English, asked by afreensultana5555, 9 months ago

about cat essay writing in kannada . its urgent please

Answers

Answered by mini129
2

this is for you good luck

Attachments:
Answered by patelnandalapn
10

ಈ ಗುಂಪಿನಲ್ಲಿ ಹಲವಾರು ಜಾತಿಗಳಿದ್ದು ಇವುಗಳ ಪೈಕಿ ಫೆಲಿಸ್ ಎಂಬ ಜಾತಿಗೆ ಸೇರುವ ಎಲ್ಲ ಪ್ರಭೇದಗಳನ್ನೂ ಬೆಕ್ಕುಗಳು ಎನ್ನುತ್ತಾರೆ. ಈ ಜಾತಿಗೆ ಹುಲಿ, ಸಿಂಹ, ಕಾಡುಬೆಕ್ಕು ಮುಂತಾದ ಪ್ರಾಣಿಗಳೂ ಸೇರಿವೆ. ಇವುಗಳಿಗೆ ಮುಂಗಾಲಿನಲ್ಲಿ ಐದು ಹಾಗೂ ಹಿಂಗಾಲಿನಲ್ಲಿ ನಾಲ್ಕು ಬೆರಳುಗಳಿರುವುವು. ಬೆರಳುಗಳ ತುದಿಯಲ್ಲಿ ಹರಿತ ಪಂಜುಗಳಿವೆ. ಬೆಕ್ಕು ಎಂದು ಪರಿಚಿತವಾಗಿರುವ ಮತ್ತು ಮನೆಗಳಲ್ಲಿ ಸಾಕುವ ಪ್ರಾಣಿ ಫೆಲಿಸ್ ಡೊಮೆಸ್ಟಿಕ ಎಂಬ ಪ್ರಭೇದಕ್ಕೆ ಸೇರುತ್ತದೆ.

ಇದೇ ನಿಜವಾದ ಸಾಕು ಬೆಕ್ಕು.ಸಾಕು ಬೆಕ್ಕುಗಳೆಲ್ಲವೂ ಫೆಲಿಸ್ ಡೊಮೆಸ್ಟಿಕ ಪ್ರಭೇದಕ್ಕೆ ಸೇರುತ್ತವಾದರೂ ಇವುಗಳಲ್ಲಿ ಹಲವಾರು ತಳಿಗಳಿವೆ. ಸಾಮಾನ್ಯವಾಗಿ ಇವನ್ನು ಮೂರು ವಿಧಗಳಾಗಿ ವಿಂಗಡಿಸಬಹುದು: ನೀಳ (ಉದ್ದ) ಕೂದಲಿನವು, ಚಿಕ್ಕ ಕೂದಲಿನವು, ವಿದೇಶಿ ಚಿಕ್ಕ ಕೂದಲಿನವು. ಇವುಗಳ ಪೈಕಿ ನೀಳಕೂದಲಿನ ಬೆಕ್ಕುಗಳನ್ನು ಶ್ರೀಮಂತ ಬೆಕ್ಕುಗಳೆಂದು ಪರಿಗಣಿಸುವುದುಂಟು.

ಇಂದಿನ ಬೆಕ್ಕು ಫೆಲಿಸ್ ಮ್ಯಾನ್ಯುಲ್ ಎಂಬ ಪ್ರಭೇದಕ್ಕೆ ಸೇರಿರುವ ಪಲ್ಲ ಎಂಬ ಬೆಕ್ಕಿನಿಂದ ಉದಯವಾಗಿ ಮಾರ್ಪಾಡಾಯಿತು ಎಂಬ ನಂಬಿಕೆಯಿತ್ತು. ಆದರೆ ಪಲ್ಲ ಬೆಕ್ಕಿಗೆ ಅತ್ಯಂತ ದಟ್ಟ ಕೂದಲಿನ ಬಾಲವಿದ್ದು ಅದರ ಶರೀರ ಮತ್ತು ಮುಖದ ಮೇಲೆ ಬೆಕ್ಕಿನಲ್ಲಿರದ ಗುರುತುಗಳಿರುವುವು. ಈ ಕಾರಣದಿಂದ ಸಾಕು ಬೆಕ್ಕು ಪಲ್ಲ ಬೆಕ್ಕಿನಿಂದ ವಿಕಸಿಸಿದವು ಎಂಬ ನಂಬಿಕೆಯನ್ನು ಕೈಬಿಡಲಾಯಿತು.

ಬೆಕ್ಕು ಮಾಂಸಾಹಾರಿ ಪ್ರಾಣಿ

ಸಾಮಾನ್ಯವಾಗಿ ಬೆಕ್ಕು ಮಾಂಸಾಹಾರಿ ಪ್ರಾಣಿ. ಬ್ರೆಡ್ಡು ಅಥವಾ ಅನ್ನ ತಿನ್ನಬಲ್ಲುದಾದರೂ ವಾಸ್ತವವಾಗಿ ಇದರ ದವಡೆ ಹಾಗೂ ಹಲ್ಲು ಮಾಂಸಭಕ್ಷಣೆಗೆ ಅನುಕೂಲವಾಗುವಂತೆ ಮಾರ್ಪಾಡಾಗಿವೆ. ಇಲಿ, ಅಳಿಲು, ಕೀಟ, ಮೀನು, ಪಕ್ಷಿ ಮುಂತಾದವು ಬೆಕ್ಕಿನ ಸಾಮಾನ್ಯ ಆಹಾರ. ಹೊಟ್ಟೆ ತುಂಬಿದ ಬೆಕ್ಕು ಇಲಿ ಹಿಡಿಯುವುದಿಲ್ಲ ಎಂಬುದು ತಪ್ಪು ಕಲ್ಪನೆ.

ಇಲಿ ಹಿಡಿಯುವುದು ಬೆಕ್ಕಿಗೆ ಆನುವಂಶಿಕವಾಗಿ ಬಂದ ಗುಣ. ಬೆಕ್ಕು ಬೇರೆ ಬೇರೆ ಪ್ರಾಣಿಗಳನ್ನು ತಿನ್ನುವುದಾದರೂ ಇಲಿ ಅಳಿಲು ಅಥವಾ ಮೊಲಗಳನ್ನು ತಿನ್ನುವುದೇ ಹೆಚ್ಚು. ಏಕೆಂದರೆ ಮೀನು ಅಥವಾ ಪಕ್ಷಿಗಳನ್ನು ಇದು ಸುಲಭವಾಗಿ ಹಿಡಿಯಲಾರದು.

ಬೆಕ್ಕಿನ ಶರೀರ ರಚನೆ

ಯೂರೋಪಿನ ಕಾಡುಬೆಕ್ಕು ಫೆಲಿಸ್ ಸಿಲ್ವೆಸ್ಟ್ರಿಸ್ ಎಂಬ ಪ್ರಭೇದಕ್ಕೆ ಸೇರಿದೆ. ಇದು ಕಪ್ಪು ಚುಕ್ಕಿಗಳಿರುವ ಟ್ಯಾಬಿ ಎಂಬ ಸಾಕುಬೆಕ್ಕನ್ನು ಹೋಲುತ್ತದೆ. ಆದರೆ ಈ ಕಾಡು ಬೆಕ್ಕು ಬಲಿಷ್ಠವಾಗಿದೆ. ಇದಕ್ಕೆ ಸಾಕುಬೆಕ್ಕಿಗಿಂತ ದೊಡ್ಡದಾದ ತಲೆ ಹಾಗೂ ಹಲ್ಲು ಇವೆ. ತಲೆ ಮತ್ತು ಶರೀರ 60 ಸೆಂಮೀನಷ್ಟು ಉದ್ದವಾಗಿದೆ. ಬಾಲದಉದ್ದ 30 ಸೆಂಮೀ, ಇದರಲ್ಲಿ ಅಲ್ಲಲ್ಲಿ ಕಪ್ಪು ಉಂಗುರಗಳಿದ್ದು ಇದರ ತುದಿ ಕಪ್ಪಗಿದೆ.

ಬುಡದಿಂದ ತುದಿಯವರೆಗೂ ಇದರ ಗಾತ್ರ ಒಂದೇ ರೀತಿ ಇದೆ. ತಲೆ ಅಗಲ, ಕುಡಿಮೀಸೆ ಉಂಟು. ತುಪ್ಪಳ ಸಾಕುಬೆಕ್ಕಿನದಕ್ಕಿಂತ ದಟ್ಟವಾಗಿದೆ. ಸಾಮಾನ್ಯವಾಗಿ ಇವು ಒಂಟಿಜೀವಿಗಳು. ಸಂಭೋಗಕಾಲದಲ್ಲಿ ಮಾತ್ರ ಗಂಡು-ಹೆಣ್ಣು ಜೊತೆಯಾಗುತ್ತವೆ. ಚಿಕ್ಕ ಸ್ತನಿಗಳು, ಕೀಟಗಳು ಮತ್ತು ಪಕ್ಷಿಗಳು ಇವುಗಳ ಆಹಾರ.

ಇಂಗ್ಲೆಂಡಿನಲ್ಲಿ ಈಗ ಫೆಲಿಸ್ ಸಿಲ್ವೆಸ್ಟ್ರಿಸ್ ಗ್ರಾಂಪಿಯ ಎಂಬ ಪ್ರಭೇದ ಮಾತ್ರ ಉಳಿದಿದೆ. ಈ ಬೆಕ್ಕುಗಳು ಎತ್ತರದ ಹಾಗೂ ಬಂಡೆಗಳಿಂದಾವೃತವಾದ ಪ್ರದೇಶಗಳಲ್ಲಿ ವಾಸಿಸುತ್ತವೆ. ಬೆಕ್ಕು ಸಾಮಾನ್ಯವಾಗಿ ಉಷ್ಣವಲಯ ಹಾಗೂ ಸಮಶೀತೋಷ್ಣವಲಯ ಪ್ರದೇಶಗಳಲ್ಲಿ ವಾಸಿಸುತ್ತದೆ. ಅತ್ಯಂತ ಚಳಿಯಿರುವ ಶೀತವಲಯ ಅಥವಾ ಧ್ರುವ ಪ್ರದೇಶಗಳಲ್ಲಿ ಬೆಕ್ಕುಗಳು ಇಲ್ಲ. ಆದರೆ ಈ ಪ್ರದೇಶಗಳಲ್ಲಿ ಹಾಗೂ ಟೆಬೆಟ್ಟಿನಲ್ಲಿ ಬೆಕ್ಕಿನ ಕುಟುಂಬದ ಹಿಮಕರಡಿಗಳು ಇವೆ.

ಬೆಕ್ಕುಗಳಿಗೆ ಮಾನವನಂತೆ ಎರಡು ರೀತಿಯ ಹಲ್ಲುಗಳಿವೆ. ಮರಿಗಳಿಗೆ ಆರು ತಿಂಗಳಾದಾಗ ಹಾಲು ಹಲ್ಲುಗಳು ಬಿದ್ದು ಎರಡನೆಯ ಜೊತೆ ಅಂದರೆ ಸ್ಥಿರ ಹಲ್ಲುಗಳು ಬರುತ್ತವೆ. ಮೇಲ್ದವಡೆಯವು ಮುಂಭಾಗದ ಮೂರು ಜೊತೆ ಹಲ್ಲುಗಳು ಚಿಕ್ಕದಾಗಿದ್ದು ಸಾಮಾನ್ಯ ಆಕಾರದ್ದಾಗಿವೆ. ಇವು ಬಾಚಿಹಲ್ಲುಗಳು, ಕೆಳದವಡೆಯಲ್ಲಿ ಕೂಡ ಆರು ಬಾಚಿಹಲ್ಲುಗಳಿವೆ. ಇವು ಮೇಲ್ದವಡೆಯವುಗಳಿಗಿಂತ ಚಿಕ್ಕವು.

ಬಾಚಿಹಲ್ಲುಗಳು ಪ್ರಾಣಿಗಳನ್ನು ಇರಿದು ಸಾಯಿಸಲು ಅನುಕೂಲವಾಗಿವೆ. ಮುಂದಿನ ಒಂದು ಜೊತೆ ಹಲ್ಲುಗಳು ಬಲಿಷ್ಠ ಮತ್ತು ದಪ್ಪವಾಗಿ ಮುಂಭಾಗದಲ್ಲಿ ಬಾಗಿಕೊಂಡಿದ್ದು ತುದಿಯಲ್ಲಿ ಚೂಪಾಗಿರುತ್ತದೆ. ಇವುಗಳಿಗೆ ಕೋರೆಹಲ್ಲು ಎಂದು ಹೆಸರು. ಇವು ಮಾಂಸವನ್ನು ಅಗಿದು ಕತ್ತರಿಸಲು ಸಹಾಯಕವಾಗಿವೆ.

ದವಡೆಯ ಹಾಗೂ ಮುಂದವಡೆಯ ಹಲ್ಲುಗಳು ಮಾಂಸವನ್ನು ಅಗಿಯಲು ಸಹಾಯಕವಲ್ಲವಾದರೂ ಮೇಲಿನದವಡೆಯ ಕೊನೆಯ ಹಲ್ಲು ಮತ್ತು ಕೆಳಗಿನ ದವಡೆಯ ಮೊದಲನೆಯ ಹಲ್ಲು ವಿಶೇಷವಾಗಿ ಮಾರ್ಪಾಡಾಗಿದ್ದು ಮಾಂಸ ಕತ್ತರಿಸಲು ಸಹಾಯಕ ವಾಗುತ್ತವೆ. ಇವುಗಳಿಗೆ ಕ್ಯಾರ್ನೆಸಿಯಲ್ ಹಲ್ಲು ಎಂದು ಹೆಸರು. ಮೇಲ್ಭಾಗದ ಕ್ಯಾರ್ನೆಸಿಯಲ್ ಹಲ್ಲಿನ ಹೊರಭಾಗದ ಏಣಿನಿಂದ ಇವುಗಳ ಬೆಳವಣಿಗೆಯಾಗಿದೆ. ಪ್ಯಾರಾಕೋನ್ ಎಂಬ ಏಣು ಮತ್ತು ಪ್ರೋಟೋಕೋನುಗಳು ಒಂದೇ ಅಲಗಿನಂತೆ ಇರುತ್ತವೆ. * ಪ್ರೋಟೊಕೋನ್ ಮಾತ್ರ ಹಲ್ಲಿನ ಮುಂಭಾಗದಲ್ಲಿ ಒಳಕ್ಕೆ ಬಾಗಿರುವ ಏಣಿನಂತೆ ಇರುವುದು. ಇದು ಇನ್ನೊಂದು ಅಲಗಿನಂತೆ ಇದೆ. ಕೆಳದವಡೆಯಲ್ಲಿ ಪ್ಯಾರಾಕೋನ್ ಮತ್ತು ಪ್ರೋಟೋಕೋನ್ ಉಂಟುಮಾಡಿರುವ ಅಲಗಿನ ಮೇಲೆ ಮೇಲಿನದು ತಡೆಯುತ್ತದೆ. ಇದರಿಂದ ಮಾಂಸಭಕ್ಷಣೆ ಸುಸೂತ್ರವಾಗುತ್ತದೆ.

ಮುಂದಗಡೆಯ ಹಾಗೂ ಇತರ ದವಡೆಯ ಹಲ್ಲುಗಳು ಸಾಮಾನ್ಯವಾಗಿ ಕ್ಷೀಣವಾಗಿವೆ. ಮುಂದವಡೆ ಹಲ್ಲುಗಳು ಅಸ್ತಿತ್ವದಲ್ಲಿದೆ. ದವಡೆ ಹಲ್ಲುಗಳಂತೂ ಬಲುಭಾಗ ನಶಿಸಿಯೇ ಹೋಗಿವೆ. ಬೆಕ್ಕಿನ ದಂತ ಸೂತ್ರ ಹೀಗಿದೆ :- 3 1 3 1 / 3 1 3 1

ಬೆಕ್ಕುಗಳ ದವಡೆಗಳು ಬಲಿಷ್ಠವಾಗಿವೆ. ಕೆಳದವಡೆಯಲ್ಲಿ ಒಂದೇ ಮೂಳೆ ಇದ್ದು ಮೂರು ಮಾಂಸ ಖಂಡಗಳು ಮತ್ತು ಅಸ್ಥಿಬಂಧಗಳು ಅದನ್ನು ಬಂಧಿಸಿವೆ.

ಮೇಲು ಮತ್ತು ಕೆಳದವಡೆಗಳು ಒಂದಕ್ಕೊಂದು ಕೀಲುಗಳಿಂದ ಸೇರಿಕೊಂಡು ಬಿಗಿಯಾಗಿ ಅಡ್ಡ ಹರಡಿದ ಚಿಲಕದಂತಿವೆ. ಇದರಿಂದ ಉಳಿದ ಸ್ಥನಿಗಳಲ್ಲಿ ಕಂಡುಬರುವಂತೆ ಬೆಕ್ಕುಗಳಲ್ಲಿ ದವಡೆಗಳ ಸುತ್ತು ಚಲನೆ ಕಂಡು ಬರುವುದಿಲ್ಲ. ದವಡೆಗಳಿಗೆ ಯುಕ್ತ ಚಲನೆ ಇಲ್ಲದಿರುವುದರಿಂದ ಟೆರಿಗಾಯಿಡ್ ಸ್ನಾಯುಗಳು ಮತ್ತು ಅವುಗಳ ಕುಳಿ ಕ್ಷೀಣವಾಗಿವೆ.

ಹಿಂಭಾಗದ ಅಸ್ಥಿಪಂಜರ ಬೆಕ್ಕಿನ ನೆಗೆಯುವ ಚಲನೆಗೆ ಅನುಗುಣವಾಗಿ ಉಳಿದ ಸ್ತನಿಗಳಿಗೆ ಹೊರತಾದ ಕೆಲವು ವಿಶೇಷತೆಗಳನ್ನು ಹೊಂದಿದೆ. ಕಶೇರು ಸ್ತಂಭದಲ್ಲಿ ಕಶೇರುಮಣಿಗಳು ಈ ಚಲನೆಗೆ ಅವಶ್ಯವಿರುವಂತೆ ಹೊಂದಿಕೊಂಡಿರುತ್ತದೆ. ಹೊರಭಾಗದ ನ್ಯೂರಲ್ ಮುಳ್ಳು ಎತ್ತರದಲ್ಲಿದೆ. ಬೆಕ್ಕು ನೆಗೆಯುವಾಗ ಸ್ಯಾಕ್ರೊಸ್ಟೈನಾಲಿಸ್ ಎಂಬ ಸ್ನಾಯುಗಳ ಒತ್ತಡ ಗ್ರಹಿಸುವಂತೆ ಕಶೇರು ಸ್ತಂಭವಿದೆ. ಲಂಬಾರ್ ಭಾಗದಲ್ಲಿ ಪಾಶ್ರ್ವ ಪ್ರವರ್ಧಗಳು ಅಗಲವಾಗಿವೆ.

ಕುತ್ತಿಗೆಯಲ್ಲಿಯೂ ಇವು ಚಲಿಸುವ ಸ್ನಾಯುಗಳಿಗಾಗಿ ಅಗಲವಾಗಿದೆ. ಕ್ಲಾವಿಕಲ್ ಕ್ಷೀಣವಾಗಿದೆ. ಕಾಡುಬೆಕ್ಕುಗಳಲ್ಲಿ ಬಾಲ ಬಲವಾಗಿ ಬೆಳೆದಿದೆ. ಇದಕ್ಕೆ ಹೋಲಿಸುವಾಗ ಸಾಕು ಬೆಕ್ಕಿನ ಬಾಲ ತೀರ ಕ್ಷೀಣವೆನಿಸುತ್ತದೆ. ಬೆಕ್ಕುಗಳಲ್ಲಿ ಅನ್ನನಾಳ ಮೊಟಕಾಗಿದೆ. ಜಠರದ ರಚನೆ ಜಟಿಲವಾಗಿಲ್ಲ. ಹಾಗೆಯೇ ಸೀಕಮ್ ಕೂಡ ಚಿಕ್ಕದಾಗಿಯೇ ಇದೆ.

ಉಳಿದ ಅಂಗಗಳು ಸಾಮಾನ್ಯ ರಚನೆಯಲ್ಲಿ ಸ್ತನಿಗಳ ಇತರ ಗುಂಪನ್ನು ಹೋಲುತ್ತವಾದರೂ ಕೆಲವು ಸಣ್ಣ ಪುಟ್ಟ ಮಾರ್ಪಾಡುಗಳನ್ನು ಹೊಂದಿವೆ. ಬೆಕ್ಕಿನ ಶ್ರವಣಾಂಗಗಳು ಉತ್ತಮವಾಗಿದ್ದು ಶ್ರವಣ ಶಕ್ತಿ ಚುರುಕಾಗಿದೆ. ಮಾನವನದಕ್ಕಿಂತ ಸುಮಾರು 30 ಪಾಲು ಉತ್ತಮ. ಮಾನವ ಕರ್ಣ ಸುಮಾರು 2000 ಚಕ್ರಗಳವರೆಗೆ ಗುರುತಿಸಬಲ್ಲದಾದರೆ ಬೆಕ್ಕು 60,000 ಚಕ್ರಗಳವರೆಗೆ ಗುರುತಿಸಬಲ್ಲದು.

hope it helps plz mark me as brainliest...............

Similar questions