Science, asked by furkankharadifurkan, 28 days ago

2) ಕುವೆಂಪುರವರ ಪ್ರಕೃತಿ ತನ್ಮಯತೆಯ ಮಲೆನಾಡ ಸೊಬಗು ಹಸುರು ಪದ್ಯದಲ್ಲಿ ಹೇಗೆ ಮೂಡಿ ಬಂದಿದೆ ಎಂದು ವಿವರಿಸಿ​

Answers

Answered by Anonymous
2

ಉತ್ತರ:

ಪ್ರಕೃತಿಯ ಹಸುರು ಮನುಷ್ಯ ಮಾತ್ರನಿಗೆ ಸೀಮಿತವಾಗಿರದೆ ಪ್ರಕೃತಿಯಲ್ಲಿನ ಹಸುರು ಇಡೀ ಜೀವ ಜಗತ್ತಿಗೆ ಬಹಳ ಮುಖ್ಯ ಎಂಬುದಾಗಿ ಕವಿ ತಮ್ಮ ಕವನ ಹಸುರಿನ ಮೂಲಕ ಹಸುರಿನ ವ್ಯಾಪಕತೆಯನ್ನು ವಿವರಿಸಿದ್ದಾರೆ. ಮನುಷ್ಯ-ಪ್ರಾಣಿ ಎಲ್ಲಾ ಜೀವಿಗಳಿಗೂ ಪುಕೃತಿಯಲ್ಲಿನ ಗಿಡಮರಗಳ, ಆಹಾರ ಸಸ್ಯಗಳ ಹಸಿರೇ ಉಸಿರಾಗಿರುತ್ತದೆ.

ಉದಾಹರಣೆಗೆ: ಆಡು, ದನ, ಹಸು ಮುಂತಾದವುಗಳಿಗೆಲ್ಲ ಮರದ ಹಸಿರೆಲೆ, ಭೂತಾಯಿಯ ಮೇಲೆ ಬೆಳೆಯುವ ಹುಲ್ಲು, ಸೊಪ್ಪು, ಮರಗಿಡಗಳ ಎಲೆಗಳೇ ಮುಖ್ಯ ಕಾರಣವಾಗಿರುತ್ತವೆ. ಇನ್ನು ಮನುಷ್ಯನು ಪರಕೃತಿಯ ಮೇಲಿನ ಎಲ್ಲಾ ಸಸ್ಯಗಳನ್ನು ಅವಲಂಬಿಸಿದ್ದಾನೆ. ಗದ್ದೆಗಳಲ್ಲಿನ ಭತ್ತ, ಅಡಿಕೆ, ಹೂ, ಪ್ರತಿಯೊಂದು ಸಸ್ಯವನ್ನು ಮನುಷ್ಯನು ಅವಲಂಬಿತನಾಗುತ್ತಾನೆ.

ಬೆಟ್ಟವನ್ನು ಆವರಿಸುವ ಹಸುರು ಗಿಡ ಮರಗಳು ಮಾನವನ ಜೀವನದಲ್ಲಿ ಬಹಳ ಪ್ರಮುಖವಾದುದಾಗಿದೆ. ಮತ್ತೆ ಕೆಲವು ಮರಗಿಡಗಳು ಔಷಧ ರೂಪದಲ್ಲಿ ಆಹಾರ ರೂಪದಲ್ಲಿ ಮತ್ತೆ ಕೆಲವು ಬಟ್ಟೆಗಳ ರೂಪದಲ್ಲಿ ಹೊಂದಿರುತ್ತವೆ. ಇನ್ನು ಮನುಷ್ಯನು ವಾಸಿಸುವ ಮನೆ, ಅದನ್ನು ಕಟ್ಟಲು ಉಪಯೋಗಿಸುವ ಬೆಲೆಬಾಳುವ ಮರಗಳನ್ನು ಉಪಯೋಗಿಸಿ ಮನೆಕಟ್ಟಲು ಹಾಗೂ ಪೀಠೋಪಕರಣಕ್ಕೆ ಉಪಯೋಗಿಸುತ್ತಿದ್ದಾನೆ.

ಹಸುರಿಲ್ಲದೆ ಮನುಷ್ಯ ಜೀವಿಸಲಾರ ಎಂಬುವಷ್ಟು ಮಟ್ಟಿಗೆ ಮನುಷ್ಯನು ಹಸುರನ್ನು ಅವಲಂಬಿಸಿದ್ದಾನೆ ಎಂದರೆ ಮನುಷ್ಯನ ಸಕಲೇಂದ್ರಿಗಳು ಪುಕೃತಿ ಹಸುರನ್ನು ವ್ಯಾಪಿಸಿದ ಎಂಬುದನ್ನು ಕವಿ 'ಹಸುರು' ಕವಿತೆಯಲ್ಲಿ ತಿಳಿಸಿಕೊಟ್ಟಿದ್ದಾರೆ.ಈ ರೀತಿ ಕುವೆಂಪುರವರ ಪ್ರಕೃತಿ ತನ್ಮಯತೆಯ ಮಲೆನಾಡ ಸೊಬಗು ಹಸುರು ಪದ್ಯದಲ್ಲಿ ಮೂಡಿ ಬಂದಿದೆ.

ಧನ್ಯವಾದಗಳು.

Similar questions