World Languages, asked by roopahgowdaroopagowd, 1 month ago

9) ಭಾರತ ಹಾಗು ಹಮೆರಿಕದ ಸಂಸ್ಕೃತಿಗಳಿಗೆ ಎಷ್ಟು ವ ಗ ಇತಿಹಾಸವಿದೆ ?​

Answers

Answered by psupriya789
2

ಅಮೆರಿಕ   ಸಂಯುಕ್ತ   ಸಂಸ್ಥಾನವು   (ಸಾಮಾನ್ಯವಾಗಿ ಸಂಯುಕ್ತ ಸಂಸ್ಥಾನ , ಯುಎಸ್ , ಯುಎಸ್‌ಎ ಅಥವಾ ಅಮೆರಿಕಾ ಎಂದು ಕರೆಯಲ್ಪಡುವ)   ಐವತ್ತು ರಾಜ್ಯಗಳು  ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್‌ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ. ಬಹುತೇಕ ಕೇಂದ್ರ ಭಾಗದ ಉತ್ತರ ಅಮೆರಿಕಾದಲ್ಲಿ ಸ್ಥಿತವಾಗಿರುವ ಈ ದೇಶದ ಒತ್ತೊತ್ತಾಗಿರುವ 48 ರಾಜ್ಯಗಳು ಹಾಗೂ ಪ್ರಧಾನ ಡಿಸ್ಟ್ರಿಕ್ಟ್‌ ವಾಷಿಂಗ್ಟನ್ ಡಿಸಿ, ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ಸಮುದ್ರಗಳ ನಡುವೆ ನೆಲೆಗೊಂಡಿದ್ದು, ಉತ್ತರದಲ್ಲಿ ಕೆನಡಾ ಹಾಗೂ ದಕ್ಷಿಣದಲ್ಲಿ ಮೆಕ್ಸಿಕೋಗಳನ್ನು ಗಡಿಗಳಾಗಿ ಹೊಂದಿದೆ. ಅಲಾಸ್ಕಾ ರಾಜ್ಯವು ವಾಯುವ್ಯ ಭಾಗದಲ್ಲಿದ್ದು, ಕೆನಡಾವನ್ನು ಉತ್ತರ ದಿಕ್ಕಿನಲ್ಲೂ ಬೇರಿಂಗ್ ಜಲಸಂಧಿಯನ್ನು ಹಾದು ರಷ್ಯಾವನ್ನು ಪಶ್ಚಿಮ ದಿಕ್ಕಿನಲ್ಲೂ ಹೊಂದಿದೆ. ಹವಾಯ್ ರಾಜ್ಯವು ಪೆಸಿಫಿಕ್‌ ಮಧ್ಯದಲ್ಲಿರುವ ದ್ವೀಪಸಮೂಹವಾಗಿದೆ. ಅಷ್ಟೇ ಅಲ್ಲದೆ, ಪೆಸಿಫಿಕ್ ಹಾಗೂ ಕೆರೆಬಿಯನ್‌ಗಳಲ್ಲಿಯೂ ಈ ದೇಶದ ಹಲವಾರು ಪ್ರಾಂತ್ಯಗಳು ಅಥವಾ ದ್ವೀಪಕಲ್ಪಗಳಿವೆ. 3.79 ಚದರ ಮೈಲುಗಳಷ್ಟು (9.83 ಮಿಲಿಯನ್‌ ಚ.ಕಿ.ಮೀ) ವಿಸ್ತೀರ್ಣವುಳ್ಳ ಹಾಗೂ ಸುಮಾರು 307 ಮಿಲಿಯನ್‌ ಜನಸಂಖ್ಯೆಯನ್ನು ಹೊಂದಿರುವ ಸಂಯುಕ್ತ ಸಂಸ್ಥಾನವು ಒಟ್ಟು ವಿಸ್ತೀರ್ಣದಲ್ಲಿ ಮೂರನೇ ಅಥವಾ ನಾಲ್ಕನೇ ದೊಡ್ಡ ದೇಶವಾಗಿಯೂ, ಭೂವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ಮೂರನೇ ದೊಡ್ಡ ದೇಶವಾಗಿಯೂ ಗುರುತಿಸಲ್ಪಟ್ಟಿದೆ. ವಿವಿಧ ದೇಶಗಳ ವಲಸೆಗಾರರಿಂದಾಗಿ ಸಂಯುಕ್ತ ಸಂಸ್ಥಾನವು ಜಗತ್ತಿನ ಜನಾಂಗ ವೈವಿಧ್ಯ ಹಾಗೂ ಬಹುಸಂಸ್ಕೃತಿಯುಳ್ಳ ದೇಶಗಳಲ್ಲಿ ಒಂದಾಗಿದೆ.[೫] ಸಂಯುಕ್ತ ಸಂಸ್ಥಾನದ ಆರ್ಥಿಕತೆಯು ಜಗತ್ತಿನಲ್ಲೇ ಬಹುದೊಡ್ದ ಆರ್ಥಿಕತೆಯಾಗಿದೆ. 2008 ರಲ್ಲಿ ಅಂದಾಜಿಸಿದಂತೆ ಜಿಡಿಪಿಯು 14.3 ಯುಎಸ್ ಡಾಲರ್ ಆಗಿತ್ತು. (ಜಗತ್ತಿನ ನಾಮಾಂಕಿತ ಜಿಡಿಪಿ ಶೇಕಡಾ 23% ಮತ್ತು ಕೊಳ್ಳುವ ಶಕ್ತಿಯ ಸಾಮ್ಯತೆಯು ಸುಮಾರು ಶೇಕಡಾ 21%)[೬][೭] ಅಟ್ಲಾಂಟಿಕ್ ಸಾಗರದುದ್ದಕ್ಕೂ ಇದ್ದ ಗ್ರೇಟ್ ಬ್ರಿಟನ್ನಿನ ಹದಿಮೂರು ವಸಾಹತುಗಳಿಂದ ಈ ರಾಷ್ಟ್ರವು ಸ್ಥಾಪಿತಗೊಂಡಿತು. ಅವರು 4 ಜುಲೈ 1776ರಂದು ಗ್ರೇಟ್ ಬ್ರಿಟನ್ನಿನಿಂದ ಸ್ವಾತಂತ್ರ್ಯ ಹಾಗೂ ತಮ್ಮದೇ ಆದ ಸಹಕಾರೀ ಒಕ್ಕೂಟದ ರಚನೆಯನ್ನು ಘೋಷಿಸಿಕೊಳ್ಳುವ ಮೂಲಕ ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು. ಬಂಡುಕೋರ ರಾಜ್ಯಗಳು ಪ್ರಥಮ ಯಶಸ್ವೀ ವಸಾಹತುಷಾಹಿ ಸ್ವಾತಂತ್ರ್ಯ ಸಮರವೆನಿಸಿದ ಅಮೆರಿಕ ಕ್ರಾಂತಿ ಸಮರದಲ್ಲಿ ಗ್ರೇಟ್ ಬ್ರಿಟನ್ನನ್ನು ಸೋಲಿಸಿದವು.[೮] ಫಿಲಿಡೆಲ್ಫಿಯ ಒಡಂಬಡಿಕೆಯು ಈಗಿನ ಸಂಯುಕ್ತ ಸಂಸ್ಥಾನದ ಸಂವಿಧಾನವನ್ನು ಸೆಪ್ಟೆಂಬರ್ 17, 1787ರಲ್ಲಿ ಅಳವಡಿಸಿಕೊಂಡಿತು. ಮುಂದಿನ ವರ್ಷ ಅದಕ್ಕೆ ದೊರೆತ ಅನುಮೋದನೆಯಿಂದಾಗಿ ಎಲ್ಲ ರಾಜ್ಯಗಳು ಪ್ರಬಲ ಕೇಂದ್ರ ಸರ್ಕಾರವನ್ನು ಹೊಂದಿದ ಒಂದೇ ಗಣರಾಜ್ಯದ ಅಂಗಗಳಾದವು. ಹಲವು ಮೂಲಭೂತ ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಖಚಿತಪಡಿಸಿ, ಹತ್ತು ಸಾಂವಿಧಾನಿಕ ತಿದ್ದುಪಡಿಗಳನ್ನೊಳಗೊಂಡ ಹಕ್ಕುಗಳ ಮಸೂದೆಯು 1791ರಲ್ಲಿ ಅನುಮೋದನೆ ಪಡೆಯಿತು. 19ನೇ ಶತಮಾನದಲ್ಲಿ ಸಂಯುಕ್ತ ಸಂಸ್ಥಾನವು ಫ್ರಾನ್ಸ್, ಸ್ಪೇನ್, ಯುನೈಟೆಡ್ ಕಿಂಗ್‌ಡಮ್, ಮೆಕ್ಸಿಕೋ ಹಾಗೂ ರಷ್ಯಾಗಳಿಂದ ಭೂಮಿಯನ್ನು ಸಂಪಾದಿಸಿಕೊಂಡಿತು ಮತ್ತು ಟೆಕ್ಸಾಸ್ ಗಣರಾಜ್ಯ ಹಾಗೂ ಹವಾಯ್ ಗಣರಾಜ್ಯಗಳನ್ನು ಸ್ವಾಧೀನಪಡಿಸಿಕೊಂಡಿತು. ಕೃಷಿ ಆಧಾರಿತ ದಕ್ಷಿಣ ಹಾಗೂ ಕೈಗಾರಿಕೆಗಳಿಂದ ಕೂಡಿದ ಉತ್ತರ ಭಾಗಗಳ ನಡುವೆ ರಾಜ್ಯದ ಹಕ್ಕುಗಳು ಹಾಗೂ ಗುಲಾಮೀ ಪದ್ಧತಿಯ ವಿಸ್ತರಣೆ ಕುರಿತು ಉಂಟಾದ ವ್ಯಾಜ್ಯಗಳು 1860ರ ಅಮೆರಿಕದ ಆಂತರಿಕ ಸಮರಕ್ಕೆ ನಾಂದಿಯಾದವು. ಉತ್ತರದ ವಿಜಯವು ಶಾಶ್ವತವಾಗಿ ದೇಶವನ್ನು ಹೋಳಾಗಿಸಿತು ಮತ್ತು ಗುಲಾಮಗಿರಿಯ ಸಕ್ರಮ ಪದ್ಧತಿಯನ್ನು ಕೊನೆಗೊಳಿಸಿತು. 1870ರ ಹೊತ್ತಿಗೆ ದೇಶದ ಆರ್ಥಿಕತೆಯು ಜಗತ್ತಿನಲ್ಲಿ ಅತಿದೊಡ್ಡದಾಗಿ ಹೊರಹೊಮ್ಮಿತು.[೯] ಸ್ಪಾನಿಷ್-ಅಮೆರಿಕನ್ ಸಮರ ಮತ್ತು ಜಾಗತಿಕ ಯುದ್ಧಗಳು ದೇಶದ ಸೈನಿಕ ಬಲದ ಸಾಮರ್ಥ್ಯವನ್ನು ಸಾಬೀತುಗೊಳಿಸಿದವು. 1945ರಲ್ಲಿ ಎರಡನೇ ಜಾಗತಿಕ ಸಮರದಿಂದ ಮೊಟ್ಟಮೊದಲ ಅಣ್ವಸ್ತ್ರಗಳನ್ನು ಹೊಂದಿದ ದೇಶವಾಗಿ ಹಾಗೂ ವಿಶ್ವಸಂಸ್ಥೆಯ ರಕ್ಷಣಾ ಸಮಿತಿ ಮತ್ತು ನ್ಯಾಟೋದ ಸಂಸ್ಥಾಪಕ ಸದಸ್ಯನಾಗಿ ಹೊರಹೊಮ್ಮಿತು. ಶೀತಲ ಸಮರದ ಅಂತ್ಯದಲ್ಲಿ ಮತ್ತು ಸೋವಿಯತ್ ಯೂನಿಯನ್‌ನ ವಿಲೀನವು ಸಂಯುಕ್ತ ಸಂಸ್ಥಾನವನ್ನು ಅತ್ಯಂತ ಶಕ್ತಿಶಾಲಿಯಾಗಿಸಿತು.ಜಾಗತಿಕ ರಕ್ಷಣಾವೆಚ್ಚದ ಸರಿಸುಮಾರು ಶೇ50ರಷ್ಟನ್ನು ತನ್ನ ರಕ್ಷಣೆಗಾಗಿ ವಿನಿಯೋಗಿಸುವ ಈ ದೇಶ, ಜಗತ್ತಿನಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ದೇಶವಾಗಿದೆ

Similar questions