India Languages, asked by lakshmiparmesh, 1 month ago

22.7 ಐದಾರು ವಾಕ್ಯಗಳಲ್ಲಿ ಉತ್ತರಿಸಿ:
ಶಕುಂತಲೆ ತನ್ನ ಬದುಕನ್ನು ಅರ್ಥೈಸಿಕೊಂಡದ್ದು ಹೇಗೆ? ತಿಳಿಸಿ.​

Answers

Answered by trisha8970
13

Answer:

ದುಷ್ಯಂತ ಮಹಾರಾಜನು ಆಶ್ರಮಕ್ಕೆ ಬಂದು ಆಕೆಯ ಎದುರಿಗೆ ಅಂದು ನಾನು ನನ್ನ ಅರಮನೆಯಿಂದ ನಿನ್ನನ್ನು ನಿಷ್ಟುರವಾಗಿ ಹೊರಗಟ್ಟಿದೆ. ನನ್ನಿಂದ ಮಹಾ ಅಪರಾಧವಾಗಿದೆ. ನನ್ನನ್ನು ಕ್ಷಮಿಸು. ನಾನೀಗ ಪಶ್ಚಾತಾಪದ ಬೆಂಕಿಯಲ್ಲಿ ಬೆಂದಿರುವೆನು ಎಂದು ಕ್ಷಮೆಯಾಚಿಸಿದ ಹಾಗೆ ಭಾಸವಾದಾಗ ಅಪರಾಧ, ಪಶ್ಚಾತಾಪ, ಕ್ಷಮೆ ಈ ಪದಗಳಿಗೆ ನನ್ನ ದೃಷ್ಟಿಯಲ್ಲಿಯಾವ ಅರ್ಥವೂ ಉಳಿದಿಲ್ಲ. ನೂರು ಆಸೆ ಹೊತ್ತು ನಿನ್ನೆಡೆ ಬಂದಿದ್ದ ನನ್ನನ್ನು ನೀನು ಎಂದು ತಿರಸ್ಕರಿಸಿದೆಯೋ, ಜೀವನದ ಬಹುಪಾಲು ಮಧುರ ಭಾವನೆಗಳೆಲ್ಲ ಆ ದಿನವೇ ಸತ್ತುಹೋದವು.. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ನನ್ನ ಬದುಕು ಅಗ್ನಿಕುಂಡವಾಗಿದೆ. ಬೆಂಗಾಡಾಗಿದೆ. ದಾವಾನಲವಾಗಿದೆ. ಬತ್ತಿಹೋದ ಸಮುದ್ರವೂ ಆಗಿದೆ. . ಇಂತಹ ನಾನು ಈತನನ್ನು ಸ್ವೀಕರಿಸಬೇಕಂತೆ ಏನಿದು ವಿಧಿಯ ಕ್ರೂರ ಅಪಹಾಸ್ಯ ಎಂದು ತನ್ನ ಬದುಕನ್ನು ಅರ್ಥೈಸಿಕೊಂಡಳು.

Nivu eal enda??

Similar questions