2) ಮಾತಿನ ಬಗ್ಗೆ ಸರ್ವಜ್ಞ ಏನೆಂದು ಹೇಳುತ್ತಾನೆ?
Answers
ಸಾಮಾನ್ಯವಾಗಿ ಸಂತರು ಲೋಕಹಿತವನ್ನೇ ಬಯಸುವವರಾಗಿರುತ್ತಾರೆ. ‘ವಸುದೈವ ಕುಟುಂಬಕಂ’ ಎಂಬ ಸಂಸ್ಕೃತ ಲೋಕೋಕ್ತಿಯಂತೆ ಇಡೀ ಭೂಮಂಡಲವೇ ಒಂದು ಕುಟುಂಬ ಎಂದು ಅವರು ತಿಳಿದಿರುತ್ತಾರೆ. ‘ಯಾದುಂ ಊರೇ ಯಾವರುಂ ಕೇಳಿರ್’ ಎಂಬ ತಮಿಳು ಉಕ್ತಿಯೂ ಉಂಟು. ‘ಎಲ್ಲವೂ ನಮ್ಮೂರೇ, ಎಲ್ಲರೂ ನಮ್ಮ ಗೆಳೆಯರೇ’ ಎನ್ನುವುದು
-ಡಾ. ಸಿ.ಎಸ್. ಊರ್ಮಿಳಾ
ಸಾಮಾನ್ಯವಾಗಿ ಸಂತರು ಲೋಕಹಿತವನ್ನೇ ಬಯಸುವವರಾಗಿರುತ್ತಾರೆ. ‘ವಸುದೈವ ಕುಟುಂಬಕಂ’ ಎಂಬ ಸಂಸ್ಕೃತ ಲೋಕೋಕ್ತಿಯಂತೆ ಇಡೀ ಭೂಮಂಡಲವೇ ಒಂದು ಕುಟುಂಬ ಎಂದು ಅವರು ತಿಳಿದಿರುತ್ತಾರೆ. ‘ಯಾದುಂ ಊರೇ ಯಾವರುಂ ಕೇಳಿರ್’ ಎಂಬ ತಮಿಳು ಉಕ್ತಿಯೂ ಉಂಟು. ‘ಎಲ್ಲವೂ ನಮ್ಮೂರೇ, ಎಲ್ಲರೂ ನಮ್ಮ ಗೆಳೆಯರೇ’ ಎನ್ನುವುದು ಅವರ ತತ್ವ.
ಊರೆಲ್ಲ ನೆಂಟರು ಕೇರಿಯೆಲ್ಲವು ಬಳಗ
ಧಾರಿಣಿಯು ಎಲ್ಲ ಕುಲದೈವವಾಗಿನ್ನು
ಯಾರನ್ನು ಬಿಡಲೋ ಸರ್ವಜ್ಞ
ಎಂದು ಸರ್ವಜ್ಞ ಹೇಳಿದ್ದಾನೆ. ವಿಶ್ವಬಾಂಧವ್ಯದದ ಸತ್ವವನ್ನು ಕಂಡುಕೊಂಡ ಕೆಲವೇ ಸಂತರಲ್ಲಿ ತಮಿಳು ಸಂತ ತಿರುವಳ್ಳುವರ್ (ಕ್ರಿ.ಪೂ. 2ನೇ ಶತಮಾನ) ಮತ್ತು ಕನ್ನಡದ ಸಂತ ಸರ್ವಜ್ಞ (ಕ್ರಿ.ಶ. 16ನೇ ಶತಮಾನ) ಇದ್ದಾರೆ. ಈ ಸಮಾಜವು ಕಂಡಕಂಡವರನ್ನೆಲ್ಲಾ ’ವಿಶ್ವಮಾನವ’ ಎನ್ನುವುದಿಲ್ಲ. ಸಮಾಜದ ಉದ್ಧಾರಕ್ಕಾಗಿ, ಲೋಕಹಿತಕ್ಕಾಗಿ ಅನವರತ ಶ್ರಮಿಸುವವರನ್ನು ಮಾತ್ರ ಅದು ಗುರುತಿಸುತ್ತದೆ.
ಕನ್ನಡ ಕುಲಕೋಟಿಗೆ ಚಿರಪರಿಚತನಾದವನು ಸರ್ವಜ್ಞ. ‘ಸರ್ವಜ್ಞ’ ಎಂದರೆ ಎಲ್ಲವನ್ನೂ ತಿಳಿದವನು. ಇವನು ಕನ್ನಡಿಗರನ್ನು ಮಾತ್ರವಲ್ಲ, ಇಡೀ ಮಾನವ ಜನಾಂಗದ ಮನವನ್ನು ಸೂರೆಗೊಂಡ ಮಹಾನ್ ವ್ಯಕ್ತಿ. ಸ್ವರ್ಗ, ಮರ್ತ್ಯ, ಪಾತಾಳವೆಂಬ ಮೂಲೋಕಗಳನ್ನೂ ಮೂರಡಿಯಿಟ್ಟು ಅಳೆದ ತ್ರಿವಿಕ್ರಮನಂತೆ ಲೋಕಾನುಭವದ ವೈವಿಧ್ಯವನ್ನು ಮೆರೆದು ‘ತ್ರಿಪದಿ ಚಕ್ರವರ್ತಿ’ ಎನಿಸಿಕೊಂಡವನು ಸರ್ವಜ್ಞ. ಗುರು, ಷಟ್‌ಸ್ಥಲ, ದೈವಭಕ್ತ, ಜ್ಞಾನ, ಯೋಗ, ದಾನ, ರಾಜನೀತಿ, ವಿಧಿಲೀಲೆ, ಕಾಲಜ್ಞಾನ, ನೀತಿ, ಒಳಿತು-ಕೆಡಕು, ವೈದ್ಯ ಹೀಗೆ ವೈವಿಧ್ಯಮಯ ಪ್ರಪಂಚ ಸರ್ವಜ್ಞನದು.
ಕಂಡಂತೆ ಹೇಳಿದರೆ ಕೆಂಡವಾಗುವುದು ಭೂ
ಮಂಡಲದೊಳಗೆ ಖಂಡಿತವನಾಡುವರ
ಕಂಡಿಹುದೆ ಕಷ್ಟ ಸರ್ವಜ್ಞ
ಎಂದು ಖಂಡಿತವಾದಿಗಳು ಬಹು ವಿರಳ ಎಂದು ಹೇಳಿದ್ದಾನೆ. ಸಮಾಜದಲ್ಲಿ ಜಾತಿ, ಮತ, ಪಂಗಡಗಳೆಂಬ ಪಿಡುಗು ಇಂದಿನದಲ್ಲ. ಅಂದಿನ ಕಾಲದಲ್ಲೂ ಇತ್ತು. ಇದನ್ನು ಕಂಡು ಕೋಪಗೊಂಡ ಅವನು-
ನಡೆವುದೊಂದೇ ಭೂಮಿ ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು ಕುಲಗೋತ್ರ
ನಡುವೆ ಎತ್ತಣದು ಸರ್ವಜ್ಞ