ವನ್ಯ ಪ್ರಾಣಿಗಳ ಸಂರಕ್ಷಣೆ ಕುರಿತು ಒಂದು ಪ್ರಬಂಧ ಬರೆಯಿರಿ ಇದು ನನಗೆ ಪ್ರಾಜೆಕ್ಟ್ ಬೇಕಾಗಿತ್ತು ಅದಕ್ಕೆ 3/4 ಪೇಜ್ ಸೆಂಡ್ ಮಾಡ್ತೀರಾ ಪ್ಲೀಸ್
Answers
Answered by
1
ವನ್ಯ ಪ್ರಾಣಿಗಳ ಸಂರಕ್ಷಣೆ:
ವನ್ಯಜೀವಿಗಳಿಗೆ ಇನ್ನೊಂದು ಉದಾಹರಣೆಯಾದ ಒಂದು ಬಾಟಲ್‌ನೋಸ್ ಕೆನಡಿ ಸ್ಪೇಸ್ ಸೆಂಟರ್ ಬಳಿಯ ಬನಾನಾ ನದಿಯಲ್ಲಿ ಸಂಶೋಧನಾ ದೋಣಿಯೊಂದು ಎಬ್ಬಿಸಿದ ಅಲೆಯ ಮೇಲೆ ಸರ್ಫ್ ಮಾಡುತ್ತಿರುವುದು.
ವನ್ಯಜೀವಿಗಳು ಎಲ್ಲಾ ರೀತಿಯ ಪರಿಸರದಲ್ಲೂ ಕಂಡು ಬರುತ್ತವೆ. ಮರುಭೂಮಿ, ಮಳೆಕಾಡು, ಬಯಲು ಪ್ರದೇಶ ಹಾಗೂ ಸಂಪೂರ್ಣ ಅಭಿವೃದ್ಧಿ ಹೊಂದಿದ ನಗರ ಪ್ರದೇಶಗಳಲ್ಲೂ ವನ್ಯಜೀವಿ ಪ್ರಭೇದಗಳನ್ನು ಕಾಣಬಹುದು. ಜನಪ್ರಿಯ ಸಂಸ್ಕೃತಿಯ ಸಾಮಾನ್ಯ ಉಲ್ಲೇಖದಂತೆ ವನ್ಯಜೀವಿ ಸಂಕುಲ ಮಾನವ ಸಂಗದಿಂದ ಪ್ರತ್ಯೇಕ ಇರಬಯಸುತ್ತವೆ. ಅದರೆ, ಪ್ರಪಂಚದಾದ್ಯಂತ ವನ್ಯಜೀವಿ ಸಂಕುಲದ ಮೇಲೆ ಮಾನವನ ಚಟುವಟಿಕೆಗಳು ಪ್ರಭಾವ ಬೀರಿವೆ ಎಂಬುದನ್ನು ಬಹಳಷ್ಟು ವಿಜ್ಞಾನಿಗಳೇ ಒಪ್ಪುತ್ತಾರೆ.[೨]
ಮಾನವನು ಇತಿಹಾಸ ಕಾಲದಿಂದಲೂ ವನ್ಯಜೀವಿಗಳಿಗಿಂತ ಪ್ರತ್ಯೇಕ ನಾಗರೀಕತೆಯನ್ನು ಹೊಂದಿದ್ದಾನೆ, ಅದು ಕಾನೂನು, ಸಾಮಾಜಿಕ ಮತ್ತು ನೈತಿಕ ಪ್ರಜ್ಞೆಯಂತಹ ಹಲವು ವಿಷಯಗಳಲ್ಲಿ. ಈ ವಿಷಯಗಳು ದಾಖಲೆಯಾದ ಇತಿಹಾಸದ ಉದ್ದಕ್ಕೂ ಚರ್ಚೆಗೆ ಕಾರಣಗಳಾಗಿವೆ. ಕೆಲವು ಪ್ರಾಣಿಗಳು ಪವಿತ್ರವೆಂದು ಧರ್ಮಗಳು ಆಗಾಗ ಘೋಷಣೆ ಮಾಡಿವೆ , ಆಧುನಿದ ಕಾಲಕ್ಕೆ ಸಂಬಂಧಿಸಿದಂತೆ ಪ್ರಕೃತಿದತ್ತ ಪರಿಸರವು ವನ್ಯಜೀವಿ ಪರಿಸರವನ್ನು ಶೋಷಣೆ ಮಾಡುವ ಹೋರಾಟದಿಂದ ಪ್ರಭಾವಿತಗೂಂಡಿದ್ದು, ಅದು ಮಾನವನ ಉಪಯೋಗಕ್ಕೆ ಅಥವಾ ಮನರಂಜನೆಯಾಗಿದೆ. ಸಾಹಿತ್ಯವು ಕೂಡಾ ಮಾನವನು ಸಾಂಪ್ರದಾಯಿಕವಾಗಿ ವನ್ಯಜೀವಿಗಳಿಂದ ಪ್ರತ್ಯೇಕ ಎಂಬುದರ ಉಪಯೋಗ ಪಡೆದಿಕೊಂಡಿದೆ.[೩]
ಮೈಟೋಕಾಂಡ್ರಿಯಲ್ ಪಾಪ್ಯುಲೇಶನ್ ಜೆನೆಟಿಕ್ಸ್ ಪ್ರಕಾರ ಮೊತ್ತಮೊದಲ ಮಾನವ ವಲಸೆಗಳು. ಸಂಖ್ಯೆಗಳು ಈಗಿನದ್ದಕ್ಕಿಂತ ಹಿಂದಿನ ಸಹಸ್ರಮಾನಗಳನ್ನು ಸೂಚಿಸುತ್ತವೆ.
ಈ ವಿಭಾಗವು ವನ್ಯಜೀವನ ವಿನಾಶದ ಮಾನವಜನ್ಯ ರೂಪಗಳ ಬಗ್ಗೆ ಗಮನ ಹರಿಸಿದೆ.
ವನ್ಯಜೀವನದ ವಿನಾಶವು ಯಾವಾಗಲೂ ಒಂದು ಪ್ರಭೇದದ ಅಳಿವಿಗೆ ಕಾರಣವಾಗಲಾರದು, ಆದರೆ, ಪ್ರಪಂಚದಾದ್ಯಂತ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿರುವ ಇಡೀ ಪ್ರಭೇದಗಳ ಅಳಿವುಗಳು ವನ್ಯಜೀವನ ವಿನಾಶದ ಯಾವುದೇ ಪರಾಮರ್ಶೆಗಿಂತ ವ್ಯತಿರಿಕ್ತವಾಗಿದೆ, ಏಕೆಂದರೆ ಯಾವುದೇ ವನ್ಯಜೀವಿಯು ಅಳಿವಿನ ಮಟ್ಟವನ್ನು ಮುಟ್ಟಿದರೆ ಮತ್ತೆ ತಿರುಗಿ ಬರಲು ಸಾಧ್ಯವಾಗುವುದಿಲ್ಲ.
ವನ್ಯಜೀವನದ ವಿನಾಶಕ್ಕೆ ಕಾರಣವಾಗುವ ನಾಲ್ಕು ಅತಿ ಸಾಮಾನ್ಯ ಕಾರಣಗಳೆಂದರೆ: ಅತಿಕೊಲ್ಲುವಿಕೆ, ನೆಲೆಯ ವಿನಾಶ ಮತ್ತು ವಿಚ್ಛೇದ, ಹೊಸದಾಗಿ ಪರಿಚಯಿಸಲಾದ ಪ್ರಭೇದಗಳ ಪರಿಣಾಮ ಹಾಗೂ ಅಳಿವಿನ ಸರಣಿಗಳು.[೫]
ಅತಿಕೊಲ್ಲುವಿಕೆ ಸಂಪಾದಿಸಿ
ಒಂದು ಪ್ರದೇಶದ ವನ್ಯಜೀವಿಗಳ ಸಂತಾನೋತ್ಪತ್ತಿಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಬೇಟೆಯಾಡುವುದು ನಡೆದಲ್ಲಿ ಅದನ್ನು ಅತಿಕೊಲ್ಲುವಿಕೆ ಎನ್ನಲಾಗುತ್ತದೆ. ಇದರ ಪರಿಣಾಮಗಳು ಮಂದಗತಿಯ ಬೆಳವಣಿಗೆಯ ಪ್ರಭೇದಗಳ ಮೇಲೆ ಗಣನೀಯವಾಗಿ ಆಗುವುದು ಕಂಡುಬರುತ್ತದೆ, ಉದಾಹರಣೆಗೆ ದೊಡ್ಡ ಗಾತ್ರದ ಮೀನುಗಳ ಪ್ರಭೇದಗಳು. ಮೊದಲಿಗೆ ವನ್ಯಜೀವಿ ಸಮೂಹದ ಒಂದು ಭಾಗವನ್ನು ಬೇಟೆಯಾಡಿದಾಗ, ಸಾಂದ್ರತೆಯನ್ನವಲಂಬಿಸಿದ ಅವರೋಧವು ಕಡಿಮೆಯಾಗುವ ಕಾರಣ ಹೆಚ್ಚಿನ ಸಂಪನ್ಮೂಲಗಳ (ಆಹಾರ, ಮತ್ತಿತರ) ಲಭ್ಯತೆಯ ಕಾರಣದಿಂದ ಹೆಚ್ಚಿನ ಬೆಳವಣಿಗೆ ಹಾಗೂ ಪುನರುತ್ಪತ್ತಿಗಳು ಕಂಡುಬರುತ್ತವೆ. ಬೇಟೆ, ಮೀನುಗಾರಿಕೆ ಮುಂತಾದವುಗಳು ಒಂದು ಸಮೂಹದ ಸದಸ್ಯರ ನಡುವಿನ ಸ್ಪರ್ಧೆಯನ್ನು ಕಡಿಮೆಮಾಡಿವೆ. ಆದರೆ ಈ ಬೇಟೆಯ ಪ್ರಮಾಣವು ಪ್ರಾಣಿಸಮೂಹದ ಹೊಸ ಸದಸ್ಯರು ಬೆಳೆದು, ಸಂತಾನೋತ್ಪತ್ತಿಯ ವಯಸ್ಸಿಗೆ ಬಂದು, ಮತ್ತೆ ಹೊಸ ಸದಸ್ಯರನ್ನು ಉತ್ಪಾದಿಸುವ ಪ್ರಮಾಣಕ್ಕಿಂತ ಹೆಚ್ಚಾದಲ್ಲಿ, ಪ್ರಾಣಿಸಮೂಹದ ಸಂಖ್ಯೆ ಕ್ಷೀಣಿಸಲು ಆರಂಭವಾಗುವುದು.
ವನ್ಯಪ್ರಾಣಿಸಮೂಹಗಳು ತಮ್ಮ ದ್ವೀಪಗಳ ಮಿತಿಯಲ್ಲಿರುತ್ತವೆ - ಇವು ನಿಜವಾದ ದ್ವೀಪಗಳಾಗಿರಬಹುದು ಅಥವಾ ಸಂಬಂಧಿಸಿದ ಪ್ರಭೇದದ ನೆಲೆಪ್ರದೇಶಳೇ ಆ ಪ್ರಭೇದಕ್ಕೆ ’ದ್ವೀಪ’ಗಳಂತಿರಬಹುದು - ಇವುಗಳಲ್ಲಿ ಕೂಡಾ ಅಸಂರಕ್ಷಿತ ಬೇಟೆಯಿಂದಾಗಿ ಪ್ರಾಣಿಸಮೂಹವು ವಿನಾಶದ ಅಪಾಯವನ್ನೆದುರಿಸುತ್ತಿರುವುದು ಕಂಡುಬರುತ್ತಿದೆ.
ಅಮೆಜಾನ್ ಮಳೆಕಾಡುಗಳಲ್ಲಿ ನಡೆಯುತ್ತಿರುವ ಕಾಡುಗಳ ಕಡಿಯುವಿಕೆ ಮತ್ತು ಹೆಚ್ಚುತ್ತಿರುವ ರಸ್ತೆಗಳ ನಿರ್ಮಾಣವು ಬಹಳ ಕಾಳಜಿ ಹುಟ್ಟಿಸುವಂತಹದ್ದಾಗಿದೆ, ಏಕೆಂದರೆ ಇದರಿಂದ ವನ್ಯಪ್ರದೇಶಗಳ ಮೇಲೆ ಜನಸಂಖ್ಯೆಯ ಆಕ್ರಮಣ ಹೆಚ್ಚುತ್ತದೆ, ಹೆಚ್ಚಿನ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಆರಂಭವಾಗುತ್ತದೆ ಮತ್ತು ಜೀವವೈವಿಧ್ಯಗಳಿಗೆ ಅಪಾಯವು ಹೆಚ್ಚುತ್ತದೆ.
ಯಾವುದೇ ಪ್ರಭೇದದ ನೆಲೆಯನ್ನು ಅದರ ಆಯ್ಕೆಯ ಪ್ರದೇಶ ಅಥವಾ ಪ್ರಾಂತ್ಯ ಎಂದು ಪರಿಗಣಿಸಲಾಗಿದೆ. ಮಾನವ ನೆಲೆಗಳನು ಸ್ಥಾಪಿಸುವ ಹಲವಾರು ಪ್ರಕ್ರಿಯೆಗಳು ಈ ಪ್ರದೇಶದಲ್ಲಿ ನಷ್ಟವನ್ನುಂಟುಮಾಡಿ ಭೂಮಿಯು ಆ ಪ್ರಭೇದವನ್ನು ಪೋಷಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವಂತೆ ಆಗಬಹುದು. ಹಲವಾರು ಸಂದರ್ಭದಲ್ಲಿ ಭೂಮಿಯ ಮೇಲಿನ ಈ ಬದಲಾವಣೆಗಳು ವನ್ಯ ಒಳಪ್ರದೇಶದಲ್ಲಿ ತೇಪೆಯಂತಹ ವಿಚ್ಛೇದಗಳುಂಟಾಗಲು ಕಾರಣವಾಗುತ್ತವೆ. ಕೃಷಿಭೂಮಿಯಲ್ಲಿ ಈ ರೀತಿಯ ಬಹಳ ವಿಚ್ಛೇದಗೊಂಡ ಅಥವಾ ಅವಶೇಷಗಳಂತಹ ನೆಲೆಗಳು ಕಂಡುಬರುತ್ತವೆ. ಭೂಪ್ರದೇಶಗಳುದ್ದಕ್ಕೂ ಹರಡಿದ ಹೊಲಗದ್ದೆಗಳ ನಡುನಡುವೆ ಆಗಾಗ ಹಾಗೇ ಉಳಿದುಕೊಂಡಿರುವ ಮರಗಳ ಪ್ರದೇಶಗಳು ಇಲ್ಲವೇ ಕಾಡುಗಳು ಮತ್ತು ಒಮ್ಮೊಮ್ಮೆ ಕಾಡುಗಳ ನಡುವೆ ಅಲ್ಲಲ್ಲಿ ಸಣ್ಣಸಣ್ಣ ಹೊಲಗಳು ಕಂಡುಬರುವುದಿದೆ.
ನೆಲೆಗಳ ವಿನಾಶಕ್ಕೆ ಉದಾಹರಣೆಗಳೆಂದರೆ ಗದ್ದೆ ತೋಟಗಳಲ್ಲಿ ಸಾಕಲಾದ ಪ್ರಾಣಿಗಳ ಮೇಯುವಿಕೆಯಿಂದ ಹಸಿರುಪ್ರದೇಶಗಳ ನಾಶವಾಗುವಿಕೆ, ನೈಸರ್ಗಿಕ ಕಾಳ್ಗಿಚ್ಚುಗಳ ಕ್ರಮದಲ್ಲಿ ಬದಲಾವಣೆ, ಟಿಂಬರ್ ಉತ್ಪಾದನೆಗಾಗಿ ಕಾಡುಗಳ ಕಡಿಯುವಿಕೆ ಮತ್ತು ನಗರಗಳ ವಿಸ್ತರಣೆಗಾಗಿ ಜೌಗುಪ್ರದೇಶಗಳ ಒಣಗಿಸುವಿಕೆ.
ಅಳಿವಿನ ಸರಣಿಗಳು ಸಂಪಾದಿಸಿ
ಈ ಕೊನೆಯ ವಿಧವು ಅನುಷಂಗಿಕ ಪರಿಣಾಮಗಳಲ್ಲೊಂದಾಗಿದೆ. ಜೀವಿಗಳ ಎಲ್ಲಾ ವನ್ಯ ಸಮೂಹಗಳು ತಮ್ಮ ಸುತ್ತಮುತ್ತಲೂ ಇರುವ ಇತರ ಜೀವಿಗಳ ಜತೆ ಬಹಳ ಸಂಕೀರ್ಣವಾದ, ಒಳಗೊಳಗೇ ಹಬ್ಬಿಕೊಂಡ ಸಂಬಂಧಗಳಿವೆ. ಹಿಪ್ಪೋಪೊಟಮಸ್ನಂತಹ ದೊಡ್ಡ್ಶ ಸಸ್ಯಾಹಾರೀ ಪ್ರಾಣಿಗಳ ದೇಹದ ಮೇಲೆ ಬೆಳೆಯುವ ಪರಾವಲಂಬೀ ಕೀಟಗಳನ್ನು ಹಲವಾರು ರೀತಿಯ ಕೀಟಾಹಾರೀ ಪಕ್ಷಿಗಳು ತಿನ್ನುತ್ತವೆ. ಹಿಪ್ಪೋ ಏನಾದರೂ ಸತ್ತುಹೋದಲ್ಲಿ ಈ ಪಕ್ಷಿಗಳ ಗುಂಪುಗಳೂ ಸತ್ತುಹೋಗುತ್ತವೆ, ಹಾಗೂ ಮುಂದಕ್ಕೆ ಇದರಿಂದಾಗಿ ಈ ಪಕ್ಷಿಗಳ ಮೇಲೆ ಅವಲಂಬಿತವಾಗಿರುವ ಇತರ ಪ್ರಭೇದಗಳ ನಾಶವೂ ಉಂಟಾಗುವುದು. ಡೊಮಿನೋ ಎಫೆಕ್ಟ್ ಎಂದು ಕರೆಯಲ್ಪಡುವ ಈ ಸರಣಿ ಪ್ರತಿಕ್ರಿಯೆಯ ಸರಪಳಿಯು ಇಲ್ಲಿಯವರೆಗೆ ಯಾವುದೇ ಸಮುದಾಯ ಜೀವವ್ಯವಸ್ಥೆಯಲ್ಲಿ ಉಂಟಾಗಬಹುದಾದ ಅತ್ಯಂತ ವಿನಾಶಕಾರೀ ಪ್ರಕ್ರಿಯೆಯಾಗಿದೆ. ಇನ್ನೊಂದು ಉದಾಹರಣೆಯ ಪ್ರಕಾರ, ಬ್ಲ್ಯಾಕ್ ಡ್ರೋಂಗೋಗಳು ಮತ್ತು ಕ್ಯಾಟಲ್ ಎಗ್ರೆಟ್‌ಗಳು ಜಾನುವಾರುಗಳ ಬೆನ್ನಮೇಲಿರುವ ಹುಳಹುಪ್ಪಡಿಗಳನ್ನು ತಿನ್ನುವುದರ ಮೂಲಕ ಅವುಗಳನ್ನು ಶುಚಿಯಾಗಿಡುತ್ತವೆ. ನಾವು ಈ ಪಕ್ಷಿಗಳ ನೆಲೆಗಳನ್ನೇನಾದರೂ ಹಾಳುಗೆಡವಿದಲ್ಲಿ, ಜಾನುವಾರುಗಳಿಗೆ ಕಾಯಿಲೆಗಳು ಬಂದು, ಹರಡಿ, ಅವುಗಳ ಸಂಖ್ಯೆ ಕ್ಷೀಣಿಸುವುದು.
Be Brainly!
Similar questions
English,
4 months ago
India Languages,
4 months ago
Math,
9 months ago
Math,
9 months ago
Social Sciences,
1 year ago
Math,
1 year ago