India Languages, asked by haseebahachu, 1 month ago

ಪದ್ಯದ ಭಾವಾರ್ಥವನ್ನು ಬರೆಯಿರಿ.
41. ಆಸಮಬಲ ಭವದ್ವಿಕ್ರಮ
ಮಸಂಭವಂ ಪೆರ್ಗೆ ನಿನ್ನನಾನಿನಿತಂ ಪ್ರಾ
ರ್ಥಿಸುವೆನಭಿಮನ್ಯು ನಿಜ ಸಾ
ಹಸೈಕದೇಶಾನುಮರಣಮೆಮಗಕ್ಕೆ ಗಡಾ​

Answers

Answered by Anonymous
30

\huge{\underline\mathbf {\red{{Answer}}}}

ಭಾವಾರ್ಥ:

ಅನುಪಮ ಸಾಹಸಿಯೇ ! ನಿನ್ನ ವಿಕ್ರಮವು ಅನ್ಯರಿಗೆಲ್ಲಿ ? ನಾನು ನಿನ್ನಲ್ಲಿ ಪ್ರಾರ್ಥಿಸಿಕೊಳ್ಳುವುದಿಷ್ಟೆ. ನಿನ್ನ ಸಾಹಸಕ್ಕೆ ಸದೃಶವಾದ ಸಾಹಸವೂ ನಿನ್ನ ಮರಣಕ್ಕೆ ಅನುಗುಣವಾದ ಮರಣವೂ ನನಗೆ ಲಭಿಸುವಂತಾಗಲಿ ಅಭಿಮನ್ಯು ಶತ್ರು ಪುತ್ರನಾದರೂ ಪ್ರಾಯದಲ್ಲಿ ಕಿರಿಯನಾದರೂ ಅದೊಂದನ್ನೂ ಲೆಕ್ಕಿಸದೆ ಅವನ ಅದ್ಭುತ ಸಾಹಸಕ್ಕೆ ಮನಸೋತ ದುರ್ಯೋಧನನು ಮನಸ್ಸಿನಲ್ಲೇ ಮಣಿದು ಪ್ರಾರ್ಥಿಸಿಕೊಳ್ಳುತ್ತಾನೆ ಎಂದ ಮೇಲೆ ಮಹಾನುಭಾವನಲ್ಲವೇ ದುರ್ಯೋಧನ? ದುರ್ಯೋಧನನ ಈ ಮಾತುಗಳು ಸಹೃದಯರಿಗೆ ಮೆಚ್ಚಿಕೆಯಾಗಿ ಅವನಲ್ಲಿ ಅನುಕಂಪೆ ಹುಟ್ಟಿಸದಿರದು.ಸಾಹಸ ಪಕ್ಷಪಾತಿ ದುರ್ಯೋಧನನ ಔದಾರೋದ್ಗಾರಗಳಿಗೆ ನಾವೂ ತಲೆದೂಗಬೇಕು.

\huge{\underline\mathbf {\red{{HOPE  \:  \:  \: IT  \:  \:  \:  \:  \: HELPS}}}}

Answered by Iamdancingabhinaya
5

hope it helps you

plz mark as brainliest...

Attachments:
Similar questions