Geography, asked by srinivasbilagumba, 1 month ago

© ರಕ್ತವು ಹೃದಯಕ್ಕೆ ಎಷ್ಟು ಬಾರಿ ಪ್ರವೇಶಿಸುತ್ತದೆ​

Answers

Answered by Cutycat
1

Answer:

I don't know this language

Answered by prettykitty664
1

Explanation:

9ನೇ ಅ ವರ್ಗದ ವಿದ್ಯಾರ್ಥಿನಿಯರಿಗೆ ವಿಜ್ಞಾನ ಭಾಗ 2 (ಜೀವಶಾಸ್ರ) ದಲ್ಲಿ ‘ಜೀವನ ಕ್ರಿಯೆಗಳು’ ಅಧ್ಯಾಯವನ್ನು (2009ರಲ್ಲಿ) ಬೋಧಿಸುತ್ತಿದ್ದೆ. ಸಾಗಾಣಿಕೆ ವ್ಯೂಹದ ಪ್ರಾಮುಖ್ಯತೆ, ಸಸ್ಯಗಳಲ್ಲಿ ಸಾಗಾಣಿಕೆ ವ್ಯೂಹ, ಮಾನವನಲ್ಲಿ ಸಾಗಾಣಿಕೆ ವ್ಯೂಹ, ರಕ್ತನಾಳ ಹೃದಯ ಮತ್ತು ಹೃದಯ ಹೇಗೆ ಕೆಲಸಮಾಡುತ್ತದೆ ಎಂದು ವಿವರಿಸುತ್ತಿದ್ದೆ.

ಆರೋಗ್ಯವಂತನಾದ ಮನುಷ್ಯನಲ್ಲಿ ಒಂದು ನಿಮಿಷಕ್ಕೆ 72 ಸಲ ಹೃದಯ ಬಡಿತವಾಗುತ್ತದೆ. ಎಡಹೃತ್ಕಕ್ಷಿ ಸಂಕುಚಿಸಿದಾಗ ರಕ್ತವು ಮಹಾಅಪಧಮನಿಗೆ ಒತ್ತಿ ತಳ್ಳಲ್ಪಡುತ್ತದೆ. ಇದು ಮಹಾಅಪಧಮನಿ ಮತ್ತು ಅದರ ಕವಲುಗಳಾದ ಅಪಧಮನಿಗಳ ಗೋಡೆಗಳಮೇಲೆ ಒತ್ತಡವನ್ನು ಏರ್ಪಡಿಸುತ್ತದೆ. ಇದನ್ನು ರಕ್ತದ ಒತ್ತಡ ಎನ್ನುವರು.

ಸುಷ್ಮಾ : ‘ಸ್ಪಿಗ್ಮೋಮೊನೋಮೀಟರ್’ ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಅಲ್ವಾ ಸರ್.

ನಾನು :- ಹೌದು ಸರಿಯಾಗಿ ಹೇಳಿದೆ.

ರಾಣಿ :- ರಕ್ತದೊತ್ತಡ ಎಂದರೇನು? ಸ್ವಲ್ಪ ವಿವರಿಸಿ ಹೇಳಿ ಸರ್.

ನಾನು :- ಈಗಾಗಲೇ ಹೃದಯ, ಅದರ ಕಾರ್ಯ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿದಿದ್ದಿರಿ. ಮೂಲತಃ ಹೃದಯ ಒಂದು ಮೃದುವಾದ ಸ್ನಾಯುಗಳಿಂದ ಕೂಡಿದೆ. ಹೃದಯಭಿತ್ತಿಯಾದ ಹೃದಯ ಸ್ನಾಯು ದ್ರವ್ಯ (Pericardial fluid) ಕೆಲಸ ನಡೆಸುತ್ತದೆ. ಹೃದಯದ ಸ್ನಾಯು ಬಿಗಿಯಾದಾಗ ಅಥವಾ ಸಂಕುಚಿತಗೊಂಡಾಗ ಹೃದಯದಿಂದ ರಕ್ತವು ಹೊರತಳ್ಳಲ್ಪಡುತ್ತದೆ ಹಾಗೂ ದೇಹದತುಂಬಾ ಹರಿಯುತ್ತದೆ. ಪುನಃ ಹೃದಯಕ್ಕೆ ಶುದ್ಧ ರಕ್ತ ತುಂಬಿಕೊಳ್ಳುತ್ತದೆ.

ಹೀಗೆ, ಶರೀರದಲ್ಲಿ ರಕ್ತ ಹರಿಯುವಾಗ ರಕ್ತ ಸಂಚಾರದೊಂದಿಗೆ, ಹಿಗ್ಗುವ ಮತ್ತು ಕುಗ್ಗುವ ಅಪಧಮನಿಯ ಭಿತ್ತಿಯ ಒಳಭಾಗದ ಮೇಲೆ ಒತ್ತಡ ಹೇರುತ್ತದೆ. ಆಗ ಹೃದಯ ಸಂಕುಚಿತಗೊಂಡಾಗಲೆಲ್ಲಾ, ಒತ್ತಡ ಅಧಿಕವಾಗುತ್ತದೆ, ಮತ್ತು ವಿಕಸಿತಗೊಂಡಾಗ ಒತ್ತಡವು ಇಳಿಯುತ್ತದೆ. ಒಂದು ದಿನದಲ್ಲಿ ರಕ್ತದ ಒತ್ತಡ ಆಗಿಂದಾಗ್ಗೆ ಬದಲಾಗುತ್ತಿರುತ್ತದೆ. ಕೆಲವು ಶಾರೀರಿಕ ಚಟುವಟಿಕೆಗಳಿಂದಾಗಿ, ಭಾರಿ ಭೋಜನದ ಬಳಿಕ, ಚಳಿಯ ವಾತಾವರಣದಲ್ಲಿ, ರಕ್ತದ ಒತ್ತಡವೂ ಏರುತ್ತದೆ. ಉಳಿದ ಸಮಯದಲ್ಲಿ, ನೀವು ಹಾಸಿಗೆಯ ಮೇಲೆ ಮಲಗಿರುವಾಗ ಮತ್ತು ವಿಶ್ರಾಂತಿ ಪಡೆಯುತ್ತಿರುವಾಗ ಈ ಒತ್ತಡ ಕಡಿಮೆಯಾಗುತ್ತದೆ.

ಮಂಜುಳಾ :- ಹಾಗಾದರೆ ದೇಹ ರಕ್ತದೊತ್ತಡವನ್ನು ಹೇಗೆ ನಿಯಂತ್ರಿಸುತ್ತದೆ?

ನಾನು :- ರಕ್ತದೊತ್ತಡವನ್ನು ಹತೋಟಿಯಲ್ಲಿಡುವ ಹಾಗೂ ನಿಯಂತ್ರಿಸುವ ಒಂದು ಸಂಕೀರ್ಣವ್ಯವಸ್ಥೆಯಿದೆ. ಈ ವ್ಯವಸ್ಥೆಯಿಲ್ಲದಿದ್ದರೆ, ರಕ್ತವೆಲ್ಲಾ ಕಾಲುಗಳಿಗೆ ಇಳಿಯುತ್ತಿತ್ತು, ಆಗ ವ್ಯಕ್ತಿ ನಿಂತುಕೊಂಡಾಗಲೆಲ್ಲಾ ರಕ್ತದ ಒತ್ತಡ ಕೆಳಗಿಳಿದು, ಮೂರ್ಛೆಬೀಳಬೇಕಾಗುತ್ತಿತ್ತು. ಮೂತ್ರ ಜನಕಾಂಗ, ಮೆದುಳು ಮತ್ತು ನರವ್ಯೂಹ ಈ ಒತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ದೇಹಕ್ಕೆ ರಕ್ತದ ಅವಶ್ಯಕತೆಯನ್ನು ಹೊಂದಿಕೊಂಡು ಇವು ವಿವಿಧ ರೀತಿಯಲ್ಲಿ ಒತ್ತಡವನ್ನು ಹೆಚ್ಚುಕಡಿಮೆ ಮಾಡುತ್ತದೆ. ಈ ನಿಯಂತ್ರಣದ ಪದ್ಧತಿ ರಕ್ತದ ಒತ್ತಡವನ್ನು ಮೊದಲೇ ಗೊತ್ತು ಪಡಿಸಿದ ಒಂದು ನಿರ್ದಿಷ್ಟಮಟ್ಟದಲ್ಲಿಡಲು ಸಹಕರಿಸುತ್ತದೆ. ಒತ್ತಡ ಅತಿ ಹೆಚ್ಚು ಅಥವಾ ಅತಿ ಕಡಿಮೆ ಇದ್ದಾಗ, ಈ ಪದ್ಧತಿ ನೀತಿಯನ್ನು ಅರಿತುಕೊಂಡು ಅವಶ್ಯಕ ಹೊಂದಾಣಿಕೆಗಳನ್ನು ಮಾಡುವತ್ತ ಕಾರ್ಯಗತವಾಗುತ್ತದೆ.

I hope it will help you dear ✌️

Similar questions