Math, asked by sadiqmohamed799, 5 hours ago

3. ಒಂದು ಬಸ್ಲಿನ ವೇಗವು ಗಂಟೆಗೆ 71 ಕಿ ಮೀ ಆದರೆ ಆ
ಬಸ್ಸು 5 ಸೆಕೆಂಡಿನಲ್ಲಿ ಎಷ್ಟು ದೂರ ಕ್ರಮಿಸುತ್ತದೆ ?
ಎ) 50 ಮೀಟರ್
ಬಿ) 74.5 ಮೀಟರ್
ಸಿ) 1೦೦ ಮೀಟರ್
ಡಿ) 60 ಮೀಟರ್​

Answers

Answered by anuradhaaa223
0

ವಸ್ತುಗಳ ಅಳತೆ (ಮೆಷರ್), ತೂಕ (ವೆಯ್ಟ್), ಎಣಿಕೆ (ಕೌಂಟ್) ಮಾನವನ ವ್ಯವಹಾರದಲ್ಲಿ ಅವಿಭಾಜ್ಯ ಅಂಗಗಳು. ಇವುಗಳನ್ನು ಅಭ್ಯಸಿಸುವ ಶಾಸ್ತ್ರದ ಹೆಸರು ಮಾಪನಶಾಸ್ತ್ರ (ಮೆಟರಾಲಜಿ;). ಈ ವರ್ಷ ಬಿದ್ದ ಮಳೆ ಎಷ್ಟು; ಭೂಮಿಯಿಂದ ಚಂದ್ರನಿಗೆ ದೂರ ಎಷ್ಟು-ಇಲ್ಲಿ ಅಳತೆಯ ಪಾತ್ರವಿದೆ. ಚಂದ್ರನಿಂದ ಮಾನವ ಭೂಮಿಗೆ ತಂದ ಶಿಲೆಯ ಭಾರ ಎಷ್ಟು; ಪೈಲ್ವಾನನ ಭಾರ ಎಷ್ಟು-ಇಲ್ಲಿ ತೂಕದ ಪಾತ್ರವಿದೆ. ಈ ವರ್ಷ ಬಿ.ಎ ಪರೀಕ್ಷೆಗೆ ಕುಳಿತವರೆಷ್ಟು; 1972ರಲ್ಲಿ ಎಷ್ಟು ದಿವಸಗಳಿವೆ-ಇಲ್ಲಿ ಎಣಿಕೆಯ ಪಾತ್ರವಿದೆ. ಅಳತೆ, ತೂಕ, ಎಣಿಕೆ ಇವು ಮೂರಕ್ಕೂ ಅನ್ವಯವಾಗುವ ಮೂರು ಮುಖ್ಯ ಸೂತ್ರಗಳಿವೆ-ಇವೆಲ್ಲವನ್ನೂ ಸಂಖ್ಯೆಯಲ್ಲಿ ಸೂಚಿಸುತ್ತೇವೆ; ಸಂಖ್ಯೆ ಬರೆದ ಮೇಲೆ ಅದರ ಹೆಸರನ್ನು ಅಂದರೆ ಮಾನವನ್ನು ಮುಂದೆ ಬರೆಯುತ್ತೇವೆ; ಹೀಗೆ ತಿಳಿಯುವ ವಸ್ತುವಿನ ಮಾಪನ ಒಂದು ದತ್ತಮೂಲಮಾನದ ಗುಣಕ. ಉದಾಹರಣೆಗೆ, ಭೂಮಿ-ಚಂದ್ರರ ಸರಾಸರಿ ದೂರ 2,39,000 ಮೈಲಿಗಳು. ಇಲ್ಲಿ ಮೈಲಿ ಪದ ಅಳತೆಯ ಮಾನ, ದತ್ತಮೂಲಮಾನ ಒಂದುಮೈಲಿ. ಪೈಲ್ವಾನನ ತೂಕ 100 ಕಿ.ಗ್ರಾಂಗಳು. ಇಲ್ಲಿ ಕಿಲೋಗ್ರಾಂ ಪದ ತೂಕದ ಮಾನ, ದತ್ತಮೂಲಮಾನ ಒಂದು ಕಿಲೋಗ್ರಾಂ. 1972ರ ಅವಧಿ 366 ದಿವಸಗಳು. ಇಲ್ಲಿ ದಿವಸ ಪದ ಎಣಿಕೆಯ ಮಾನ, ದತ್ತಮೂಲಮಾನ ಒಂದು ದಿವಸ.[೧]

Similar questions