5 examples for samskrutha sandhi in kannada
Answers
Answer:
ye kon si language hoti hai.....
Answer:
ಯಾವ ಕನ್ನಡದ ಪಲುಕು(ಪದ) ಈ ಕೆಳಗಿನ ಸಂಧಿಗಳಲ್ಲಿ ಬರುವುದಿಲ್ಲ. ಬರೀ ಸಂಸ್ಕೃತದ ಪಲುಕುಗಳಿಗೆ ಸೀಮಿತವಾದ ಸಂಧಿಗಳಿವು. ಆದರೆ ಹಳೆಗನ್ನಡದಿಂದಲೂ ಕನ್ನಡದಲ್ಲಿ ಹೇರಳವಾಗಿ ಬೆರೆತಿರುವ ಸಾವಿರಾರು ಸಂಸ್ಕೃತದ ಸಂಧಿಪದಗಳನ್ನು ತಿಳಿಯಲು ಈ ಸಂಧಿಗಳ ಅರಿವು ಬೇಕು.
ಈ ಸಂಧಿಗಳ ವಿವರಣೆಯನ್ನು ಸಂಸ್ಕೃತದ ವ್ಯಾಕರಣದ ಹೊತ್ತಗೆಗಳಿಂದ ಪಡೆಯಬಹುದು. ಈ ಎಲ್ಲ ಸಂಧಿಗಳೂ ೧೦೦% ಸಂಸ್ಕೃತದ ವ್ಯಾಕರಣದ ಸಂಧಿನಿಯಮಗಳನ್ನೇ ಪಾಲಿಸುವುವು.
ಎರಡು ಸಂಸ್ಕೃತದ ಪದಗಳ ಸೇರಿಕೆ.
1. ಸವರ್ಣದೀರ್ಘ ಸಂಧಿ 2. ಗುಣ ಸಂಧಿ 3. ವೃದ್ಧಿ ಸಂಧಿ 4. ಯಣ್ ಸಂಧಿ 5. ಜಸ್ತ್ವ ಸಂಧಿ 6. ಶ್ಚುತ್ವ ಸಂಧಿ 7. ಷ್ಟುತ್ವ ಸಂಧಿ 8. ಅನುನಾಸಿಕ ಸಂಧಿ 9. ವಿಸರ್ಗ ಸಂಧಿ
ಸವರ್ಣದೀರ್ಘ ಸಂಧಿ: ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ - ಇವುಗಳಿಗೆ 'ಸವರ್ಣ'ಗಳೆಂದು ಹೆಸರು. ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು. ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ.
ಸಂಸ್ಕೃತದಲ್ಲಿ ಪಾಣಿನೀಯ ಸೂತ್ರ : 'ಅಕಃ ಸವರ್ಣೇ ದೀರ್ಘಃ' ಎಂದು.
ಉದಾಹರಣೆಗೆ:
ಅ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಅ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಉ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಆ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಇ + ಈ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಊ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಉದಾಹರಣೆಗಳು:
ಕೃ ತ + ಅ ರ್ಥ = ಕೃ ತಾ ರ್ಥ
( ಅ + ಅ = ಆ )
ಶ ಚಿ + ಇಂ ದ್ರ = ಶ ಚೀಂ ದ್ರ
( ಇ + ಇ = ಈ )
ಬ ಹು + ಉ ದ ಕ = ಬ ಹೂ ದ ಕ
( ಉ + ಉ = ಊ )
ವಿ ದ್ಯಾ + ಅ ಭ್ಯಾ ಸ = ವಿ ದ್ಯಾ ಭ್ಯಾ ಸ
( ಆ + ಅ = ಆ )
ಸ ತೀ + ಈ ಶ = ಸ ತೀ ಶ
( ಈ + ಈ = ಈ )
ಉ ಪ + ಆ ಹಾ ರ = ಉ ಪಾ ಹಾ ರ
( ಅ + ಆ = ಆ )
ಗುಣ ಸಂಧಿ: ಗುಣ ಸಂಧಿ ಎಂಬ ಸಂಸ್ಕೃತ ಸಂಧಿಯು ಪ್ರಮುಖವಾಗಿ ಮೂರು ಸಂದರ್ಭಗಳಲ್ಲಿ ಕಂಡು ಬರುತ್ತದೆ.
1. ಅ,ಆ + ಇ,ಈ ಸ್ವರಗಳು ಸಂಧಿಯಾಗಿ, 'ಏ' ಸ್ವರವಾಗಿ ಉಳಿಯುತ್ತದೆ.
2. ಅ,ಆ + ಉ,ಊ ಸ್ವರಗಳು ಸಂಧಿಯಾಗಿ, 'ಓ' ಸ್ವರವಾಗಿ ಉಳಿಯುತ್ತದೆ.
3. ಅ,ಆ + ಋ ಸ್ವರಗಳು ಸಂಧಿಯಾಗಿ, 'ಅರ್' ಎಂದು ಉಳಿಯುತ್ತದೆ.
ಉದಾಹರಣೆಗಳು:
ರಾ ಜ + ಇಂ ದ್ರ = ರಾ ಜೇಂ ದ್ರ
( ಅ + ಇ = ಏ )
ಜ ನ್ಮ + ಉ ತ್ಸ ವ = ಜ ನ್ಮೋ ತ್ಸ ವ
( ಅ + ಉ = ಓ )
ದೇ ವ + ಋ ಷಿ = ದೇ ವ ರ್ಷಿ
( ಅ + ಋ = ಅರ್)
ರ ಮಾ + ಈ ಶ = ರ ಮೇ ಶ
( ಆ + ಈ = ಏ )
ಮ ಹಾ + ಉ ತ್ಸ ವ = ಮ ಹೋ ತ್ಸ ವ
( ಆ + ಉ = ಓ )
ವೃದ್ಧಿ ಸಂಧಿ: ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಐ' ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಔ' ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿ ಸಂಧಿಯೆನ್ನುವರು.
ಉದಾಹರಣೆ:
ಲೋಕ + ಏಕವೀರ = ಲೋಕೈಕವೀರ
ಜನ + ಐಕ್ಯ = ಜನೈಕ್ಯ
ಯಣ್ ಸಂಧಿ: ಸಂಧಿ ರಚನೆಯಲ್ಲಿ 'ಯ' 'ರ' 'ಲ' 'ವ' ಈ ನಾಲ್ಕು ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ. ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ 'ಯ್'ಕಾರವೂ, ಉ ಊಕಾರಗಳಿಗೆ 'ವ್'ಕಾರವೂ, ಋಕಾರಕ್ಕೆ 'ರ್'(ರೇಫ)ವೂ ಆದೇಶವಾಗಿ ಬರುತ್ತದೆ. ಇದಕ್ಕೆ 'ಯಣ್ ಸಂಧಿ'ಯೆನ್ನುತ್ತೇವೆ
ಉದಾಹರಣೆ:
ಅತಿ + ಅಂತ = ಅತ್ಯಂತ
ಪಿತೃ + ಅರ್ಜಿತ = ಪಿತ್ರಾರ್ಜಿತ
ಪಿತೃ + ಅರ್ಜಿತ = ಪಿತ್ರಾರ್ಜಿತ
ಅತಿ + ಅವಸರ = ಅತ್ಯವಸರ
ಕೂಟಿ + ಅಧೀಶ = ಕೋಟ್ಯಾಧೀಶ
ಜಸ್ತ್ವ ಸಂಧಿ:ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಮೂರನೆಯ ಅಕ್ಷರ ಬಂದಾಗ ಜಸ್ತ್ವ ಸಂಧಿ ಆಗುತ್ತದೆ. ಪೂವ೯ಪದದ ಕೊನೆಯಲ್ಲಿರುವ ಪ್ರಥಮ ವಣ೯ಗಳಿಗೆ ಅಂದರೆ ಕ,ಚ,ಟ,ತ,ಪ ಗಳಿಗೆ ಇತರೆ ವಣ೯ಗಳು ಪರವಾದರೆ ಅವುಗಳ ಸ್ತಾನದಲ್ಲಿ ಅದೇ ವಗ೯ದ ಮೂರನೆಯ ವಣ೯ವು ಆದೇಶವಾಗುತ್ತದೆ.
ಉದಾಹರಣೆ:
ವಾಕ್ + ಈಶ = ವಾಗೀಶ
ಜಗತ್ + ಗುರು = ಜಗದ್ಗುರು
ದಿಕ್ + ದೇಶ = ದಿಗ್ದೇಶ
ಸತ್ + ಉದ್ಯೋಗ = ಸದುದ್ಯೋಗ
ಶ್ಚುತ್ವ ಸಂಧಿ: 'ಸ' ಕಾರ 'ತ' ವಗಾ೯ಕ್ಷರಗಳಿಗೆ 'ಶ' ಕಾರ 'ಚ' ವಗಾ೯ಕ್ಷರಗಳು ಪರವಾದಾಗ 'ಸ' ಕಾರಕ್ಕೆ 'ಶ' ಕಾರವೂ 'ತ' ವಗ೯ಕ್ಕೆ 'ಚ' ವಗ೯ವೂ ಆದೇಶವಾಗಿ ಬರುತ್ತದೆ.
ಉದಾಹರಣೆ:
ಮನಸ್+ಶುದ್ದಿ = ಮನಶ್ಯುದ್ದಿ
ಜಗತ್+ಜ್ಯೋತಿ = ಜಗಜ್ಯೋತಿ
ಸತ್ + ಜನ = ಸಜ್ಜನ/p>
ಷ್ಟುತ್ವ ಸಂಧಿ: 'ಷ್ಟು' ಎಂದರೆ 'ಷ' ಕಾರ 'ಟ' ವಗ೯ ಎಂದು ಸಂಙೆ ಪದಾಂತ್ಯದಲ್ಲಿರುವ 'ಸ' ಕಾರ 'ತ' ವಗ೯ಗಳಿಗೆ 'ಷ' ಕಾರ 'ಟ' ವಗ೯ಗಳು ಪರವಾದರೆ 'ಸ' ಕಾರಕ್ಕೆ 'ಷ' ಕಾರವೂ 'ತ' ವಗ೯ಕ್ಕೆ 'ಟ' ವಗ೯ವೂ ಆದೇಶವಾಗುವುದು ಇದು ಷ್ಟುತ್ವ ಸಂಧಿ.
ಉದಾಹರಣೆ:
ತಪಸ್ + ಷಡಂಶ = ತಪಷ್ಪಡಂಶ
ತತ್ + ಟೀಕೆ = ತಟ್ಟೀಕೆ
ಅನುನಾಸಿಕ ಸಂಧಿ: ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಕೊನೆಯ ಅಕ್ಷರ (ಅನುನಾಸಿಕ) ಬಂದಾಗ ಅನುನಾಸಿಕ ಸಂಧಿ ಆಗುತ್ತದೆ.
ಉದಾಹರಣೆ:
ವಾಕ್ + ಮಯ = ವಾಙ್ಮಯ
ಜಗತ್ + ಮಾತಾ = ಜಗನ್ಮಾತಾ
ವಿಸರ್ಗ ಸಂಧಿ: ಸಂಧಿ ಪದದಲ್ಲಿ ವಿಸರ್ಗ ಅಕ್ಷರವಾದ ಃ ಆದೇಶವಾಗಿ ಬಂದರೆ ಅದನ್ನು ವಿಸರ್ಗ ಸಂಧಿ ಅನ್ನುತಾರೆ
ಉದಾಹರಣೆ:
ಅಂತರ್+ಕರಣ=ಅಂತಃ ಕರಣ
ಅಂತರ್+ಪುರ=ಅಂತಃಪುರ
ಅಂತರ್+ಕಲಹ=ಅಂತಃಕಲಹ
PLEASE MARK AS BRAINLIST ANSWER