ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ
54. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
55. ಮಾಡಿದ್ದು ಮಹಾರಾಯ.
Answers
Answered by
21
▪️ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
➡️ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.
➡️ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ನಾವು ಮಾಡಿದ ಕೆಲಸದ ಪ್ರತಿಫಲ ಒಳಿತಾಗಲಿ ಕೆಡುಕಾಗಲಿ ನಾವೇ ಅನುಭವಿಸಬೇಕು ಎಂಬುದನ್ನು ತಿಳಿಸುತ್ತದೆ.
ವಿಸ್ತರಣೆ :
ನಿತ್ಯ ಜೀವನದಲ್ಲಿ ನಾವು ಅನೇಕ ತಪ್ಪುಗಳನ್ನು ಮಾಡುತ್ತೇವೆ . ಅದರಲ್ಲಿ ಕೆಲವು ನಮಗೆ ಗೊತ್ತಿಲ್ಲದೇ ಆಗುತ್ತದೆ . ಅದನ್ನು ಬೇರೆಯವರು ನಮಗೆ ಹೇಳಿದಾಗ ನಮ್ಮರಿವಿಗೆ ಬರುತ್ತದೆ . ಆಗ ತಿದ್ದಿಕೊಳ್ಳುತ್ತೇವೆ .
ಇನ್ನು ಕೆಲವೊಂದಿಷ್ಟು ತಪ್ಪುಗಳು ನಮ್ಮರಿವಿಗೆ ಬಂದಿರುತ್ತವೆ . ನಾವು ತಪ್ಪು ಮಾಡಿಬಿಟ್ಟೆವು ಅಥವಾ ನಾವು ಮಾಡುತ್ತಿರುವುದು ತಪ್ಪೆಂಬುದು ನಮಗೆ ತಿಳಿಯುತ್ತದೆ . ಹೀಗೆ ಗೊತ್ತಾದ ಮೇಲೆ ಅದನ್ನು ತಿದ್ದಿಕೊಳ್ಳಬೇಕು . ಅದನ್ನು ಯಾರೂ ಹೇಳುವ ಅಗತ್ಯವಿರುವುದಿಲ್ಲ .
ಕಾರಣ , ಅಂಗೈಯಲ್ಲಾದ ಹುಣ್ಣು ಕಣ್ಣಿಗೆ ಕಾಣುವಂತೆ ನಮ್ಮ ತಪ್ಪುಗಳು ನಮಗೆ ಕಾಣುತ್ತವೆ . ತಪ್ಪಂತೂ ಆಗಿ ಹೋಗಿರುತ್ತದೆ . ಆದರೆ ಇನ್ನೊಮ್ಮೆ ಆ ತಪ್ಪು ಮರುಕಳಿಸದಂತೆ ತಿದ್ದಿಕೊಂಡು ನಡೆಯಬೇಕಾದಂತ ಜವಾಬ್ದಾರಿ ನಮ್ಮ ಮೇಲಿರುತ್ತದೆ .
ಕಣ್ಣೆದುರೇ ಕಾಣುತ್ತಿರುವ ತಪ್ಪುಗಳನ್ನು ತೋರಿಸಲು ಯಾರು ಬೇಕು ? ಅವು ನಮಗೆ ತಿಳಿಯದೆ ? ಒಂದು ವೇಳೆ ನಾವು ತಿಳಿದು ತಿಳಿಯದಂತೆ ವರ್ತಿಸಿದರೆ ಉಳಿದವರು ಈ ಗಾದೆ ಹೇಳಿ ಆಡಿಕೊಳ್ಳುತ್ತಾರೆ .
___________________
▪️ಮಾಡಿದ್ದು ಮಹಾರಾಯ.
➡️ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.
➡️ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ನಾವು ಮಾಡಿದ ಕೆಲಸದ ಪ್ರತಿಫಲ ಒಳಿತಾಗಲಿ ಕೆಡುಕಾಗಲಿ ನಾವೇ ಅನುಭವಿಸಬೇಕು ಎಂಬುದನ್ನು ತಿಳಿಸುತ್ತದೆ.
ವಿಸ್ತರಣೆ :
ವ್ಯಕ್ತಿ ತಾನು ಮಾಡಿದ ಕರ್ಮಗಳ ಫಲವನ್ನು ತಾನೇ ಅನುಭವಿಸಬೇಕು. ಬೇರೆ ಯಾರೂ ಅದರ ಫಲಗಳನ್ನು ಅನುಭವಿಸಲಾರರು ಎಂಬುದನ್ನು ಹೇಳುತ್ತದೆ. ಒಳ್ಳೆಯ ಕರ್ಮಗಳನ್ನು ಮಾಡಿದವರಿಗೆ ಒಳ್ಳೆಯ ಫಲಗಳು, ಕೆಟ್ಟ ಕರ್ಮಗಳನ್ನು ಮಾಡಿದವರಿಗೆ ಕೆಟ್ಟ ಫಲಗಳು ಉಂಟಾಗುವುದು ಖಚಿತ ಎಂಬುದನ್ನು ಇಲ್ಲಿ ಕಾಣಬಹುದಾಗಿದೆ. ಆದ್ದರಿಂದ ನಾವು ಯಾವುದೇ ಕೆಲಸ ಮಾಡಬೇಕಾದರೂ ಅದರಿಂದಾಗುವ ಪರಿಣಾಮವೇನೆಂದು ಯೋಚನೆ ಮಾಡಬೇಕು. ಕೃತ್ಯ ಮಾಡಿದ ಮೇಲೆ ಪಶ್ಚಾತ್ತಾಪ ಪಟ್ಟರೆ ಏನೂ ಪ್ರಯೋಜನವಿಲ್ಲ. ತಾನು ಮಾಡಿದ ಕರ್ಮಗಳ ಫಲವನ್ನು ತಾನು ಅನುಭವಿಸಿಯೇ ತೀರಬೇಕು. ಬೆಳೆಯ ಕಾಳನ್ನು ಬಿತ್ತಿದರೆ ಬೆಳೆ ಬೆಳೆಯುವುದಲ್ಲದೆ ಕಳೆ ಬೀಜ ಬಿತ್ತಿದರೆ ಬೆಳೆ ಬೆಳೆಯುವುದೇ?
ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ತನ್ನ ಸ್ವಾರ್ಥವನ್ನು ಮರೆತು ಸಮಾಜಮುಖಿಯಾಗಿ; ಎಲ್ಲರಿಗೂ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಬೇಕು. ಅದನ್ನು ಬಿಟ್ಟು ತನ್ನ ಸ್ವಾರ್ಥಕ್ಕಾಗಿ ಕೆಟ್ಟ ಮಾರ್ಗವನ್ನು ಅನುಸರಿಸಿದರೆ ಅದರ ಪರಿಣಾಮವೂ ಕೆಟ್ಟದ್ದೇ ಆಗುತ್ತದೆ. ಇದರಿಂದ ಯಾರೂ ತಪ್ಪಿಸಿಕೊಳ್ಳಲಾರರು ಎಂಬುದನ್ನು ಈ ಗಾದೆ ಒತ್ತಿ ಹೇಳುತ್ತದೆ.
___________________
Be Brainly!
#ಕನ್ನಡತಿ ❤️
Similar questions