bonding between a dog and man essay in kannada for 250 words
Answers
Explanation:
ಇಂದಿನ ಮಾತು ಕಥೆ ಒಂದು ನಾಯಿಯ ಸುತ್ತ. ಹತ್ತರಿಂದ ಹದಿನಾಲ್ಕು ವರ್ಷ ಬದುಕಿರುವ ಶ್ವಾನದ ಬಗ್ಗೆ ಮಾತು. ಯಾವ ರೀತಿ finger print ಎಂಬುದು ಇಬ್ಬರು ಮನುಷ್ಯರಲ್ಲಿ ಒಂದೇ ರೀತಿ ಇರುವುದಿಲ್ಲವೋ ಹಾಗೆ ಎರಡು ನಾಯಿಗಳ ಮೂಗು ಒಂದೇ ರೀತಿ ಇರೋಲ್ಲ.
ಮನುಷ್ಯನಿಗೂ ನಾಯಿಗೂ ಇರುವ ಬಾಂಧವ್ಯ ಕನಿಷ್ಠ ಅಂದ್ರೂ 14 ಸಾವಿರ ವರ್ಷಗಳಷ್ಟಂತೆ. ಇನ್ನೊಂದು ಕಡೆ ಹೇಳ್ತಾರೆ ಕ್ರಿ.ಪೂ 326ರಲ್ಲೇ ಮನುಷ್ಯನಿಗೆ ಶ್ವಾನದೊಡನೆ ಬಾಂಧವ್ಯ ಇತ್ತು ಎನ್ನುತ್ತಾರೆ. ಬಡವನ ಮನೆ ಜೇಡಕ್ಕೂ ಸಿರಿವಂತರ ಮನೆ ನಾಯಿಗೂ ಊಟಕ್ಕೇನೂ ಕೊರತೆ ಇಲ್ಲವಂತೆ. ಇದೆಲ್ಲಾ ಬಿಡಿ, ಶ್ವಾನಕ್ಕೋ ಸಿನಿಮಾಕ್ಕೂ ಇರೋ ನಂಟಿನ ಬಗ್ಗೆ ಒಂದಷ್ಟು ವಿಷಯ ನೋಡೋಣ.
ಜಗ್ಗೇಶ್ ಸಿನಿಮಾದ 'ಬೌ ಬೌ ಬಿರಿಯಾನಿ' ಗೊತ್ತಾ? ಒಂದು ಪ್ಲೇಟಿಗೆ ಹನ್ನೆರಡೇ ರೂಪಾಯಿ ಎಂದಾಗ ಖುಷಿಯಾಗಿ ಮೂಗುಮಟ್ಟ ತಿಂದು ಬೀದಿಯಲ್ಲಿ ಹಾದು ಬರುವಾಗ ನಾಯಿಯಂತೆ ಬೊಗುಳುವಂತೆ ಆಗುತ್ತದೆ. ಯಾರೋ ಹೇಳಿದ ಮೇಲೆ ಅರಿವಾಗುತ್ತೆ ಅದು ನಾಯಿ ಮಾಂಸದ ಬಿರಿಯಾನಿ ಅಂತ. ಮುಂದೇನು ಅಂತ ನನಗೂ ಗೊತ್ತಿಲ್ಲ!
ಭಕ್ತ ಕುಂಬಾರ ಅಂಗಡಿಯಲ್ಲಿ ನಿಂತು ಮಡಕೆ ವ್ಯಾಪಾರ ಮಾಡುವ ಸಮಯದಲ್ಲಿ ಅವನ ಅಂಗಡಿಗೆ ನಾಯಿಯೊಂದು ನುಗ್ಗಿ ಅವನ ಬುತ್ತಿಯನ್ನು ಕಚ್ಚಿಕೊಂಡು ಹೋಗುತ್ತದೆ. ಕುಂಬಾರ ಅದರ ಹಿಂದೆಯೇ ಓಡಿ, ಆ ಬುತ್ತಿಯನ್ನು ಬಿಚ್ಚಿ ರೊಟ್ಟಿಯನ್ನು ನಾಯಿಗೆ ತಿನ್ನುವಂತೆ ಅಣಿಮಾಡಿಕೊಳ್ಳುವುದೇ ಅಲ್ಲದೆ, ತಟ್ಟೆಯಲ್ಲಿ ನೀರನ್ನೂ ತಂದು ಉಣಿಸುವ ದೃಶ್ಯ ವಿಶೇಷವಾಗಿದೆ.
ಪಕ್ಕದ ಮನೆಯ ಸಂಗೀತಗಾರನಿಗೆ ಬುದ್ದಿ ಕಲಿಸಲು ತೆನಾಲಿರಾಮ (ನರಸಿಂಹರಾಜು) ಕರಿನಾಯಿಯನ್ನು ಬಿಳೀ ನಾಯಿಯನ್ನಾಗಿ ಮಾಡುವ ಯತ್ನ ಬಲು ಸೊಗಸು. ಗಣೇಶನ ಮದುವೆ ಚಿತ್ರದಲ್ಲಿ ನಾಯಕ ಗಣೇಶ ಒಂದು ನಾಯಿಗೆ 'ರಮಣಮೂರ್ತಿ' ಅಂತ ವಠಾರದ owner'ನ ಹೆಸರಿಟ್ಟು ಕರೆಯೋ ದೃಶ್ಯ ಸಕತ್ ಮಜಾ! ಭೂಲೋಕದಲ್ಲಿ ಯಮರಾಜ ಸಿನಿಮಾದ 'ಭೈರಾ ತಗಲ್ಕೋ' ನೆನಪಿದೆಯಾ? ಜಯಂತಿ ಅಭಿನಯದ ಶ್ರೀಮಂತನ ಮಗಳು ಹಾಡು
ಮನುಷ್ಯನಿಗೂ ನಾಯಿಗೂ ಇರೋ ಬಾಂಧವ್ಯದ ಬಗ್ಗೆ ವ್ಯಂಗ್ಯಭರಿತವಾಗಿಯೂ ಹೇಳುತ್ತಾರೆ. ಕೆಲವರನ್ನು ಕಂಡರೆ ನಾಯಿಗೆ ಏನೋ ಪ್ರೀತಿ. ಎಲ್ಲಿದ್ದರೂ ಬಂದು ಕಚ್ಚುತ್ತೆ! ಒಂದು ಕಾಲಕ್ಕೆ ಹದಿನಾಲ್ಕು ಇಂಜೆಕ್ಷನ್ ಇದ್ದಿದ್ದು ಈಗ ಎರಡಕ್ಕೆ ಇಳಿದಿದೆಯಂತೆ. ರಾತ್ರಿ ವೇಳೆಗೆ ಬಸ್ ಇಳಿದು ಮನೆಗೆ ಬರುವ ಹಾದಿಯಲ್ಲಿ ಎಷ್ಟೋ ಸಾರಿ ಈ ಬೀದಿ ನಾಯಿಗಳು ನಮ್ಮೊಡನೆ ಯುದ್ಧಕ್ಕೇ ಬರುತ್ತವೆ. ಕರೀ ನಾಯಿಯಾದರಂತೂ ಇನ್ನೂ ದಿಗಿಲು. ಬೀದಿಯಲ್ಲೇ ಮಲಗಿರೋ ನಾಯಿಯನ್ನು ಮೆಟ್ಟಿ ಕಚ್ಚಿಸಿಕೊಂಡವರೇ ಬಹಳ. ರಾತ್ರಿ ವೇಳೆ ಒಂದು ನಾಯಿ ಬೊಗಳಿದರೆ ಅದೊಂದು ರೀತಿ ಪ್ರತಿಧ್ವನಿಯಂತೆ ಮತ್ತೊಂದು ಮಗದೊಂದು ಅಂತ ಎಲ್ಲೆಲ್ಲೂ ಬೊಗಳುವಿಕೆಯೇ ಕೇಳಿಸುತ್ತದೆ.
☺️☺️☺️☺️