Political Science, asked by ganaviganavi973, 4 months ago

ರಾಜ್ಯ ಶಾಸ್ತ್ರದಲ್ಲಿ 352 ನೇ ವಿಧಿಯು ಯಾವುದಾಗಿದೆ ?​

Answers

Answered by nishitha4
3

Answer:

ಸಶಸ್ತ್ರ ಬಂಡಾಯದಿಂದ ಅಥವಾ ಬೇರೆ ರಾಷ್ಟ್ರಗಳ ಆಕ್ರಮಣದಿಂದ ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಯುಂಟಾಗಿ ರಾಷ್ಟ್ರದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾದಾಗ ರಾಷ್ಟ್ರಪತಿಯವರು ಸಂವಿಧಾನದ 352 ನೇ ವಿಧಿ ಅನ್ವಯ ಘೋಷಿಸುವ ತುರ್ತು ಪರಿಸ್ಥಿತಿಗೆ “ರಾಷ್ಟ್ರೀಯ ತುರ್ತು ಪರಿಸ್ಥಿತಿ” ಎಂದು ಕರೆಯಲಾಗುತ್ತದೆ.

* ತುರ್ತು ಪರಿಸ್ಥಿತಿ ಘೋಷಣೆಯಾದ ದಿನಾಂಕದಿಂದ ಒಂದು ತಿಂಗಳೊಳಗಾಗಿ ಸಂಸತ್ತಿನಲ್ಲಿ ಮಂಡಿಸಿ 2/3 ರಷ್ಟು ಸದಸ್ಯರ ಒಪ್ಪಿಗೆಯನ್ನು ಪಡೆಯಬೇಕು (ಉಭಯ ಸದನಗಳ) ಇಲ್ಲದ್ದಿದರೆ ರದ್ದಾಗುತ್ತದೆ.

* ಜಾರಿಯಾದ ತುರ್ತು ಪರಿಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಬೇಕಾದರೆ ಪ್ರತಿ ಆರು ತಿಂಗಳಿಗೊಮ್ಮೆ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಪಡೆಯಬೇಕು.

* ಲೋಕಸಭೆ ವಿಸರ್ಜನೆಯಾಗಿದ್ದರೆ, ರಾಜ್ಯಸಭೆಯ ಒಪ್ಪಿಗೆ ಪಡೆಯಬೇಕು. ನಂತರ ಅಸ್ತಿತ್ವಕ್ಕೆ ಬಂದ ಲೋಕಸಭೆಯ ಒಪ್ಪಿಗೆಯನ್ನು ಒಂದು ತಿಂಗಳೊಳಗೆ ಪಡೆಯಬೇಕಾಗುತ್ತದೆ.

* ವಿಶೇಷ ಅಧಿವೇಶನದ ಒಪ್ಪಿಗೆಯ ಮೇರೆಗೆ ತುರ್ತು ಪರಿಸ್ಥಿತಿ ವಾಪಸ್ ಪಡೆಯಬಹುದು

Explanation:

ಪ್ರಮುಖ ಪರಿಣಾಮಗಳು :-

* ಏಕಾತ್ಮಕ ಸರ್ಕಾರದ ಕಾರ್ಯ ನಿರ್ವಹಣೆ

* 20 ಹಾಗೂ 21 ನೇ ವಿಧಿಯನ್ನು ಹೊರತುಪಡಿಸಿ ಮೂಲಭೂತ ಹಕ್ಕುಗಳ ರದ್ಧತಿ.

* ರಾಜ್ಯಪಟ್ಟಿಯ ವಿಷಯಗಳಿಗೆ ಶಾಸನ ಮಾಡುವ ಅಧಿಕಾರ ಸಂಪೂರ್ಣವಾಗಿ ಕೇಂದ್ರಕ್ಕೆ ಸೇರಿರುತ್ತದೆ.

Similar questions