7-9 lines kannada speech on nature
Answers
Explanation:
ಪರಿಸರ ರಕ್ಷಣೆ-ನಮ್ಮೆಲ್ಲರ ಹೊಣೆ, ಗಿಡ ಮರ-ಬೆಳಸಿ-ಪರಿಸರ ಉಳಿಸಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಇಂದಿನ ಬದಲಾದ ವಾತವರಣ ಮತ್ತು ದಿನೇ ದಿನೇ ಸಾಕಷ್ಟು ಏರಿಳಿಕೆಯಾಗುತ್ತಿರುವ ಹವಾಮಾನ .ಪ್ರತಿ ವರ್ಷದ ಜೂನ್ ತಿಂಗಳಿನಲ್ಲಿ ಪರಿಸರ ಎಷ್ಟು ಹಾನಿಯಾಗಿದೆ ಎಂದು ಯೋಚಿಸುವ ಬದಲು ಪರಿಸರವನ್ನು ನಾವು ಎಷ್ಟು ಅಭಿವೃದ್ಧಿ ಪಡಿಸಿದ್ದೇವೆ ಎಂದು ಯೋಚಿಸುವಂತಾದರೆ ಬಹುಶಃ ಪರಿಸರ ದಿನಕ್ಕೆ ಹೊಸ ಅರ್ಥ ಬರಬಹುದು. ನಮ್ಮ ಸುತ್ತಮುತ್ತಲಿನ ಪರಿಸರ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಪರಿಸರಕ್ಕೆ ಹಾನಿಯಾದರೆ ನಮಗೇ ಹಾನಿಯಾದಂತೆ.ಜೂನ್ 5ನೇ ದಿನವನ್ನು ವಿಶ್ವ ಪರಿಸರ ದಿನಾಚರಣೆಯೆಂದು ಆಚರಿಸಲಾಗುತ್ತದೆ. ಪರಿಸರ ದಿನಾಚರಣೆಯನ್ನು ಆಚರಿಸಬೇಕೆಂಬ ನಿರ್ಧಾರವನ್ನು 1972-73 ರ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು.
1974 ರಿಂದ ವಿಶ್ವ ಪರಿಸರ ದಿನಾಚರಣೆ ಪ್ರಾರಂಭವಾಯಿತು. ಜೂನ್ 05 ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮವನ್ನು ಆಚರಿಸಲಾಗುತ್ತಿದೆ. ನೆಲ, ಮಣ್ಣು, ಬೆಳೆ, ಹಣ್ಣು ಹಂಪಲು ಹೀಗೆ ಎಲ್ಲವೂ ಉಳಿಯುವಂತಾಗಲು ಈ ದಿನವನ್ನು ಜಾಗೃತ ದಿನವೆಂದು ಆಚರಿಸಲಾಗುತ್ತಿದೆ.....
HOPE IT HELPS