Music, asked by nilankumarss, 3 months ago

ಸಂದಿಗಳು
ಕನ್ನಡ ಸಂಧಿಗಳಾದ ಲೋಪಸಂಧಿ,
ಆಗಮ ಸಂಧಿ, ಆದೇಶ ಸಂಧಿಗಳಿಗೆ
ಉದಾಹರಣೆಗಳನ್ನು ಬರೆದು,
ಬಿಡಿಸಿಸಂಧಿ ಹಸರಿಸಿ.
( ಒಂದು ಸಂಧಿಗೆ 5 ಉಾಹರಣೆ)​

Answers

Answered by s15808aarpita03136
2

Answer:

ಸಂದಿಗಳು

ಕನ್ನಡ ಸಂಧಿಗಳಾದ ಲೋಪಸಂಧಿ,

ಆಗಮ ಸಂಧಿ, ಆದೇಶ ಸಂಧಿಗಳಿಗೆ

ಉದಾಹರಣೆಗಳನ್ನು ಬರೆದು,

ಬಿಡಿಸಿಸಂಧಿ ಹಸರಿಸಿ.

( ಒಂದು ಸಂಧಿಗೆ 5 ಉಾಹರಣೆ)

Answered by michaelgimmy
7

Answer :

a. ಸಂಧಿ ಎಂದರೇನು?

Ans: ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಕೂಡುವುದನ್ನು ಸಂಧಿ ಎನ್ನುವರು.

ಸಂಧಿಯಲ್ಲಿ ಎರಡು ವಿಧ :- ಕನ್ನಡ ಸಂಧಿ ಮತ್ತು ಸಂಸ್ಕೃತ ಸಂಧಿ.

ಲೋಪ ಸಂಧಿ - ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ, ಪೂರ್ವಪದದಲ್ಲಿರುವ ಕೊನೆಯ ಸ್ವರವು ಬಿಟ್ಟುಹೋಗುವುದನ್ನು ಲೋಪಸಂಧಿ ಎನ್ನುವರು.

ಉದಾಹರಣೆಗೆ,

ಕಾಣಲಾಗದು = ಕಾಣಲು + ಆಗದು

ಪಡೆದಿದ್ಧೇನೆ = ಪಡೆದು + ಇದ್ಧೇನೆ

ತಪ್ಪಲೀಯದು = ತಪ್ಪಲು + ಈಯದೆ

ನಿನ್ನಾನ್ಮ = ನಿನ್ನ + ಆನ್ಮ

ಹಿಂದೊಮ್ಮೆ = ಹಿಂದೆ + ಒಮ್ಮೆ

ಆಗಮ ಸಂಧಿ - ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ, ಪೂರ್ವಪದದ ಕೊನೆಯ ಸ್ವರ ಹಾಗೂ ಉತ್ತರಪದದ ಮೊದಲ ಸ್ವರಗಳ ಮಧ್ಯದಲ್ಲಿ 'ಯ' ಅಥವಾ 'ವ' ಕಾರವನ್ನು ಹೊಸದಾಗಿ ಸೇರಿಸಿ ಹೇಳಿದರೆ ಅದು ಆಗಮ ಸಂಧಿ.

ಉದಾಹರಣೆಗೆ,

ಶುದ್ಧಿಯನ್ನು = ಶುದ್ಧಿ + ಅನ್ನು

ಭೇಧವಿಲ್ಲ = ಭೇಧ + ಇಲ್ಲ

ಹರಕೆಯನ್ನು = ಹರಕೆ + ಅನ್ನು

ಪತಿಯೊಡನೆ = ಪತಿ + ಒಡನೆ

ಹಳ್ಳಿಯಲ್ಲಿ = ಹಳ್ಳಿ + ಅಲ್ಲಿ

ಆದೇಶ ಸಂಧಿ : ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ, ಉತ್ತರಪದದ ಆದಿಯಲ್ಲಿರುವ ಕ, ತ, ಪ ವ್ಯಂಜನಗಳಿಗೆ ಗ, ದ, ಬ ವ್ಯಂಜನಗಳು ಆದೇಶವಾಗುವು. ಇದನ್ನು ಆದೇಶ ಸಂಧಿ ಎನ್ನುವರು.

ಉದಾಹರಣೆಗೆ,

ಚಳಿಗಾಲ = ಚಳಿ + ಕಾಲ

ಕೈವಿಡಿದು = ಕೈ + ಪಿಡಿದು

ವೀರಗಚ್ಚೆ = ವೀರ + ಕಚ್ಚೆ

ತುದಿಗಾಲಲ್ಲಿ = ತುದಿ + ಕಾಲಲ್ಲಿ

ಕಂಬನಿ = ಕಣ್ + ಪನಿ

Similar questions