A short note on forest in kannada (50 words)
Answers
ಕಾಡಿನ ಅನುಭವವೇ ಒಂದು ವಿಶೇಷ. ಅಲ್ಲಿಗೆ ಹೋಗುತ್ತಿದ್ದಂತೆಯೇ ಎಲ್ಲವನ್ನು ಮರೆತು ಅದ್ಯಾವುದೋ ಪ್ರಪಂಚಕ್ಕೆ ಹೋದಂತೆ ಭಾಸವಾಗಿ ಬಿಡುತ್ತೆ. ಅದರ ಪರಿಸರವೇ ಹಾಗೆ. ಮನಸ್ಸಿಗೆ ಸಂಜೀವಿನಿಯ ರೂಪದಲ್ಲಿ ನಮ್ಮ ಎಲ್ಲಾ ಭಾರವನ್ನು ತೆಗೆದೊಯ್ದು ಚಿಕಿತ್ಸೆ ನೀಡಿ ಬಿಡುತ್ತದೆ.
ಮನುಷ್ಯನು ಕಾಲಕ್ರಮೇಣ ಕಾಡಿನಿಂದ ನಾಡಿನತ್ತ ಸಂಚಾರ ಮಾಡಿದ. ಕಾಡಿನ ಸೂಕ್ಷ್ಮತೆಗಳನ್ನು ಅರಿಯುವುದು ಮರೆತುಬಿಟ್ಟ. ಆದರೆ ನಾವು ಎಷ್ಟು ಮುಂದುವರೆದರೂ ಪ್ರಕೃತಿಗೆ ತಲೆಬಾಗಲೇಬೇಕು.
ನಮ್ಮ ಪೂರ್ವಜರು ಕಾಡಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು. ನಮ್ಮ ವೇದಗಳಲ್ಲಿ ಕೂಡ ಕಾಡಿನ ಪ್ರಾಮುಖ್ಯತೆಯ ಬಗ್ಗೆ ಉಲ್ಲೇಖಿಸಲಾಗಿದೆ. ಅಥರ್ವ ವೇದದಲ್ಲಿ ನಾನು ನಿನ್ನಿಂದ ಏನನ್ನು ತೆಗೆದುಕೊಳ್ಳೂತ್ತೇನೂ, ಅದು ನಿನ್ನಲ್ಲಿ ಬೇಗ ಪುನಃ ಉತ್ಪನ್ನಗೊಳ್ಳಲಿ ಎಂದು ಹೇಳಲಾಗಿದೆ.
Forest means not just wild animals
ಇದನ್ನೇ ಇವತ್ತು ಸಸ್ಟೈಬಲ್ ಡೆವೆಲಪ್‌ಮೆಂಟ್ ಎನ್ನುತ್ತಾರೆ. ಈ ಒಂದು ಸಿದ್ದಾಂತವನ್ನು ಚಂದ್ರಗುಪ್ತ ಮೌರ್ಯ, ಅಕ್ಬರ್, ಶಿವಾಜಿಯವರಂತಹ ರಾಜರು ಕೂಡ ಅಳವಡಿಸಿಕೊಂಡಿದ್ದರು. ಆದರೆ ಬ್ರಿಟೀಷರು ಬಂದಾಗ ನಮ್ಮ ಮೇಲೆ ಅಷ್ಟೇ ಅಲ್ಲದೆ ಕಾಡಿನ ಸಂಪನ್ಮೂಲಗಳ ಮೇಲೆಯೂ ಶೋಷಣೆ ಮಾಡಿದರು. ಆಯುರ್ವೇದದಂತಹ ವಿದ್ಯೆ ಕೂಡ ಕಾಡನ್ನು ಅವಲಂಬಿಸಿದೆ. ಕಾಡಿನ ಸಿಗುವ ಬೇರು ಸೊಪ್ಪು ಇತ್ಯಾದಿಗಳನ್ನು ಉಪಯೋಗಿಸಿ ನಮ್ಮ ಖಾಯಿಲೆಗೆ ಚಿಕಿತ್ಸೆ ನೀಡಲಾಗುತ್ತದೆ.
ಕಾಡಿನ ಸೂಕ್ಷ್ಮತೆಯನ್ನು ಅರಿಯಲು ಶುರು ಮಾಡಿದಾಗ ಅದರ ವಿಸ್ಮಯತೆಯನ್ನು ಒಂದೊಂದಾಗಿ ಬಿಚ್ಚಿಡತೊಡಗುತ್ತದೆ. ಎಲ್ಲಿಂದಲೋ ಬೀಸುವ ಗಾಳಿ ಯಾವುದೋ ಪ್ರಾಣಿಯ ವಾಸನೆ ತಂದಿರಬಹುದು. ಇದನ್ನು ಇನ್ನೊಂದು ಪ್ರಾಣಿ ಹಿಡಿದು ಎಚ್ಚೆತ್ತುಕೊಳ್ಳುತ್ತವೆ.
Forest means not just wild animals
ಚಿಲಿಪಿಲಿ ಗುಡುವ ಹಕ್ಕಿ ಕಾಡಿನ ಕಥೆಯನ್ನು ಹೇಳುತ್ತಿರುತ್ತದೆ. ಅದರ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುತ್ತಿರುತ್ತದೆ. ನೀವು ಯಾರಾದರೂ ಪಕ್ಷಿ ತಜ್ಞರನ್ನು ಭೇಟಿ ಮಾಡಿದರೆ ಅದು ಏನು ಹೇಳುತ್ತಿರಬಹುದೆಂದು ನಿಮಗೆ ಹೇಳಿ ಬಿಡುತ್ತಾರೆ. ನೀವು ಸಾಕಿರುವ ನಾಯಿ ಏಕೆ ಬೊಗುಳುತ್ತಿದೆ? ಏಕೆ ಸಪ್ಪಗಿದೆ? ಎಂದು ನಿಮಗೆ ಹೇಗೆ ಅರಿವಾಗುತ್ತದೆಯೋ, ಅದೇ ರೀತಿ ಅವರಿಗೂ ತಿಳಿದುಬಿಡುತ್ತದೆ.
this all in kanadh
hope you get ans
kannda hama nahi ati ra