2. ಮಕ್ಕಳ ಮನಸ್ಸಿಗೆ ಉಲ್ಲಾಸ ತಂದ ಸಂಗತಿ ಯಾವುದು?
Answers
Answer:
ಬಾಲಸಂಸ್ಕಾರ > ಪಾಲಕರು > ಮಕ್ಕಳ ಸಮಸ್ಯೆಗಳು > ಮಕ್ಕಳ ವಿವಿಧ ಮಾನಸಿಕ ಸಮಸ್ಯೆಗಳು ಹಾಗೂ ಅವುಗಳ ಉಪಾಯಗಳು
ಮಕ್ಕಳ ವಿವಿಧ ಮಾನಸಿಕ ಸಮಸ್ಯೆಗಳು ಹಾಗೂ ಅವುಗಳ ಉಪಾಯಗಳು
ಈಗ ನಾವು ಮಕ್ಕಳಲ್ಲಿ ಯಾವಾಗಲೂ ಕಾಣಿಸಿಕೊಳ್ಳುವ ಮಾನಸಿಕ ಸಮಸ್ಯೆಗಳನ್ನು ಹಾಗೂ ಮನೆಯಲ್ಲಿಯೇ ಅವುಗಳ ಮೇಲೆ ಮಾಡಬಹುದಾದ ಉಪಾಯಗಳ ಬಗ್ಗೆ ತಿಳಿದುಕೊಳ್ಳೋಣ.
ಉಗುರು ಕಚ್ಚುವುದು, ಬೆರಳು ಚೀಪುವುದು, ಕೂದಲು ಎಳೆಯುವುದು ಇತ್ಯಾದಿ ರೂಢಿಗಳು
ಉಗುರು ಕಚ್ಚುವುದರಿಂದ ಆಗುವ ಅಪಾಯವನ್ನು ತಿಳಿಸಿ ಹೇಳಬೇಕು : ಮಗುವು ಆಗಾಗ ಉಗುರು ಕಚ್ಚುತ್ತಿರುವುದು ಕಂಡುಬಂದರೆ ಅದರ ಕಡೆಗೆ ದುರ್ಲಕ್ಷಿಸುವುದೇ ಉತ್ತಮ; ಆದರೆ ಅವನಿಗೆ ಉಗುರು ಕಚ್ಚುವ ರೂಢಿಯಾದಲ್ಲಿ 'ಉಗುರಿನಲ್ಲಿರುವ ಕೊಳೆ ಹೊಟ್ಟೆಗೆ ಹೋಗುವುದರಿಂದ ಅಪಾಯವಾಗುತ್ತದೆs' ಎಂದು ತಿಳಿಸಿ ಹೇಳಬೇಕು.
ಮಕ್ಕಳಿಗೆ 'ನೀನು ಉಗುರು ಕಚ್ಚುವುದರಿಂದ ಚೆನ್ನಾಗಿ ಕಾಣಿಸುವುದಿಲ್ಲ; ಆದರೆ ಉಗುರು ಕಚ್ಚದೇ ಇದ್ದರೆ ಕೈಗಳು ಸುಂದರವಾಗಿ ಕಾಣಿಸುತ್ತವೆ' ಎಂದು ಹೇಳಬೇಕು.
ಬೆರಳುಗಳಿಗೆ ಎಣ್ಣೆ ಹಚ್ಚಿ ಮೃದುವಾಗಿಟ್ಟರೆ ಉಗುರು ಕಚ್ಚುವ ಪ್ರಮಾಣ ಕಡಿಮೆಯಾಗುತ್ತದೆ, ಏಕೆಂದರೆ ಮಕ್ಕಳಿಗೆ ಮೃದುವಾದ ಉಗುರುಗಳನ್ನು ಕಚ್ಚುವುದು ಇಷ್ಟವಾಗುವುದಿಲ್ಲ.
ಮಗುವು ಮಲಗಿದ ನಂತರ ಮೊದಲ ೫ ನಿಮಿಷಗಳಲ್ಲಿ (ಸಮ್ಮೋಹನಾವಸ್ಥೆಯಲ್ಲಿ) ಸೂಚನೆ ಕೊಡುವುದು : ಮಗುವು ಮಲಗಿದ ನಂತರ ಮೊದಲ ೫ ನಿಮಿಷಗಳಲ್ಲಿ ನಾವು ಎಚ್ಚರದಿಂದಿದ್ದು ಉಗುರು ತಿನ್ನುವುದರ ಬಗ್ಗೆ ತಿಳಿಸಿ ಹೇಳಬೇಕು. ನಂತರ 'ನಿನಗೆ ಉಗುರು ತಿನ್ನಲು ಪ್ರಾರಂಭಿಸುತ್ತಲೇ ತಿಳಿಯುವುದು ಹಾಗೂ ನೀನು ಅದನ್ನು ನಿಲ್ಲಿಸಬಹುದು' ಎಂದು ಸೂಚನೆ ಕೊಡಬೇಕು; ಏಕೆಂದರೆ ನಿದ್ದೆಯಲ್ಲಿ ಮೊದಲ ೫ ನಿಮಿಷಗಳು ಸಮ್ಮೋಹನಾವಸ್ಥೆಯಂತೆ ಇರುತ್ತದೆ. ಈ ಸಮಯದಲ್ಲಿ ನೀಡಿದ ಸೂಚನೆಯು ಪರಿಣಾಮಕಾರಿಯಾಗಿರುತ್ತದೆ.
ಕೆಟ್ಟ ರೂಢಿಗಳನ್ನು ಬಿಡಿಸಲು ಬಹುಮಾನ ನೀಡುವುದು : ಆಗಾಗ ಉಗುರುಗಳನ್ನು ಕಚ್ಚದಿದ್ದರೆ ಬಹುಮಾನ ಕೊಡುತ್ತೇನೆ ಎಂದು ಹೇಳಿ ಮಕ್ಕಳಿಗೆ ಅಯೋಗ್ಯ ರೂಢಿಗಳನ್ನು ಬಿಡಲು ಉತ್ತೇಜಿಸಬಹುದು.
ಭಯಂಕರ ಉಪಾಯ ಮಾಡುವುದನ್ನು ತಡೆಯಬೇಕು : ಉಗುರಿಗೆ ಕಹಿ ಔಷಧವನ್ನು ಹಚ್ಚುವುದು, ಅಂಟುಪಟ್ಟಿ (ಪ್ಲಾಸ್ಟರ್) ಹಚ್ಚುವುದು ಇತ್ಯಾದಿ ಉಪಾಯಗಳನ್ನು ಮಾಡಲೇಬಾರದು. ಇದರಿಂದ ಆ ರೂಢಿಯು ಹೆಚ್ಚಾಗುವ ಸಾಧ್ಯತೆಯಿರುತ್ತದೆ.
please mark as brainlist