India Languages, asked by Rizwanamansuri6250, 1 year ago

Black money essay for kannada

Answers

Answered by Anonymous
22

Hey friend Here's your answer
_________________________



Black Money (kannada)

ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶವಾಗಿದ್ದು, ಅಪಾರ . ಸಂಪನ್ಮೂಲಗಳನ್ನು ಹೊಂದಿರುವ ಕೆಲವೇ ದೇಶಗಳಲ್ಲೊಂದಾಗಿದೆ. 120 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶ, ಸ್ವಾತಂತ್ರ ಬಂದು 70 ವರ್ಷಗಳೇ ಕಳೆದರೂ ಇನ್ನೂ ಅನೇಕ ಸಾಮಾಜಿಕ ಪಿಡುಗುಗಳು, ರಾಷ್ಟ್ರ ಅಭಿವೃದ್ದಿ ಮಾರಕ ಶಕ್ತಿಗಳಿಂದಾಗಿ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೇ ಆಗಿದೆ.
ಇಂತಹ ಅನೇಕ ಮಾರಕ ಶಕ್ತಿಗಳಲ್ಲಿ ಕಪ್ಪು ಹಣವೂ ಒಂದು. ಕಪ್ಪುಹಣವು, ದೇಶದ ಅಭಿವೃದ್ದಿಗೆ ಅಡ್ಡಗಾಲಕುತ್ತಿರುವ ಕಪ್ಪು ಚುಕ್ಕೆಯೇ ಆಗಿದೆ. ಸರ್ವೋಚ್ಚ ನ್ಯಾಯಾಲಯವು ಕಪ್ಪು ಹಣವನ್ನು ರಾಷ್ಟ್ರೀಯ ಸಂಪತ್ತಿನ ಲೂಟಿ ಎಂದೇ ಖಾರವಾಗಿ ಹೇಳಿದೆ.

           ಕಪ್ಪುಹಣವೆನ್ನುವುದು ಅಕ್ರಮವಾಗಿ ಸಂಪಾದಿಸಿದ ಸಂಪತ್ತು, ಅನೈತಿಕವಾಗಿ ಗಳಿಸಿದ ಸ್ವತ್ತು, ತೆರಿಗೆ ವಂಚಿಸಿ ಸಂಗ್ರಹಿಸಿಟ್ಟ ಕಾಳಧನವಾಗಿದೆ. ಇದು ಬೇನಾಮಿ ಖಾತೆಗಳಲ್ಲಿ, ಗುಪ್ತ ಸ್ತಳಗಳಲ್ಲಿ ಇಟ್ಟ ಹಣ ಮಾತ್ರವಲ್ಲದೆ, ಷೇರುಗಳು, ವಿವಿಧ ಭದ್ರತೆಗಳು, ರಿಯಲ್ ಎಸ್ಟೇಟ್ -ಮನೆ ಅಂಗಡಿಗಳು, ನಿವೇಶನ-ಕಾರುಗಳು, ಒಡವೆ ಆಭರಣಗಳು ಮತ್ತು ಇತರೆ ದಾಸ್ತಾವೇಜುಗಳ ಸ್ವರೂಪವನ್ನೂ ಸಹ ಹೊಂದಿದೆ. ಇತ್ತೀಚೆಗಿನ ಅಂದಾಜಿನಂತೆ ಭಾರತದಲ್ಲಿ ಸುಮಾರು ೨೦೦ ಮಿಲಿಯನ್ ಕೋಟಿ ರೂ ಕಪ್ಪು ಹಣವಿದೆಯೆಂದೂ, ಹಾಗೂ ಪ್ರತೀ ವರ್ಷ ೨೦೦ ಕೋಟಿ ಕಪ್ಪು ಹಣ ಸೃಷ್ಟಿಯಾಗುತ್ತಿದೆ ಎಂದು ಅಂದಾಜಿಸಲಾಗಿತ್ತು.

        ಆದಾಯ ತೆರಿಗೆ ಮತ್ತು ಮಾರಾಟ ತೆರಿಗೆಗಳನ್ನು ವಂಚಿಸಿ ಸಂಗ್ರಹಿಸಲ್ಪಟ್ಟ ಈ ಕಪ್ಪು ಹಣ ಭಾರತದ ಆರ್ಥಿಕತೆಯ ಮೇಲೆ ಅನೇಕ ಋಣ ಪರಿಣಾಮವನ್ನು ಬೀರುತ್ತಿದೆ. ಕಪ್ಪು ಹಣವನ್ನುದೇಶದ್ರೋಹಿ ಕೆಲಸಗಳಿಗೆ, ದುಷ್ಟ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಇದರಿಂದಾಗಿ  ಭ್ರಷ್ಟಾಚಾರ ಹೆಚ್ಚಿ ಸಾಮಾಜಿಕ ಮತ್ತು ರಾಜಕೀಯ ಸ್ವಾಸ್ಥ್ಯ ಹಾಳಾಗುತ್ತಿದೆ.
ಈ ಕಪ್ಪು ಹಣವನ್ನು ನಿಯಂತ್ರಿಸಲು ಸರ್ಕಾರ ಅನೇಕ ಕಾರ್ಯಗಳನ್ನು ಕೈಗೊಂಡರೂ ಕಪ್ಪು ಹಣವನ್ನು ತಡೆಗಟ್ಟುವುದು ಕಷ್ಟಕರವಾಗಿದೆ. ಇತ್ತೀಚೆಗೆ ಸರಕಾರವು ಕಪ್ಪು ಹಣವನ್ನು ಮಟ್ಟ ಹಾಕಲು ಸರಳೀಕೃತ ಆದಾಯ ತೆರಿಗೆ ಪಾವತಿ ವ್ಯವಸ್ಥೆ, ೫೦೦ ಮತ್ತು ೧೦೦೦ ರೂ ಗಳ ನೋಟು ಅನಗಧೀಕರಣ, ಡಿಜಿಟಲ್ ಇಂಡಿಯಾ ಎಂಬ ಅನೇಕ ಯೋಜನೆಗಳ ಜೊತೆಗೆ, ವಿವಿಧ ದೇಶಗಳೊಂದಿಗೆ ಕಪ್ಪುಹಣ ಮಾಹಿತಿ ವಿನಿಮಯದಂತಹ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದೆ.

         ಸರ್ಕಾರದ ಈ ಕಾರ್ಯಕ್ರಮಗಳ ಜೊತೆ ಜೊತೆಗೆ ಭಾರತೀಯರಾದ ನಾವುಗಳು ಸ್ವ ಪ್ರೇರಣೆಯಿಂದ ನಮ್ಮ ಆಸ್ತಿ ಸಂಪತ್ತುಗಳಿಗೆ ಆದಾಯ ತೆರಿಗೆ ಪಾವತಿಸುವುದರ ಮೂಲಕ ಕಪ್ಪು ಹಣಕ್ಕೆ ಕಡಿವಾಣ ಹಾಕಿ, ನಮ್ಮ ದೇಶದ ಆರ್ಥಿಕ ಅಭಿವೃದ್ದಿಗೆ ಶ್ರಮಿಸೋಣ. ಸ್ವಾಸ್ಥ್ಯ ಸಮಾಜ ನಿರ್ಮಿಸುವುದರ ಮೂಲಕ ನಮ್ಮ ದೇಶವನ್ನು ಭ್ರಷ್ಟಾಚಾರ ಮತ್ತು ಕಪ್ಪುಹಣ ಮುಕ್ತ ದೇಶಾವ್ನಾಗಿಸೋಣ. ಎಲ್ಲರೂ ಮನಸ್ಸು ಮಾಡಿ ದೇಶಪ್ರೇಮದಿಂದ ಶ್ರಮಿಸಿದ್ದೆ ಆದರೆ ಅಸಾಧ್ಯವಾದುದು ಯಾವುದು ಇಲ್ಲ ಎಂಬುದು ನನ್ನ ಅಭಿಪ್ರಾಯ.
Similar questions