Hindi, asked by rituchetry53546, 3 months ago

ಮಹಾ ಪ್ರಾಣ aksharagalu

Answers

Answered by anjana23091984
0

Answer:

ಒಟ್ಟು ೪೯ ಅಕ್ಷರಗಳಿವೆ. ಅವುಗಳನ್ನು ವರ್ಣ ಮಾಲೆ ಎಂದು ಕರೆಯುತ್ತಾರೆ. ವರ್ಣಗಳ ಈ ಮಾಲೆಯನ್ನು ಕನ್ನಡ ಮಾತೆಯಾದ ತಾಯಿ ಭುವನೇಶ್ವರಿಗೆ ಶ್ರದ್ಧಾ ಭಕ್ತಿಗಳಿಂದ ಅರ್ಪಿಸೋಣ !!!

ವರ್ಣಮಾಲೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವು ಕ್ರಮವಾಗಿ ಸ್ವರಗಳು, ವ್ಯಂಜನಗಳು ಮತ್ತ್ತು ಯೋಗವಾಹಗಳು. ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ಸ್ವರಗಳೆಂದು ಕರೆಯುತ್ತೇವೆ

ಸ್ವಯಂ ರಂಜತಿ ಇತಿ ಸ್ವರಃ ಚ್ರ

ಇವು ಒಟ್ಟು ಹದಿಮೂರು. ಅವುಗಳು ,ಅ, ಆ , ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ (ೠ ಎಂಬ ಅಕ್ಷರದಿಂದ ಪದಗಳು ದೊರಕದೆ ಇರುವುದರಿಂದ ಈ ಅಕ್ಷರವನ್ನು ಕೈಬಿಡಲಾಗಿದೆ)

ಇವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು .

ಹ್ರಸ್ವಾಕ್ಷರಗಳು - ಅ, ಇ, ಉ, ಋ, ಎ, ಒ (ಒಟ್ಟು - ೬)

ದೀರ್ಘಾಕ್ಷರಗಳು - ಆ, ಈ, ಊ, ಏ, ಐ, ಓ, ಔ (ಒಟ್ಟು - ೭)

ವ್ಯಂಜನಗಳು ಅರ್ಧ ಮಾತ್ರಾ ಕಾಲ ಉಚ್ಚಾರ ಉಳ್ಳ ಅಕ್ಷರಗಳಾದ್ದರಿಂದ ಇವುಗಳನ್ನು ಸ್ವತಂತ್ರವಾಗಿ ಉಚ್ಚರಿಸಲು ಬಹಳ ಕಷ್ಟ . ಇವುಗಳ ಸುಲಲಿತವಾದ ಸುಲಭ ಉಚ್ಚಾರಣೆಗಾಗಿ ಸ್ವರಗಳ ಸಹಾಯಬೇಕು. ಹೇಗೆಂದರೆ

ಕ್ + ಅ = ಕ

ಕ್ + ಆ = ಕಾ

ಕ್ + ಇ = ಕಿ

ಕ್ + ಈ = ಕೀ

ಕ್ + ಉ = ಕು

ಕ್ + ಊ = ಕೂ

ಕ್ + ಋ = ಕೃ

ಕ್ + ಎ = ಕೆ

ಕ್ + ಏ = ಕೇ

ಕ್ + ಏ = ಕೈ

ಕ್ + ಒ = ಕೊ

ಕ್ + ಓ = ಕೋ

ಕ್ + ಔ = ಕೌ

ಕ್ + ಅ + ಂ = ಕಂ ಇವು ಯೋಗವಾಹಗಳ ಬಳಕೆ. ( ಂ ಎಂಬ ಚಿಹ್ನೆಯನ್ನು ಅನುಸ್ವಾರ ಎಂದು ಕರೆಯುತ್ತಾರೆ. ಃ ಎಂಬ ಚಿಹ್ನೆ ಯನ್ನು ವಿಸರ್ಗ ಎಂದು ಕರೆಯುತ್ತಾರೆ)

ಕ್ + ಆ + ಃ = ಕಃ - ಇವುಗಳನ್ನು ಗುಣಿತಾಕ್ಷ ರಗಳೆಂದು ಕರೆಯುತ್ತಾರೆ. (ಕಾ ಗುಣಿತ - ಎಂದು ಕೆಲವರು ಕರೆದರೂ, ಕ ಎಂಬ ವ್ಯಂಜನಕ್ಕೆ ಸ್ವರಗಳನ್ನು ಸೇರಿಸಿದಾಗ, ಅದು ಕಾ ಗುಣಿತ ಎನ್ನಬಹುದಾಗಿದೆ . ಗ ಎಂಬ ವ್ಯಂಜನಕ್ಕೆ ಸ್ವರಗಳನ್ನು ಸೇರಿಸಿದಾಗ ಅದು ಗಾ ಗುಣಿತ ಎನ್ನುವುದು ಸೂಕ್ತವೇ ? )

ವ್ಯಂಜನಗಳು ಒಟ್ಟು ೩೪. ಇವುಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ .

ಅವುಗಳೆಂದರೆ

ವರ್ಗೀಯ ವ್ಯಂಜನಗಳು ಒಟ್ಟು ೨೫.

ಅವರ್ಗೀಯ ವ್ಯಂಜನಗಳು ಒಟ್ಟು ೯.

ವರ್ಗೀಯ ವ್ಯಂಜನಗಳು ಈ ರೀತಿ ಇವೆ :-

ಅಲ್ಪ ಪ್ರಾಣ

Similar questions