಸಂಬೋಧಿಸಿಕೊಳ್ಳಲು ಬಳಸುವ ಸರ್ವನಾಮವೇ ಉತ್ತಮ ಪುರುಷ ಸರ್ವನಾಮ.
ಇದು ಹಳೆಗನ್ನಡದಲ್ಲಿ ಆಂ, ಆನ್, ನಾನ್, ನಾಂ ಎಂಬ ಏಕವಚನ- ಬಹುವಚನ ರೂಪದಲ್ಲಿದ್ದವು. ನಡುಗನ್ನಡ ಕಾಲದಲ್ಲಿ ನಾನ್, ನಾಂ ಎಂಬ ರೂಪ ಪಡೆದವು. ಹೊಸಗನ್ನಡದ ವೇಳೆ ಸ್ವರಾಂತ್ಯ ರೂಪ ಪಡೆದು ನಾನು, ನಾವು ಎಂಬ ಬಳಕೆಯಾಯಿತು.
2. ಮಧ್ಯಮ ಪುರುಷ ಸರ್ವನಾಮ : ತನ್ನ ಎದುರಿಗೆ ಇರುವವರನ್ನು ಸಂಬೋಧಿಸಲು ಬಳಸುವ ಪದವೇ ಮಧ್ಯಮ ಪುರುಷ ಸರ್ವನಾಮ. ಹಳೆಗನ್ನಡ ಕಾಲದಲ್ಲಿ ನೀಂ – ನೀನ್ ಎಂದು ಬಳಕೆಯಾಗುತ್ತಿತ್ತು. ಹೊಸಗನ್ನಡ ಕಾಲದಲ್ಲಿ ಸ್ವರಾಂತ್ಯರೂಪ ಪಡೆದು ನೀನು, ನೀವು ಎಂದು ಬಳಕೆಯಾಗುತ್ತಿದೆ.
3. ಪ್ರಥಮ ಪುರುಷ : ತಾನು ಹಾಗೂ ಎದುರಿನ ವ್ಯಕ್ತಿ ಇಬ್ಬರನ್ನು ಹೊರತುಪಡಿಸಿ ಮೂರನೇ ವಸ್ತು- ವ್ಯಕ್ತಿಯನ್ನು ಸೂಚಿಸಲು ಬಳಸುವ ಪದವೇ ಪ್ರಥಮ ಪುರುಷ ಸರ್ವನಾಮ. ಹಳೆಗನ್ನಡದಲ್ಲಿ ಅವನ್, ಅವಳ್, ಆತನ್, ಇವನ್ ಎಂದು ಬಳಕೆಯಾಗುತ್ತಿತ್ತು. ಹೊಸಗನ್ನಡದಲ್ಲಿ ಅವನು, ಇವಳು, ಅದು, ಇದು ಎಂದು ಬಳಕೆಯಾಗುತ್ತಿವೆ.
➤ 2. ಪ್ರಶ್ನಾರ್ಥಕ ಸರ್ವನಾಮ :
ಪ್ರಶ್ನಿಸಲು ಬಳಕೆ ಮಾಡುವ ಸರ್ವನಾಮಗಳೇ ಪ್ರಶ್ನಾರ್ಥಕ ಸರ್ವನಾಮಗಳಾಗಿವೆ. ಹಳೆಗನ್ನಡ ಕಾಲಘಟ್ಟದಲ್ಲಿ ಏಕೆ, ಏನ್, ಅವನ್, ಅವಳ್, ಅವುದ್, ಅವು ಎಂದು ಬಳಕೆಯಾಗುತ್ತಿತ್ತು. ಹೊಸಗನ್ನಡದ ಕಾಲದಲ್ಲಿ ಈ ಪದಗಳು ಸ್ವರಾಂತ್ಯ ಹೊಂದಿ ಏಕೆ, ಏನು, ಅವನು, ಅವಳು, ಯಾವುದು, ಯಾವುವು ಎಂಬಂತೆ ಬದಲಾವಣೆಗೊಂಡಿದೆ.
➤ 3. ಆತ್ಮಾರ್ಥಕ ಸರ್ವನಾಮ
ತನ್ನನ್ನು ತಾನೇ ಆತ್ಮಪೂರ್ವಕವಾಗಿ ಸಂಬೋಧಿಸಿಕೊಳ್ಳಲು ಬಳಸುವ ಸರ್ವನಾಮವೇ ಆತ್ಮಾರ್ಥಕ ಸರ್ವನಾಮವಾಗಿದೆ. ಹಳೆಗನ್ನಡದಲ್ಲಿ ‘ ತಾನ್’ ಎಂಬುದು ಏಕ ವಚನವಾಗಿಯೂ, ‘ತಾಮ್’ ಎಂಬುದು ಬಹುವಚನವಾಗಿ ಬಳಕೆಗೊಡಿದ್ದವು. ಹೊಸಗನ್ನಡದಲ್ಲಿ ತಾನು, ತಾವು ಎಂದು ಬಳಕೆಯಾಗುತ್ತಿದೆ.