India Languages, asked by aneesahmedqa, 8 months ago

ಗಾಚಕ ಪದವಿದು
(ಎ) ಕೆಲವು
(ಬಿ) ನಾವು
(5) ಕರ್ನಾಟಕ
(ಡಿ) ಪಡುವಣ​

Answers

Answered by Lakshith1211
2

Answer:

ಗಮಕ ಕಲೆ-ಪೀಠಕೆ :

ಗಮಕ ಕಲೆ ಅತ್ಯಂತ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿತ್ತು. ವಾಲ್ಮೀಕಿ ಮಹರ್ಷಿಯು ಲವ ಕುಶರಿಂದ ರಾಮಾಯಣ ಕಾವ್ಯವನ್ನು ಗಮಕ ಶೈಲಿಯಲ್ಲಿ ಹೇಳಿಸಿದನೆಂದು ಅದೇ ಕಾವ್ಯದಲ್ಲಿ ಹೇಳಿದೆ. ಈಗ ಸಂಸ್ಕೃತ ಕಾವ್ಯಗಳನ್ನು ಆಯಾ ಛಂದಸ್ಸಿನ ಮಟ್ಟಿನಲ್ಲಿ ಓದುವ /ಹೇಳುವ ಪದ್ಧತಿ ಇದೆ. ರಾಗ ಸಂಯೋಜನೆ ಮಾಡಿಹೇಳುವ ಪದ್ಧತಿಯೂ ಇದೆ. ಆದರೆ ತಾಳಬದ್ಧವಾಗಿ ಹೇಳುವ ಕ್ರಮ ಇರವುದಿಲ್ಲ. ಈ ಗಮಕ ವಾಚನ ಕ್ರಮ ಅಥವಾ ಕಾವ್ಯಗಳನ್ನು, ರಾಗ, ಶೃತಿ ಬದ್ಧವಾಗಿ ತಾಳದ ಹಂಗಿಲ್ಲದೆ ಹಾಡುವ ಪದ್ಧತಿ ಕನ್ನಡಕ್ಕೆ ಮಾತ್ರ ವಿಶಿಷ್ಟವಾದುದು. ಬೇರೆ ಯಾವ ಭಾರತೀಯ ಭಾಷೆಗಳಲ್ಲೂ ಇದ್ದಂತೆ ಕಾಣುವುದಿಲ್ಲ. .

ಗಮಕ ಕಲೆ ಎಂದರೇನು ? ಸಂಪಾದಿಸಿ

ಗಮಕ ಅಥವಾ ಗಮಕ ಕಲೆ ಎಂದರೆ ಪದ್ಯ ಮತ್ತು ಚಂಪೂ ಕಾವ್ಯವನ್ನು ರಾಗ ಬದ್ಧವಾಗಿ ಓದುವ ಒಂದು ವಿಶಷ್ಟ ಪದ್ಧತಿ. ಓದುವಾಗ ಸಂಗೀತದ ರಾಗಗಳನ್ನು ಬಳಸಿದರೂ , ಜಾನಪದ ಶೈಲಿಯನ್ನು ಬಳಸಿದರೂ ಕಾವ್ಯದ ಅರ್ಥ, ಭಾವ, ನವರಸಗಳಿಗೆ ಪ್ರಾಧಾನ್ಯತೆ ಕೊಟ್ಟು , ರಸ ಭಾವ ಕೆಡದಂತೆ ಕವಿ ಬಳಸಿದ ಛಂದಸ್ಸು , ಯತಿಗಳು ಕೆಡದಂತೆ ರಾಗ ಮತ್ತು ಶೃತಿ ಬದ್ಧವಾಗಿ ಕಾವ್ಯವನ್ನು ಓದುವುದು -ಗಮಕ - ಗಮಕ ಕಲೆ ಎಂದು ಹೇಳಬಹುದು.

ಹಿಂದೆ ಮನೆ ಮನೆಗಳಲ್ಲಿ ಕಾವ್ಯದ ಛಂದಸ್ಸಿಗೆ ಅನುಗುಣವಾಗೆ ವಾಡಿಕೆಯಲ್ಲಿದ್ದ ಮಟ್ಟಿನಲ್ಲಿ ಭಾವ ರಸಕ್ಕೆ ತಕ್ಕಂತೆ ಕಾವ್ಯವನ್ನು ಓದುತ್ತಿದ್ದರು ಹಾಡುತ್ತಿದ್ದರು. ಆಗ ಸಾಮಾನ್ಯರೂ ಸಂಗೀತ ಕಲಿಯದವರೂ ಕಾವ್ಯಗಳನ್ನು ಓದುವ ರೂಢಿ ಇತ್ತು . ಹೆಣ್ಣು ಮಕ್ಕಳು ಬೆಳಗಿನ ಝಾವ ಎದ್ದವರು ಕೆಲಸ ಮಾಡುತ್ತಾ ನೀತಿ ಶತಕ, ಹರಿಭಕ್ತಿ ಸಾರ, ಮೊದಲಾದ ಕಾವ್ಯಗಳನ್ನು ಒಂದು ಮಟ್ಟಿನಲ್ಲಿ (ಹೆಚ್ಚಾಗಿ ಬಿಲಹರಿಯನ್ನು ಹೋಲುವ ರಾಗದಲ್ಲಿ ) ಹಾಡುತ್ತಿದ್ದರು, ಅದು ಉದಯ ರಾಗ ವೆಂದು ಕರೆಯಲ್ಪಡುತ್ತಿತ್ತು. ಹೀಗೆ ಕಾವ್ಯಗಳು ಬಾಯಿಂದ ಬಾಯಿಗೆ ಕಲಿತು ಜನಪ್ರಿಯವಾಗಿತ್ತು. ಆಧುನಿಕ ಯುಗದ ಪ್ರಭಾವ ಬಂದಮೇಲೆ, ಈ ಪದ್ದತಿ ಮರೆಯಾಗಿ ಕಾವ್ಯದ ಪದ್ಯಗಳಿಗೆ ಶಾಸ್ತ್ರೀಯ ರಾಗಗಳನ್ನು ಹಾಕಿ, ರಸ, ಭಾವಕ್ಕೆ ಅನುಗುಣವಾಗಿ ಹೇಳುವ ರೂಢಿ ಬಂದಿತು. ಜನಪ್ರಿಯ ಕಾವ್ಯಗಳು, ಅದರ ವಾಚನ, ಸಾಮಾನ್ಯ ಜನಪದದಿಂದ ದೂರವಾಗಿ ಓದುವಿಕೆ ಅಥವಾ ಹಾಡುವಿಕೆ ಶಾಸ್ತ್ರೀಯ ರೂಪ ಪಡೆದಿದ್ದರಿಂದ ಗಮಕ ವಿದ್ವಾಂಸರು ಮಾತ್ರ ಕಾವ್ಯ ವನ್ನು ಓದುವಂತಾಯಿತು.

ಗಮಕ ಕಲೆ ಮತ್ತು ಕವಿಗಳ ವಚನ: ಸಂಪಾದಿಸಿ

ಗಮಕ ಕಲೆಗೆ ಕನ್ನಡನಾಡಿನಲ್ಲೂ ತಂಬಾ ಪ್ರಾಚೀನವಾದ ಇತಿಹಾಸವಿದೆ. ಕವಿರಾಜ ಮಾರ್ಗ , ಆದಿ ಪುರಾಣ, ಮೋಹನ ತರಂಗಿಣಿ, ಗದುಗಿನ ಭಾರತ, ಹರಿಶ್ಚಂದ್ರ ಕಾವ್ಯ, ಗಿರಿಜಾ ಕಲ್ಯಾಣ, ಭರತೇಶ ವೈಭವ ಮೊದಲಾದ ಕಾವ್ಯಗಳಲ್ಲಿ ಗಮಕವನ್ನು ಹೇಗೆ ಹಾಡಬೇಕು ಎಂಬ ಬಗ್ಗೆ ಉಲ್ಲೇಖಗಳಿವೆ. ನೀತಿಸಾರ ಕಾವ್ಯದಲ್ಲಿ ಈ ಬಗ್ಗೆ ಒಂದು ಪದ್ಯ ಬರುತ್ತದೆ :

ಎಡರದೆ ತಡೆಯದೆ ತಲೆಯಂ

ಕೊಡಹದೆ ಕಡುವಹಿಲ ಜಾಡ್ಯವೆನಿಸದೆ ರಸಮಂ|

ಕೆಡಿಸದೆ ಸರ್ವರ ಚಿತ್ತ

ಕ್ಕೊಡಂಬಡಲೋದುವನೆ ಗಮಕಿ ಕನ್ನಡ ಜಾಣಾ ||

ಕವಿ ತನ್ನ ಭಾಷಾ ಪ್ರೌಡಿಮೆಯಿಂದ ಛಂದಸ್ಸು ಅಲಂಕಾರ ಉಪಮೆಗಳಿಂದ ಕಾವ್ಯವನ್ನು ಬರೆದಿರುತ್ತಾನೆ. ಅದನ್ನು ಎಲ್ಲರಿಗೂ ಓದಲೂ ಕಷ್ಟ. ಇಂತಹ ಕಾವ್ಯ ಎಲ್ಲಾ ಮಟ್ಟದ ಓದುಗರಿಗೂ ಅರ್ಥವಾಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಸೂಕ್ತ ರಾಗ, ಧ್ವನಿಯ ಮೂಲಕ ಶಬ್ದಗಳನ್ನು ಸರಿಯಾಗಿ ಉಚ್ಛರಿಸುತ್ತಾ, ವಾಕ್ಯಗಳನ್ನು - ಸಂಧಿಗಳನ್ನು ಬೇಕಿರುವಲ್ಲಿ ಒಡೆದು ಅರ್ಥ ಹೊರ ಹೊಮ್ಮುವಂತೆ ಓದಿ ಸಹೃದಯರಿಗೆ ತಲುಪಿಸಬೇಕಾಗುತ್ತದೆ. ಎಡವದೆ, ತಡವರಿಸದೆ, ತಲೆಕೊಡಹದೆ, ಕರ್ಕಶವಾಗಿ ಹೇಳದೆ , ಎಲ್ಲರಮನಸ್ಸಿಗೂ ತಾಗುವಂತೆ ಕಾವ್ಯ ವಾಚನ ಮಾಡುವುದೇ ಗಮಕ, ಹಾಗೆ ಓದುವವನೇ ಗಮಕಿ ಎಂದು ಹೇಳುತ್ತದೆ ನೀತಿ ಸಾರ.

ಕವಿ ರಾಘವಾಂಕನ ಹೇಳಿಕೆ - ಕಾವ್ಯ ಕನ್ನಿಕೆಗೆ ರಸವೇ ಜೀವನ ; ಭಾವವೇ ಶರೀರ ; ಅರ್ಥಗಳೇ ಅಂಗಗಳು ; ಶಬ್ದ ಸಮೂಹಗಳೇ ಮಾತು, ಕಾವ್ಯಾಲಂಕಾರಗಳೇ ಆಭರಣ ; ಪದಗಳ ಗಮನವೇ ನಡೆ ; ಆನಂದ ವಾಸಿಸುವ ಮನೆ : ಆದ್ದರಿಂದ ಗಮಕಿಯಾದವನಿಗೆ ಸಂಗೀತದ ಜ್ಞಾನ ವಿರುವುದರ ಜೊತೆಗೆ ಕಾವ್ಯದ ಅರ್ಥ ಮತ್ತು ಲಕ್ಷಣಗಳೂ ಗೊತ್ತಿರಬೇಕು ; ಅವಕ್ಕೆ ಚ್ಯುತಿಬಾರದಂತೆ ಕಾವ್ಯವನ್ನು ಓದುವವನೇ ಉತ್ತಮ ಗಮಕಿ .

ಡಾ. ಮಲ್ಲಿಕಾರ್ಜುನ ಮನ್ಸೂರ್ ಅವರು, ಗದ್ಯ ರೂಪದ, ಯತಿ ಯಿಂದ ಕೂಡಿದ ವಚನ ಸಾಹಿತ್ಯ ಕ್ಕೂ ಸಂಗೀತ ಜೋಡಿಸಿ ಹಾಡುವುದಕ್ಕೆ ಆರಂಬಿಸಿದ ಮೇಲೆ , ವಚನಗಳನ್ನೂ ಗಮಕದಲ್ಲಿ ಹಾಡಲು ಕರ್ನಾಟಕ ಗಮಕ ಕಲಾ ಪರಿಷತ್ತು ಪ್ರೋತ್ಸಾಹ ನೀಡಿತು. ಗಮಕ ಕ್ಷೇತ್ರದಲ್ಲಿ ವಚನ ಗಾಯನವೂ ಒಂದು ಅಂಗವಾಯಿತು.

ಅಭಿಪ್ರಾಯ

ಪ್ರಸಿದ್ಧ ಗಮಕ (ಕಾವ್ಯ ವಾಚನ) ವ್ಯಾಖ್ಯಾನ ಕಾರರೂ , ಯಕ್ಷಗಾನ(ಜಾಗರಣ ಬ್ಶೆಠಕ್) ಅರ್ಥಧಾರಿಗಳೂ ಆದ ಶ್ರೀ ಅಮಚಿ ಎಂ.ಆರ್. ಲಕ್ಷ್ಮಿನಾರಾಯಣ ಅವರು ಮನೆಘಟ್ಟದ ಶ್ರೀ ಸುಬ್ಬರಾಯರ ವಾಚನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಕೊಡುತ್ತಾ ಹೀಗೆ ದಾಖಲಿಸಿದ್ದಾರೆ.

ಕೆಲವು ಗಮಕಿಗಳು (ವಾಚನ ಮಾಡುವಾಗ ಪದ್ಯ ಇದ್ದಂತೆಯೇ ಓದದೆ) ಪದ್ಯದಲ್ಲಿನ, ಕರ್ತೃ, ಕರ್ಮ, ಕ್ರಿಯಾಪದಗಳನ್ನು ಸರಿಯಾಗಿ ಹೊಂದಿಸಿ ಕೆಲವು ಸಾಲುಗಳನ್ನು ಹಿಂದೆ ಮುಂದೆ ಮಾಡಿ ಪದ್ಯದಲ್ಲೇ ಇರದ ಬೇರೆ ಪದಗಳನ್ನು ತೂರಿಸಿ ತಮ್ಮ ಪರಾಕ್ರಮವನ್ನು ಮೆರೆಸುತ್ತಾರೆ. ಈ ಕಸರತ್ತು ಮಾಡುವಾಗ ಪದ್ಯದ ಛಂದೋ ಭಂಗವಾಗುತ್ತದೆ. ಕ್ರಮ ಪ್ರಕಾರ ಇರುವ ಮಾತ್ರಾಗಣಗಳ ಗುಚ್ಛ ಕಲಸುಮೇಲೋಗರವಾಗುತ್ತದೆ. ವ್ಯಾಖ್ಯಾನಕಾರರು ಇಲ್ಲದಿರುವಾಗ ಇದೆಲ್ಲಾ ಬೇಕಾಗಬಹುದು. ವ್ಯಾಖ್ಯಾನಕ್ಕೆ ಮತ್ತೊಬ್ಬರಿರುವಾಗ ಛಂದೋಭಂಗವಾಗದಂತೆ, ರಸ ಭಾವಗಳಿಗೆ ತಕ್ಕ ರಾಗದಲ್ಲಿ ಲಯಬದ್ಧವಾಗಿ ಹಾಡುವುದು ಮಾತ್ರಾ ವಾಚನಕಾರರ ಕರ್ತವ್ಯ.

ಈ ಕರ್ತವ್ಯ ಪಾಲನೆಯನ್ನು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಮನೆಘಟ್ಟದ ಟಿ.ಸುಬ್ಬರಾಯರು ಚಂದವಾಗಿ ಮಾಡುತ್ತಿದ್ದರು. ಭಾಮಿನಿ - ವಾರ್ಧಿಕ ಷಟ್ಪದಿಗಳಾಗಲಿ , ಕಂದ ಪದ್ಯವಾಗಲಿ, ವೃತ್ತ ರಗಳೆಯಾಗಿರಲಿ , ಅದನ್ನು ಮೊದಲಿಂದ ಕೊನೆಯವರೆಗೆ ಛಂದಸ್ಸು ವ್ಯತ್ಯಯವಾಗದಂತೆ ನಿರ್ದಿಷ್ಟಪಡಿಸಿಕೊಂಡ ರಾಗದಲ್ಲಿ ಒಮ್ಮೆ ಹಾಡಿ ಮುಗಿಸುತ್ತಿದ್ದರು. ಮಾತ್ರಾಗಣಗಳು ಪಲ್ಲಟವಾಗದಂತೆ ಗುರು ಲಘುಗಳ ಉಚ್ಛಾರ-ಕಾಲ ಹೆಚ್ಚು ಕಡಿಮೆಯಾಗದಂತೆ ಸಾಹಿತ್ಯ ತಿಳಿಯುವಂತೆ ರಾಗ ತಪ್ಪದಂತೆ ಒಂದು ಪದ್ಯವನ್ನು ಸಾರೋದ್ಧಾರವಾಗಿ ಹಾಡುತ್ತಿದ್ದರು. ತೀರಾ ಕ್ಲಿಷ್ಟವಾದ ಪದ ಸಮುಚ್ಚಯಗಳಿದ್ದು ರೂಪಕ, ಶ್ಲೇಷ ವ್ಯಂಗ ಒಗಟುಗಳಿದ್ದು ಗೂಢಾರ್ಥಗಳಿಂದ ಕೂಡಿದ ಪದ್ಯವಾದರೆ, ಅವು ಸ್ಪಷ್ಟವಾಗುವ ಹಾಗೆ ಎರಡನೇ ಬಾರಿ ಬಿಡಿಸಿ ಬಿಡಿಸಿ ಹಾಡುವ ಕ್ರಮವೂ ಇತ್ತು . ಅಂಥಾ ಸನ್ನಿವೇಶ ತೀರಾ ಕಡಿಮೆ. ಅವರ ಧ್ವನಿ ವೀರ ರೌದ್ರ ಭಯಾನಕ ರಸಗಳಿಗೆ ಇವರ ಪುರುಷ ಗಂಭೀರ ಕಂಠ ಕೊಡುತ್ತಿದ್ದ ಅದ್ಭುತ ಪೋಷಣೆ ಹಾಗೂ ಔನ್ನತ್ಯ ಗಮನಾರ್ಹ ವಾದುದು

Explanation:

Thanks, follow, 5 star, brainliest

Answered by Shrivatsakulkarni
4

ಪಡುವಣ

This is your answer.

Similar questions