India Languages, asked by UNKNOWN3615, 3 months ago

*ಒಂದು ಸಣ್ಣ ಕಥೆ...✍️*

ಇಬ್ಬರು ವಯಸ್ಕರು ಹೊಲದ ಹತ್ತಿರ ನಿಂತು ಮಾತನಾಡುತ್ತಾ ಇರುತ್ತಾರೆ.

ಪಾಪಣ್ಣ: ನನಗೆ ಒಬ್ಬಳು ಮೊಮ್ಮಗಳಿದ್ದಾಳೆ B.E ಓದಿದ್ದಾಳೆ, ನೌಕರಿ ಮಾಡ್ತಾ ಇದ್ದಾಳೆ ನೋಡಲು ಸುಂದರವಾಗಿದ್ದಾಳೆ, ಮೈಕಟ್ಟು ಸಹ ಚೆನ್ನಾಗಿದೆ ಯಾವುದಾದರೂ ಹುಡುಗ ಇದ್ದರೆ ಹೇಳಿ..

ಹಾಲಣ್ಣ : ನಿಮ್ಮ ಮೊಮ್ಮಗಳಿಗೆ ಯಾವ ರೀತಿಯ ಪರಿವಾರದ ಹುಡುಗ ಬೇಕು ?

ಪಾಪಣ್ಣ : ದೊಡ್ಡ ಪರಿವಾರವೇನು ಬೇಡಬಿಡಿ. ಹುಡುಗ M.E /M.Tech ಓದಿರಬೇಕು, ಸ್ವಂತ ಮನೆ ಇರ್ಬೇಕು, ಕಾರು ಮತ್ತೆ ತೋಟ ಹಾಗೂ ಒಳ್ಳೆ ನೌಕರಿ ಇರಬೇಕು. ಜೊತೆಗೆ ಒಳ್ಳೆ ಸಂಬಳ 1ಲಕ್ಷ ತನಕ ಇದ್ದರೆ ಸಾಕು.

ಹಾಲಣ್ಣ : ಮತ್ತೆನಾದ್ರೂ...???

ಪಾಪಣ್ಣ : ಹಾ.... ಮತ್ತೊಂದು ವಿಷಯ. ಹುಡುಗ ಒಬ್ಬನೇ ಇರಬೇಕು. ಅಪ್ಪಾ, ಅಮ್ಮ, ಅಣ್ಣ, ತಮ್ಮ ತಂಗಿ ಇರಬಾರದು. ಅದು ಯಾಕೆಂದರೆ ಕುಟುಂಬದಲ್ಲಿ ಸುಮ್ನೆ ಜಗಳ ಆಗುತ್ತೆ ನೋಡಿ ಅದಕ್ಕೆ.

ಹಾಲಣ್ಣನ ಕಣ್ಣಲ್ಲಿ ನೀರು ಬಂತು. ಕಣ್ಣನ್ನು ಒರೆಸುತ್ತಾ ಹೇಳಿದ : ಹಾ ... ನನ್ನ ಒಬ್ಬ ಗೆಳೆಯನ ಮಗ ಇದ್ದಾನೆ. ಅವನು ತನ್ನ ಕುಟುಂಬವನ್ನು ಒಂದು ಆಕ್ಕ್ಸಿಡೆಂಟ್ ನಲ್ಲಿ ಕಳೆದು ಕೊಂಡಿದ್ದಾನೆ. ಒಳ್ಳೆ ಓದಿದ್ದಾನೆ. ಕಾರು, ಬಂಗಲೆ, ಮನೆ, ಆಳು, ಎಲ್ಲವೂ ಇದೆ. ತಿಂಗಳಿಗೆ ರೂ 1.5 ಲಕ್ಷ ದುಡಿಯುತ್ತಾನೆ. ನಿಮ್ಮ ಹುಡುಗಿಯನ್ನು ಸುಖವಾಗಿ ನೋಡಿಕೊಳ್ಳುತ್ತಾನೆ.

ಪಾಪಣ್ಣ : ಸರಿ ಹಾಗಾದ್ರೆ ಸಂಬಂಧ ಜೋಡಿಸೋಣ.

ಹಾಲಣ್ಣ : ಹಾ. ಆದ್ರೆ ಹುಡುಗನ ಒಂದು ಷರತ್ತು ಇದೆ. ಅದೇನಪ್ಪಾ ಅಂದ್ರೆ ಹುಡುಗಿಗೆ ಯಾವುದೇ ಸಂಬಂಧಿಕರು ಇರಬಾರದು. ಕುಟುಂಬದವರು ಸಹ ಇರಬಾರದು. ಇಷ್ಟು ಹೇಳ್ತಾ ಹೇಳ್ತಾ ಇವರ ಕಣ್ಣು ತುಂಬಿ ನೀರು ಬರ್ತಾ ಇತ್ತು. ಮತ್ತೆ ಹೇಳಿದ್ರು ನಿಮ್ಮ ಪರಿವಾರದವರು ಆತ್ಮಹತ್ಯೆ ಮಾಡಿಕೊಂಡರೆ ಸಂಬಂದ ಕೂಡಿ ಬರಬಹುದು ಎಂದರು.

ಪಾಪಣ್ಣ : ಇದೇನು ಹುಚ್ಚರ ರೀತಿ ಮಾತನಾಡುತ್ತೀರಾ ? ನಮ್ಮ ಕುಟುಂಬದವರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು? ನಾಳೆ ಏನಾದರೂ ಹುಡುಗಿಗೆ ಹೆಚ್ಚು ಕಡಿಮೆ ಆಗಿ ಕಷ್ಟದಲ್ಲಿ ಸಿಲುಕಿದರೆ ಯಾರು ಇರುತ್ತಾರೆ ಅವಳ ಹತ್ತಿರ ?
ಹಾಲಣ್ಣ : ವ್ಹಾ. ರೇ ವ್ಹಾ.... ಗೆಳೆಯ ತನ್ನ ಕುಟುಂಬ ಮಾತ್ರ ಪರಿವಾರ, ಪರರ ಕುಟುಂಬ ಅಂದ್ರೆ ಏನು ಅಲ್ಲ ಅಲ್ವಾ ? ಓ.... ಗೆಳೆಯ ಮಕ್ಕಳಿಗೆ ಪರಿವಾರದ ಮಹತ್ವವನ್ನು ಹೇಳಿಕೊಡು, ಮನೆಯ ದೊಡ್ಡವರು, ಚಿಕ್ಕವರು ಎಲ್ಲರೂ ನಮಗೆ ಬೇಕಾದವರು, ಇಲ್ಲಾ ಅಂದರೆ ಮನುಷ್ಯ ಸುಖ -ದುಃಖದ ಮಹತ್ವವನ್ನೇ ಅರಿಯುವುದಿಲ್ಲ, ಜೀವನಪೂರ್ತಿ ಅರ್ಥ ಇಲ್ಲದ ಬದುಕು ಆಗಿ ಬಿಡುತ್ತೆ.
ಪಾಪಣ್ಣ ಈ ಮಾತುಗಳನ್ನು ಕೇಳಿ ನಾಚಿಕೆಯಾಗಿ ಬಾಯಿಂದ ಒಂದು ಮಾತು ಸಹ ಬರದೆ ಮೂಕನಾಗಿ ನಿಂತು ಬಿಟ್ಟ.

*ಪ್ರಿಯ ಗೆಳೆಯರೇ ಕುಟುಂಬ ಇದ್ದರೆ ಮಾತ್ರ ಸಂತಸದ ಬೆಲೆಯನ್ನು ಸವಿಯಬಹುದು, ಇಲ್ಲ ಅಂದರೆ ಯಾರೊಟ್ಟಿಗೆ ತಮ್ಮ ಸುಖ- ದುಃಖವನ್ನು ಹಂಚಿಕೊಳ್ಳುವಿರಿ ? ಆದ್ದರಿಂದ ಸದಾ ನಗು- ನಗುತ್ತಾ ಪರಿವಾರದವರೊಂದಿಗೆ ಜೀವನ ನಡೆಸಿರಿ, ಪರಿವಾರ ಅಂದಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ವೈರತ್ವವನ್ನು ಬೆಳೆಸಿಕೊಳ್ಳಬೇಡಿ.*

*​

Answers

Answered by loknadamjinaga1044
0

Answer:

*

Similar questions