India Languages, asked by safianasreen1234, 6 months ago

2.ಕಳಿಂಗ ಯುದ್ಧದ ಪರಿಣಾಮವೇನು ?​

Answers

Answered by shoaibkhan07715
2

Answer:

hrticdhiijnvdtibbetji GE dguui

Answered by veekvjy
4

ಯುದ್ಧದ ನಂತರ ಸಂಪೂರ್ಣ ಕಳಿಂಗವನ್ನು ಸಂಪೂರ್ಣ ಲೂಟಿ ಮತ್ತು ನಾಶ ಮಾಡಲಾಯಿತು. ಯುದ್ಧವು ಸುಮಾರು ೧ ಲಕ್ಷ ಜನರ ಸಾವು ಮತ್ತು ಒಂದೂವರೆ ಲಕ್ಷ ಜನರ ಗಡಿಪಾರಾಗಲು ಕಾರಣವಾಯಿತು. ಈ ಕ್ರೌರ್ಯದಿಂದ ನೊಂದ ಅಶೋಕನು ಯುದ್ಧದ ಬಗೆಗಿನ ತನ್ನ ನಿಲುವನ್ನು ಬದಲಾಯಿಸಿ ಮುಂದೆಂದೂ ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧವನ್ನು ಮಾಡದಿರಲು ಪಣ ತೊಟ್ಟನು. ನಂತರ ಬೌದ್ಧಧರ್ಮ ಸ್ವೀಕರಿಸಿ ತನ್ನ ಅಧಿಕಾರವನ್ನೆಲ್ಲ ಈ ಹೊಸಧರ್ಮದ ಪ್ರಚಾರಕ್ಕಾಗಿ ಬಳಸಿದನು.

ಕಳಿಂಗ ಯುದ್ಧದ ಬಗೆಗಿನ ಅಶೋಕನ ಪ್ರತಿಕ್ರಿಯೆಯನ್ನು ಅವನ ಹದಿಮೂರನೆ ಶಾಸನದಲ್ಲಿ ದಾಖಲಿಸಲಾಗಿದೆ. ಕಳಿಂಗವನ್ನು ವಶಪಡಿಸಿದ ನಂತರ ಅಶೋಕನು ಸೇನಾ ವಿಸ್ತರಣೆಯನ್ನು ನಿಲ್ಲಿಸಿ, ಮುಂದಿನ ೪೦ ವರ್ಷಗಳಿಗೂ ಹೆಚ್ಚು ಕಾಲ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿಯಿಂದ ತನ್ನ ಸಾಮ್ರಾಜ್ಯವನ್ನು ಆಳಿದನು.

ಶಿಲಾ ಶಾಸನ ೧೩ "ದೇವರುಗಳಿಗೆ ಪ್ರಿಯನಾದ, ರಾಜ ಪ್ರಿದರ್ಶಿ, ಕಳಿಂಗ ದೇಶವನ್ನು ಕಿರೀಟಧಾರಣೆಯ ತರುವಾಯದ ಎಂಟನೇ ವರ್ಷದಲ್ಲಿ ವಶಪಡಿಸಿದನು. ಸುಮಾರು ಒಂದೂವರೆ ಲಕ್ಷ ಜನರ ಗಡಿಪಾರಾದರು, ೧ ಲಕ್ಷಕ್ಕು ಹೆಚ್ಚು ಜನರು ಸಾವನ್ನಪಿದರು(ನಾನಾ ಕಾರಣಗಳಿಂದ). ಕಳಿಂಗರನ್ನು ವಶಪಡಿಸಿಕೊಂಡ ನಂತರ ದೇವರುಗಳಿಗೆ ಪ್ರಿಯನಾದವನು, ತನ್ನಲ್ಲಿ ಧರ್ಮದೆಡೆಗೆ, ಧರ್ಮದ ಪ್ರೇಮದೆಡೆಗೆ ಮತ್ತು ಧರ್ಮದಲ್ಲಿ ಪಾಠದೆಡೆಗೆ ಬಲವಾದ ಓರೆಯನ್ನು ಕಂಡನು. ಈಗ ದೇವರುಗಳಿಗೆ ಪ್ರಿಯನಾದವನು ಕಳಿಂಗವನ್ನು ವಶಪಡಿಸಿಕೊಂಡಿದ್ದಕ್ಕೆ ತೀವ್ರ ಪಶ್ಚಾತ್ತಾಪ ಪಡುತ್ತಿದ್ದಾನೆ"

Similar questions