Sociology, asked by rathodnisarga1, 21 days ago

ಕೋರೋನಾ ದಿಂದ ಕಲಿತ ಪಾಠಗಳು answer in kannada plz​

Answers

Answered by mrgabru94
2

Explanation:

ಭೂಮಿಗೆ ಮನುಷ್ಯರಾದ ನಾವೇ ವೈರಸ್‌ ಆಗಿದ್ದು, ಕೊರೊನಾ ಅದನ್ನು ಪರಿಹರಿಸುವ ಮದ್ದು ಯಾಕಾಗಿರಬಾರದು? ಇದು ಕೊರೊನಾ ವೈರಸ್‌ ಬಿಕ್ಕಟ್ಟು ಶುರುವಾದಾಗಿನಿಂದ ಇಲ್ಲಿಯವರೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದುಬಂದಿರುವ ಕೋಟ್ಯಂತರ ಸಂದೇಶಗಳಲ್ಲಿ ಅತ್ಯಂತ ಘನವಾದುದು ಮತ್ತು ಆಳವಾದುದು! ಏಕೆಂದರೆ, ಈ ಸಂದೇಶ ಮೊತ್ತ ಮೊದಲ ಬಾರಿಗೆ ಬಿತ್ತರಗೊಂಡ ಒಂದೇ ವಾರದೊಳಗೆ, ಇದಕ್ಕೆ ಪೂರಕವಾದ ವರದಿಯೊಂದು ಜನರನ್ನು ನಿಬ್ಬೆರಗಾಗಿಸಿದೆ. ವಿಶ್ವಾದ್ಯಂತ ಮನುಷ್ಯ ಸಂಚಾರ ಕಡಿಮೆಯಾಗಿರುವುದರಿಂದ, ಪ್ರಾಣಿಗಳು ಮತ್ತು ಪರಿಸರ ಮನುಷ್ಯ ತಮ್ಮಿಂದ ದುರಾಕ್ರಮಣ ಮಾಡಿ ಪಡೆದಿದ್ದ ಜಾಗಗಳಿಗೆ ಹಿಂದಿರುಗುತ್ತಿವೆ! ಸದಾ ದೊಡ್ಡ ಕ್ರ್ಯೂಸ್‌ಗಳಿಂದ ಆವೃತವಾಗಿರುತ್ತಿದ್ದ ಇಟಲಿಯ ತೀರಗಳಲ್ಲಿ ಡಾಲ್ಫಿನ್‌ಗಳು ಪುಟಿದೇಳುತ್ತಿರುವುದು, ಜಪಾನ್‌ ಮತ್ತು ಥಾಯ್ಲೆಂಡ್‌ಗಳಲ್ಲಿ ಮಂಗಗಳು ರಸ್ತೆಗಿಳಿದಿರುವುದು, ಇಸ್ರೇಲಿನ ರಾಜಧಾನಿಯ ವಿಮಾನ ನಿಲ್ದಾಣಕ್ಕೆ ಹೆಬ್ಬಾತುಗಳು ಬಂದಿಳಿದಿರುವುದು, ಸಿಂಗಾಪುರದ ಪ್ರವಾಸಿ ತಾಣಗಳಲ್ಲಿ ಒಟ್ಟರ್‌ಗಳು ಓಡಾಡಿಕೊಳ್ಳುತ್ತಿರುವುದು, ಜನಸಂದಣಿ ಕಡಿಮೆಯಾದ ಒಂದೇ ವಾರದಲ್ಲಿ ಈ ಬೆಳವಣಿಗೆಗಳಾಗಿರುವುದು, ವಿಶ್ವವನ್ನು ನಿಬ್ಬೆರಗಾಗಿಸಿದೆ

Similar questions