India Languages, asked by Vish8457, 11 months ago

Balya vivaha tadegattuva vidhana prabhanda in kannada

Answers

Answered by mskthebornlgnd7
0

Answer:

please follow and mark as BRAINLIEST

Explanation:

ಬಾಲ್ಯ ವಿವಾಹ ನಿಷೇಧ ಕಾಯ್ದೆ -2006 (ಕೇಂದ್ರ ಕಾಯ್ದೆ – 2006) ಸಂಪಾದಿಸಿ

ಬಾಲ್ಯವಿವಾಹ ನಿಷೇಧ ಕಾಯ್ದೆ-2006ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 1154/2006ರಲ್ಲಿ ನೀಡಿದ ನಿರ್ದೇಶನದಂತೆ ಕ್ರಿಯಾ ಯೋಜನೆಯನ್ನು ತಯಾರಿಸಲು ಸರ್ಕಾರವು ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಶಿವರಾಜ್.ವಿ.ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿಯನ್ನು ರಚಿಸಿದ್ದು, ಸದರಿ ಕೋರ್ ಕಮಿಟಿಯು ದಿನಾಂಕ: 30.06.2011ರಂದು ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತದೆ.

ವರದಿಯಲ್ಲಿ ಮಾಡಲಾಗಿರುವ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರದ ಆದೇಶ ಸಂಖ್ಯೆ: ಮಮಇ 501 ಎಸ್.ಜೆ.ಡಿ 2011, ದಿನಾಂಕ: 16.11.2011ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದಲ್ಲಿ 1 ಉಪ ನಿರ್ದೇಶಕರು, 1 ಸಹಾಯಕ ನಿರ್ದೇಶಕರು, 02 ಪ್ರಥಮ ದರ್ಜೆ ಸಹಾಯಕರು, 02 ಗಣಕ ಯಂತ್ರ ಸಹಾಯಕರರು ಮತ್ತು 1 ಸೇವಕರನ್ನೊಳಗೊಂಡಂತೆ ಉಸ್ತುವಾರಿ ಕೋಶವನ್ನು ಸ್ಥಾಪಿಸಲಾಗಿದೆ.

1955ರ ಹಿಂದೂ ವಿವಾಹ ಕಾಯ್ದೆೆ ಪ್ರಕಾರ ಮದುವೆಗೆ ಹೆಣ್ಣಿಗೆ 18 ವರ್ಷ ಗಂಡಿಗೆ 21 ವರ್ಷ ವಯಸ್ಸಾಗಿರಬೇಕು. ಈ ಕಾನೂನು ಉಲ್ಲಂಘನೆ ಮಾಡಿದಲ್ಲಿ ಅಂತವರ ವಿರುದ್ಧ ಸೆಕ್ಷನ್ 11 ಹಾಗೂ 12 ಅಡಿ ಕೇಸ್ ದಾಖಲಿಸಬಹುದು. ಹಾಗು ಸೆಕ್ಷನ್ 13ರ ಅಡಿ ವಿಚ್ಛೇದನ ಪಡೆಯಲು ಅವಕಾಶ ಇದೆ ಎಂದು ಹೇಳಿದೆ.

2012-13ನೇ ಸಾಲಿನಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ. ಎಲ್ಲಾ ಮಕ್ಕಳು ಆರೈಕೆ ಹಾಗೂ ರಕ್ಷಣೆಯ ಮೂಲಕ ಅಭಿವೃದ್ಧಿ ಯೊಂದಲು ಹಾಗೂ ಪರಿಪೂರ್ಣ ವ್ಯಕ್ತಿಯಾಗಿ ಬೆಳೆಯುವ ಹಕ್ಕನ್ನು ಹೊಂದಿರುತ್ತಾರೆ. ಬಾಲ್ಯ ವಿವಾಹವು ಈ ಎಲ್ಲಾ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಬಾಲ್ಯ ವಿವಾಹದಿಂದ ಉಂಟಾಗುವ ಅಪ್ರಾಪ್ತ ವಯಸ್ಸಿನ ತಾಯ್ತನವು ತಾಯಿ ಹಾಗೂ ಮಗುವನ್ನು ಅಪಾಯದ ಅಂಚಿನಲ್ಲಿ ತಳ್ಳುವಂತಾಗುತ್ತದೆ. ಇದರಿಂದಾಗಿ ಶಿಶು ಮರಣ ಹಾಗೂ ತಾಯಂದಿರ ಮರಣ ಹೆಚ್ಚಾಗಲು ಕಾರಣವಾಗುತ್ತದೆ.

ಬಾಲ್ಯ ವಿವಾಹದ ನಿಷೇಧದ ಬಗ್ಗೆ ಅರಿವು ಸಂಪಾದಿಸಿ

ಬಾಲ್ಯ ವಿವಾಹದ ನಿಷೇಧದ ಬಗ್ಗೆ ಅರಿವು ಮೂಡಿಸಲು "ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ" ಎಂಬ ರೇಡಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತಿವಾರ ಕೇಳಲಾಗುವ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ ಶೋತೃಗಳಿಗೆ ರೂ.500/-ರ ನಗದು ಬಹುಮಾನ ನೀಡಲಾಗುತ್ತಿದೆ. ರಾಜ್ಯದಲ್ಲಿ 300 ಸ್ಥಳಗಳಲ್ಲಿ ಹೋರ್ಡಿಂಗ್ ಅಳವಡಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ 10 ಜಿಲ್ಲೆಗಳಲ್ಲಿ 10 ಕಡೆ ಬಾಲ್ಯ ವಿವಾಹ ನಿಷೇಧದ ಬಗ್ಗೆ ಗೋಡೆ ಬರಹ ಬರೆಸಲಾಗಿದೆ.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕರಪತ್ರಗಳು, ಬ್ರೋಷರ್, ಎಫ್.ಎ.ಕ್ಯೂ.ಗಳು, ಸ್ಟಿಕ್ಕರ್ ಗಳನ್ನು ಮತ್ತು 5 ಬಗೆಯ ಪೋಸ್ಟರ್ ಗಳನ್ನು ಮುದ್ರಿಸಿ ಜಿಲ್ಲೆಗಳಿಗೆ ಮತ್ತು ತಾಲ್ಲೂಕುಗಳಿಗೆ ಹಂಚಲಾಗಿದೆ. ಬಾಲ್ಯ ವಿವಾಹ ನಿಷೇದಾಧಿಕಾರಿಗಳಿಗೆ ತರಬೇತಿ ಮೂಲಕ ಅರಿವು ಮೂಡಿಸಲಾಗಿರುತ್ತದೆ. ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಬೀದಿ ನಾಟಕ. ಕಲಾ ಜಾಥಾಗಳ ಮೂಲ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಲಾಗಿದೆ

Similar questions