India Languages, asked by yashwanthyash29, 8 months ago

advantage and disadvantage of environment in kannada​

Answers

Answered by suryansh252005
5

Answer:

ತಂತ್ರಜ್ಞಾನದ ಹಾದಿಯಲ್ಲಿ ಸಾಗುತ್ತ ನಮ್ಮ ಸುತ್ತಲಿನ ಚಿಕ್ಕ ಚಿಕ್ಕ ಸಂಗತಿಗಳನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದೇವೆ. ಮಾವಿನ ಮರ ದಾಸವಾಳದ ಗಿಡ ಗೊತ್ತಿದ್ದರೆ ಸಾಕೆ? ನಿಮ್ಮ ಸ್ನೇಹಿತರ ಬಳಿ ಏನನ್ನು ಸುಮ್ಮನೆ ಒಂದು 20 ಮರಗಳ ಹೆಸರು ಹೇಳಲು ಸವಾಲು ಹಾಕಿ, ಆಗ ಗೊತ್ತಾಗುತ್ತದೆ ನಮ್ಮ ತಿಳಿವಳಿಕೆ ಸಾಮರ್ಥ್ಯ. ಪರಿಸರದ ಬಗ್ಗೆಯೇ ಗೊತ್ತಿಲ್ಲವಾದರೆ ಇನ್ನು ಜಾಗೃತಿ ಮೂಡಿಸುವ ಕೆಲಸ? ನಮ್ಮ ಜೀವನ ಯಾಂತ್ರಿಕತೆ ಒಂದರಲ್ಲೇ ಹೂತಿಕೊಂಡಿದೆ, ಹೂತಿಕೊಳ್ಳುತ್ತಿದೆ. ನಮ್ಮ ಪರಿಸರ ಅಂದುಕೊಳ್ಳುವದನ್ನು ಬಿಟ್ಟು ಯಾರದ್ದೋ ಪರಿಸರ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ.

ನಮ್ಮನ್ನು ನಾವು ಇನ್ನಷ್ಟು ಅರ್ಥಮಾಡಿಕೊಂಡು ಜೀವನದಲ್ಲಿ ಸಾರ್ಥಕತೆ ತೃಪ್ತಿ ಕಾಣಲಾದರೂ ಪರಿಸರದ ಬಗ್ಗೆ ತಿಳಿದುಕೊಳ್ಳಲೇಬೇಕು. ಗೀಜಗನ ಹಕ್ಕಿ ಗೂಡು ಕಟ್ಟುವಾಗ ತನ್ನ ಕಲಾಸಿರಿಯನ್ನು ಮೆರೆಯುತ್ತದೆ. ಆದರೆ ಇದನ್ನು ಆಸ್ವಾದಿಸಲು ನಮಗೆ ಸಮಯವೆಲ್ಲಿದೆ ಹೇಳಿ? ಸಮಯ ಸಿಕ್ಕರೆ ಸಾಕಯ ಮಾಲ್, ಚಿತ್ರ ಮಂದಿರ ಮತ್ತಿನ್ಯಾವುದೋ ಜಾಗ ಅಂಥ ಅಲೆಯುತ್ತೇವೆ, ಪ್ರವಾಸಿ ತಾಣಕ್ಕೆ ಭೇಟಿ ನೀಡಿ ಅಲ್ಲಿನ ಕಸ ಕಂಡು ನಾವು ತೆಗೆದುಕೊಂಡು ಹೋಗಿದ್ದ ಎರಡು ಖಾಲಿ ನೀರಿನ ಬಾಟಲಿ ಒಗೆದು 'ಎಷ್ಟು ಗಬ್ಬಾಗಿದೆ' ಎನ್ನುತ್ತಾ ಸರ್ಕಾರವನ್ನು ದೂರಲು ಮರೆಯುವುದಿಲ್ಲ.

ನಮ್ಮ ತಪ್ಪುಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು ಸಾಕಾಗಿ ಹೋದ ಭೂತಾಯಿಯೂ ಸಣ್ಣ ಅಸಮಾಧಾನ ತೋರಿಸಿದ್ದಾಳೆ. ನೇಪಾಳ ಭೂಕಂಪ ಭೂತಾಯಿಯ ಆರ್ತನಾದದ ಆರಂಭ. ವಾತಾವರಣದಲ್ಲಿ ಹೆಚ್ಚುತ್ತಿರುವ ಬಿಸಿ, ನಿರಂತರ ವಾಯು ಮಾಲಿನ್ಯ, ಜಲ ಮಾಲಿನ್ಯ ಎಲ್ಲಕ್ಕೂ ಬೆಲೆ ತೆರುವ ಕಾಲ ಬಹಳ ದೂರವಿಲ್ಲ. ಇನ್ನು ಕಾಲ ಮುಂಚಿಲ್ಲ. ಇವತ್ತಿನಿಂದಲೇ ಪರಿಸರದ ಆಗು ಹೊಗುಗಳನ್ನು ಅರಿಯಲು ಆರಂಭಿಸೋಣ. ಮುಂದಿನ ಪೀಳಿಗೆಗೆ ತಿಳಿವಳಿಕೆ ನೀಡುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳೋಣ.

Similar questions