India Languages, asked by Sahanakamath1979, 1 year ago

beleyuva siri molakeyalli short notes in kannada

Answers

Answered by DAPPINSHWETA
498

ಒಂದು ಸಸಿಯು ಬೆಳೆಯುವಾಗ ಅದನ್ನು ನೋಡಿದ ತಕ್ಷಣವೇ ಅದು ಮುಂದೆ ಎಂತಹ ಫಲವನ್ನು ಕೊಡುತ್ತದೆ ಎಂದು ಅಂದಾಜಿಸಬಹುದು. ಯಾವುದೇ ಒಂದು ಬೀಜ ಮೊಳಕೆ ಬಿಟ್ಟ ಕೂಡಲೇ ಅದರ ಆರೈಕೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಬೇಕಾದ ಪೋಷಕಾಂಶಗಳನ್ನೂ ನೀಡಬೇಕು. ನೀರು ಗೊಬ್ಬರ ಸರಿಯಾಗಿ ಹಾಕಿ, ಚೆನ್ನಾಗಿ ನೋಡಿಕೊಂಡರೆ ಆ ಮೊಳಕೆಯೊಡೆದ ಬೀಜವು ಸಮೃದ್ದವಾಗಿ ಬೆಳೆದು, ಉತ್ತಮ ಫಲವನ್ನು ಕೊಡುತ್ತದೆ. ಅದೇ ತರಹ ಮಕ್ಕಳಿಗೆ ನಾವು ಬಾಲ್ಯದಿಂದಲೇ ಒಳ್ಳೆಯ ಬುದ್ದಿ, ಸಂಸ್ಕಾರಗಳನ್ನು ನೀಡುತ್ತಾ ಬರಬೇಕು. ಮಕ್ಕಳ ಆಸಕ್ತಿಗಳನ್ನು ಗಮನಿಸಿ ಮನೆಯ ಹಿರಿಯರು ಪ್ರೋತ್ಸಾಹಿಸಬೇಕು. ಬೆಳೆಯುವ ಮಕ್ಕಳನ್ನು ಬಾಲ್ಯದಲ್ಲಿಯೇ ಬೇಕಾದಂತೆ ತಿದ್ದಿಕೊಳ್ಳಬೇಕು. ಮಕ್ಕಳು ಚಿಕ್ಕವರಿರುವಾಗ ನಾವು ಕಲಿಸುವ ಎಲ್ಲ ವಿದ್ಯೆಯನ್ನು ಮಗು ಕಲಿತುಕೊಳ್ಳುತ್ತದೆ. ಅದೇ ಕಾರಣ ಮಕ್ಕಳಿಗೆ ಬಾಲ್ಯದಿಂದಲೇ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿದರೆ ಮುಂದೆ ಮಕ್ಕಳು ಯಶಸ್ಸಿನ ಗುರಿಯನ್ನು ತಲುಪಿ ಒಳ್ಳೆಯ ಸತ್ಪ್ರಜೆಗಳಾಗಿ ಬಾಳಬಹುದು.

Answered by sowmya03bhaskar
48

please mark as brainalist

Attachments:
Similar questions