2. ನಾಲ್ವಡಿ ಕೃಷ್ಟರಾಜ ಒಡೆಯರಿಗೆ ರೀಜೆಂಟ್ ಆಗಿ ಕಾರ್ಯ ನಿರ್ವಹಿಸಿದವರು
Answers
Answer:
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.[೧]
ನಾಲ್ವಡಿ ಕೃಷ್ಣರಾಜ ಒಡೆಯರ್
ಮೈಸೂರು ದೊರೆಗಳು
Maharaja Sir Sri Krishnaraja Wodiyar 1906 by 1906 K Keshavayya.jpg
ನಾಲ್ವಡಿ ಕೃಷ್ಣರಾಜ ಒಡೆಯರ್ (೧೯೦೫ರಲ್ಲಿ ಕಲಾವಿದರಾದ ಕೆ.ಕೇಶವಯ್ಯ ವಿರಚಿತ)
ರಾಜ್ಯಭಾರ
೧೮೯೫-೧೯೪೦
ಪಟ್ಟಾಭಿಷೇಕ
29 ಫೆಬ್ರವರಿ 1896, ಮೈಸೂರು ಅರಮನೆ
ಜನನ
೦೪ ಜೂನ್ ೧೮೮೪
ಜನ್ಮ ಸ್ಥಳ
ಮೈಸೂರು ಅರಮನೆ, ಮೈಸೂರು, ಮೈಸೂರು ರಾಜ್ಯ
ಮರಣ
೦೩ ಆಗಸ್ಟ್ ೧೯೪೦ (ವಯಸ್ಸು ೫೬)
ಮರಣ ಸ್ಥಳ
ಬೆಂಗಳೂರು ಅರಮನೆ, ಬೆಂಗಳೂರು, ಮೈಸೂರು ರಾಜ್ಯ
ಪೂರ್ವಾಧಿಕಾರಿ
ಹತ್ತನೇ ಚಾಮರಾಜ ಒಡೆಯರ್ (ತಂದೆ)
ಉತ್ತರಾಧಿಕಾರಿ
ಜಯಚಾಮರಾಜೇಂದ್ರ ಒಡೆಯರ್
Consort to
ಲಕ್ಷ್ಮೀ ವಿಲಾಸ ಸನ್ನಿಧಾನ ಶ್ರೀ ಪ್ರತಾಪ ಕುಮಾರಿ ಅಮ್ಮಣ್ಣಿಯವರು
ಅರಮನೆ
ಒಡೆಯರ್ ಸಾಮ್ರಾಜ್ಯ
ತಂದೆ
ಹತ್ತನೇ ಚಾಮರಾಜ ಒಡೆಯರ್
ತಾಯಿ
ಮಹಾರಾಣಿ ಕೆಂಪನಂಜಮ್ಮಣ್ಣಿ
ಧಾರ್ಮಿಕ ನಂಬಿಕೆಗಳು
ಹಿಂದೂ