India Languages, asked by venkateshudayan, 11 months ago

5 sentence of tiger in kannada​

Answers

Answered by Anonymous
1

Answer:

Hyy mate here is ua answer....

Explanation:

ಹುಲಿ ( ವೈಜ್ಞಾನಿಕ ಹೆಸರು ಪ್ಯಾಂಥೆರಾ ಟೈಗ್ರಿಸ್) ಪ್ರಾಣಿಶಾಸ್ತ್ರದ ಪ್ರಕಾರ ಫೆಲಿಡೇ ಕುಟುಂಬಕ್ಕೆ ಸೇರಿದ ಒಂದು ಜೀವಿ. ಪ್ಯಾಂಥೆರಾ ವಂಶಕ್ಕೆ ಸೇರಿದ ೪ ದೊಡ್ಡ ಬೆಕ್ಕುಗಳ ಪೈಕಿ ಹುಲಿ ಅತ್ಯಂತ ದೊಡ್ಡ ಪ್ರಾಣಿ. ದಕ್ಷಿಣ ಮತ್ತು ಪೂರ್ವ ಏಷ್ಯಾಗಳಲ್ಲಿ ವ್ಯಾಪಕವಾಗಿ ಕಾಣಬರುವ ಹುಲಿ ತನ್ನ ಆಹಾರವನ್ನು ಬೇಟೆಯಾಡಿ ಮಾಂಸ ಸಂಪಾದಿಸುವ ಪ್ರಾಣಿಗಳ ಗುಂಪಿಗೆ ಸೇರಿದೆ. ಹುಲಿಯು ೪ ಮೀ. ವರೆಗೆ (೧೩ ಅಡಿ) ಉದ್ದವನ್ನು ಹಾಗೂ ೩೦೦ ಕಿ.ಗ್ರಾಂ ವರೆಗೆ ತೂಕವನ್ನು ಹೊಂದಬಹುದು. ದೊಡ್ಡ ದೇಹ ಮತ್ತು ಅಪಾರ ಬಲ ಹೊಂದಿರುವ ಹುಲಿಯ ಕಣ್ಸೆಳೆಯುವ ಲಕ್ಷಣವೆಂದರೆ ಬಿಳೀ ಅಥವಾ ಹಳದಿ ಯಾ ಕೇಸರಿ ಬಣ್ಣದ ಮೈ ಮೇಲೆ ನೀಳವಾಗಿ ಮೇಲಿನಿಂದ ಕೆಳಗೆ ಇರುವ ಗಾಢ ಬಣ್ಣದ ಪಟ್ಟೆಗಳು. ಸಾಮಾನ್ಯವಾಗಿ ಹುಲಿಯ ದೇಹದ ಅಡಿಯ ಭಾಗ ತೆಳು ಬಣ್ಣದ್ದಾಗಿರುತ್ತದೆ. ಹುಲಿಗಳ ಜಾತಿಗಳ ಪೈಕಿ ಸೈಬೀರಿಯಾದ ಹುಲಿ ಅತ್ಯಂತ ದೊಡ್ಡ ಕಾಯವನ್ನು ಹೊಂದಿರುತ್ತದೆ.

ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮತ್ತು ಹುಲಿಗಳ ಸಂರಕ್ಷಣೆಯನ್ನು ಮಾಡಲು ಪ್ರತಿ ವರ್ಷದ ಜುಲೈ 29ನ್ನು ‘ವಿಶ್ವ ಹುಲಿ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ಆಚರಣೆಯ ಹಿಂದಿನ ಪ್ರಮುಖ ಉದ್ದೇಶ ಅಪಾಯದಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸುವುದು. ಐತಿಹಾಸಿಕ ಕಾಲದಲ್ಲಿ ಹುಲಿಗಳು ಕಾಕಸಸ್ ಮತ್ತು ಕ್ಯಾಸ್ಪಿಯನ್ ಸಮುದ್ರದಿಂದ ಸೈಬೀರಿಯಾ ಮತ್ತು ಇಂಡೋನೇಷ್ಯಾ ವರೆಗೆ ಏಷ್ಯಾದ ಎಲ್ಲಾ ಭಾಗಗಳಲ್ಲಿ ಜೀವಿಸಿದ್ದವು. ೧೯ನೆಯ ಶತಮಾನದಲ್ಲಿ ಹುಲಿಗಳು ಪಶ್ಚಿಮ ಏಷ್ಯಾದಿಂದ ಸಂಪೂರ್ಣವಾಗಿ ಕಣ್ಮರೆಯಾದವು. ಅಲ್ಲದೆ ಖಂಡವ್ಯಾಪ್ತಿಯನ್ನು ಹೊಂದಿದ್ದ ಹುಲಿಗಳ ನೆಲೆಗಳು ಬಹುವಾಗಿ ಕುಗ್ಗಿ ಇಂದು ಹುಲಿಗಳು ಕೆಲ ಪ್ರದೇಶಗಳಿಗ ಮಾತ್ರ ಸೀಮಿತವಾಗಿವೆ.

ಇಂದು ಸೈಬೀರಿಯಾದ ಆಮೂರ್ ನದಿಯ ದಕ್ಷಿಣಭಾಗದಿಂದ ಹುಲಿಗಳ ನೆಲೆ ಆರಂಭ. ದ್ವೀಪಗಳ ಪೈಕಿ ಸುಮಾತ್ರಾದಲ್ಲಿ ಮಾತ್ರ ಹುಲಿಗಳು ಕಾಣುತ್ತವೆ. ೨೦ನೆಯ ಶತಮಾನದಲ್ಲಿ ಜಾವಾ ಮತ್ತು ಬಾಲಿ ದ್ವೀಪಗಳಿಂದ ಹುಲಿಗಳು ಶಾಶ್ವತವಾಗಿ ಮರೆ ಯಾದವು.

....

I HOPE IT HELPS U...

PLZZ MARK IT AS BRAINLIST...

PLZZ FOLLOW ME...

TQ....❤️❤️

Similar questions