can any one send me 1 story from Panchatantra on kannada pls fast
Answers
please mark me brainlist I need only one brainlist answer to get next level
Explanation:
Once upon a time, in a forest, there lived a monkey who resided on a jamoon (berry) tree, which was on the banks of a river. In the same forest, there lived a crocodile and his wife. One day, the crocodile came to the banks of the river and rested under the tree. The kindhearted monkey offered him some fruits. The crocodile came back the next day for more fruits, as he loved them. As days passed by, the crocodile and the monkey became good friends.
One day, the monkey sent some fruits for the crocodile’s wife. She ate the fruits and liked them, but was jealous, as she didn’t like her husband spending time with the monkey. She told her husband, “If the fruits are so juicy, I wonder how sweet the monkey’s heart would be. Get me the heart of the monkey.” The crocodile was not willing to kill his friend, but had no choice.
He invited the monkey to his house for dinner and that his wife would like to meet him. The monkey was happy, but couldn’t swim, so the crocodile took him on his back. The crocodile was happy that he had tricked the monkey, however, while talking, he blurted out the real reason for taking the monkey home. The clever monkey said, “You should have told me earlier, I left my heart on the tree. We must go back and get it.” The crocodile believed him and took him back to the tree. Thus, the clever monkey saved his life.
Moral of the Story: Choose your company wisely and always have presence of mind.
ರೈತನೊಬ್ಬನ ತೋಟದಲ್ಲಿದ್ದ ಸೇಬು ಮರದಲ್ಲಿಒಂದೇ ಒಂದು ಹಣ್ಣು ಬೆಳೆಯಿತು. ಆತ ಅದನ್ನು ಕೊಯ್ದು ಇದನ್ನು ತನಗೆ ಅತ್ಯಂತ ಪ್ರೀತಿಪಾತ್ರರಾದ ಯಾರಿಗಾದರೂ ಉಡುಗೊರೆಯಾಗಿ ಕೊಡಬೇಕು ಎಂದು ಯೋಚಿಸಿ ಪ್ರಜೆಗಳ ಕ್ಷೇಮಕ್ಕಾಗಿ ಹಗಲಿರುಳೂ ಚಿಂತಿಸುವ ಅರಸನಿಗೆ ಒಪ್ಪಿಸಲು ನಿರ್ಧರಿಸಿ ಅರಸನ ಸಭೆಗೆ ಹೋದ. ಅಲ್ಲಿಆತ ಸೇಬನ್ನು ಅರಸನ ಮುಂದಿರಿಸಿ 'ದೊರೆಯೇ, ಇದು ಬಹು ವಿಶೇಷವಾಗಿದೆ. ದೇವತೆಗಳ ಕೃಪೆಯಿಂದ ಈ ಏಕೈಕ ಹಣ್ಣು ನನ್ನ ತೋಟದಲ್ಲಿಬೆಳೆದಿದೆ ಎಂದು ಭಾವಿಸಿದ್ದೇನೆ. ಅಮೂಲ್ಯವಾದ ಹಣ್ಣನ್ನು ನನಗೆ ಪ್ರೀತಿಪಾತ್ರರಾದವರಿಗಷ್ಟೇ ಕೊಡಬೇಕು ಎಂದು ನಿರ್ಧರಿಸಿ ತಮಗೆ ಇದನ್ನು ಉಡುಗೊರೆಯಾಗಿ ನೀಡಬೇಕೆಂದು ತಂದಿದ್ದೇನೆ. ಸ್ವೀಕರಿಸಿ' ಎಂದು ನಿವೇದಿಸಿದ.
ಅರಸನು ಸೇಬನ್ನು ಹಿಡಿದು ನೋಡಿದಾಗ ಅದರಲ್ಲಿವಿಶೇಷವಿದೆ ಎಂದು ಅವನಿಗನಿಸಲಿಲ್ಲ. ಆದರೆ ಮುಗ್ಧ ರೈತನ ಪ್ರೀತಿಯನ್ನು ಶಂಕಿಸಬಾರದು ಎಂಬ ಕಾರಣಕ್ಕೆ ಸಂತೋಷ ವ್ಯಕ್ತಪಡಿಸಿ 'ನಿಜವಾಗಿಯೂ ಅತ್ಯಮೂಲ್ಯ ಕೊಡುಗೆಯನ್ನೇ ತಂದಿರುವೆ. ಇದಕ್ಕಾಗಿ ನನ್ನಿಂದ ನಿನಗೆ ಏನು ಪ್ರತಿಫಲ ಬೇಕು ಕೇಳು' ಎಂದು ಹೇಳಿದ. ರೈತ ಪ್ರತಿಫಲಕ್ಕೆ ಕೈಯೊಡ್ಡದೆ 'ಎಲ್ಲಾದರೂ ಉಂಟೆ? ಪ್ರೀತಿಯ ಕೊಡುಗೆಗೆ ಪ್ರತಿಫಲ ಸ್ವೀಕರಿಸುವುದು ಉಚಿತವಲ್ಲ' ಎಂದು ನಿರಾಕರಿಸಿದ. ಬರಿಗೈಯಲ್ಲಿರೈತನನ್ನು ಕಳುಹಿಸಲು ಅರಸನ ಮನವೊಪ್ಪದೆ ಮಂತ್ರಿಗಳೊಂದಿಗೆ ಸಮಾಲೋಚಿಸಿದಾಗ ಮಂತ್ರಿಗಳು 'ಆತ ಕಾಲಿಗೆ ಹಾಕಲು ಒಳ್ಳೆಯ ಪಾದರಕ್ಷೆಗಳು ಕೂಡ ಇಲ್ಲದೆ ಕಷ್ಟಪಟ್ಟು ನಡೆದು ಇಲ್ಲಿಗೆ ಬಂದಿದ್ದಾನೆ. ಅವನಿಗೆ ಸವಾರಿಗೆ ಯೋಗ್ಯವಾದ ಒಳ್ಳೆಯ ಕುದುರೆ ಕೊಡಬೇಕು. ಕುದುರೆಯ ಮೇಲೆ ಅದಕ್ಕೆ ಹೊರಲು ಸಾಧ್ಯವಿರುವಷ್ಟು ಚಿನ್ನದ ನಾಣ್ಯಗಳ ಮೂಟೆಯನ್ನಿರಿಸಿದರೆ ಆತ ಸುಖದಿಂದ ಬದುಕಲು ನೆರವಾಗುತ್ತದೆ' ಎಂದು ಹೇಳಿದರು.
ಹೀಗೆ ಅರಸನು ಕೊಡುಗೆಯಾಗಿ ನೀಡಿದ ಕುದುರೆಯ ಮೇಲೆ ಕುಳಿತುಕೊಂಡು ರೈತ ಮನೆಯ ದಾರಿ ಹಿಡಿದ. ಆತನ ಮನೆಯ ಪಕ್ಕದಲ್ಲಿಒಬ್ಬ ಶ್ರೀಮಂತ ರೈತನಿದ್ದ. ಅವನು ಯಾರಿಗೂ ಕೊಳೆತ ಹಣ್ಣು ಕೂಡ ಉಚಿತವಾಗಿ ಕೊಡುವವನಲ್ಲ. ಆತ ಒಳ್ಳೆಯ ಕುದುರೆಯನ್ನೇರಿಕೊಂಡು ಬರುತ್ತಿರುವ ಬಡ ರೈತನನ್ನು ಕಂಡು ಬೆರಗಾಗಿ ಅವನನ್ನು ತಡೆದು ನಿಲ್ಲಿಸಿ 'ನಿನ್ನೆ ತನಕ ಹೊಲ ಉಳಲು ಮುದಿ ಎತ್ತನ್ನು ಕೊಳ್ಳಲು ನಿನ್ನ ಬಳಿ ಶಕ್ತಿಯಿರಲಿಲ್ಲ. ಆದರೆ ಇಂದು ಲಕ್ಷ ಲಕ್ಷ ಬೆಲೆ ಬಾಳುವ ಕುದುರೆಯ ಮೇಲೆ ಕುಳಿತುಕೊಂಡು ಬರುತ್ತಾ ಇದ್ದೀ ಅಂದರೆ ಏನು ಸಮಾಚಾರ?' ಎಂದು ಕೇಳಿದ. ಅದಕ್ಕೆ ರೈತ 'ಇದು ಪ್ರಾಮಾಣಿಕವಾಗಿಯೇ ದೊರಕಿದೆ. ನನ್ನ ತೋಟದಲ್ಲಿಕೆಂಪು ಬಣ್ಣದ ದೊಡ್ಡ ಸೇಬು ಆಗಿತ್ತಲ್ಲ. ಅದು ಬಹಳ ಅಪೂರ್ವವಾದುದೆಂದು ನನಗೆ ಗೊತ್ತಾಗಿ ಅದನ್ನು ಅರಸರಿಗೆ ಉಡುಗೊರೆಯಾಗಿ ಕೊಟ್ಟೆ. ಅವರು ನನಗೆ ಈ ಕುದುರೆ ಕೊಟ್ಟರು ಮತ್ತು ಬಂಗಾರದ ನಾಣ್ಯಗಳ ಮೂಟೆಯನ್ನೂ ಹೊರಿಸಿ ಕಳುಹಿಸಿದರು' ಎಂದ.
ಶ್ರೀಮಂತನು ತನ್ನ ತೋಟದಲ್ಲಿಒಂದಕ್ಕಿಂತ ಒಂದು ಹೆಚ್ಚು ಆಕರ್ಷಕವಾಗಿರುವ ಸೇಬು ಹಣ್ಣುಗಳು ಬೇಕಾದಷ್ಟಿವೆ. ಒಂದು ಹಣ್ಣಿಗೆ ಒಂದು ಕುದುರೆ, ಒಂದು ಮೂಟೆ ಚಿನ್ನ ಸಿಗುವುದಾದರೆ ತನ್ನ ಮನೆಯನ್ನು ಅದರಿಂದಲೇ ತುಂಬಿಸಬಹುದು ಎಂದು ಲೆಕ್ಕ ಹಾಕಿದ ಅವನು ಚಂದಚಂದದ ಸೇಬು ಹಣ್ಣುಗಳನ್ನು ಕೊಯ್ಯಿಸಿ ಗಾಡಿ ತುಂಬ ಹೇರಿಕೊಂಡು ಅರಸನ ಸನ್ನಿಧಿಗೆ ಹೋಗಿ 'ನಾನು ಬಡ ರೈತ. ನನ್ನ ತೋಟದಲ್ಲಿಅತ್ಯಮೂಲ್ಯವಾದ ಸೇಬು ಹಣ್ಣುಗಳು ರಾಶಿರಾಶಿಯಾಗಿ ಬೆಳೆದಿವೆ. ಇದು ಯೋಗ್ಯರಾದವರ ಬಳಿಗೆ ಸೇರಬೇಕು ಎಂಬ ಆಶಯದಿಂದ ಎಲ್ಲವನ್ನೂ ಕೊಯ್ಯಿಸಿ ತಮಗೆ ಸಮರ್ಪಿಸಲು ತಂದಿದ್ದೇನೆ' ಎಂದ. ಅದಕ್ಕೆ ಅರಸ 'ತುಂಬಾ ಸಂತೋಷವಾಯಿತು. ಈ ಹಣ್ಣುಗಳಿಗಾಗಿ ನೀನು ಯಾವ ಪ್ರತಿಫಲ ಬೇಕು ಎಂದು ಬಯಸಿದರೂ ಅದನ್ನು ಕೊಡುವ ವ್ಯವಸ್ಥೆ ಮಾಡುತ್ತೇನೆ' ಎಂದು ಹೇಳಿದ. ಅದಕ್ಕೆ ರೈತ 'ನಾನು ಇದನ್ನು ತಂದಿದ್ದು ಪ್ರತಿಫಲದ ಬಯಕೆಯಿಂದ ಅಲ್ಲವೇ ಅಲ್ಲ. ನನಗೆ ಏನೂ ಬೇಡ' ಎಂದು ಹೇಳಿದಾಗ ಅರಸ 'ಪ್ರಜೆಗಳಿಂದ ನಾನು ಯಾವ ವಸ್ತುವನ್ನೂ ಉಚಿತವಾಗಿ ಸ್ವೀಕರಿಸುವುದಿಲ್ಲ. ಅದಕ್ಕೆ ಪ್ರತಿಫಲ ಕೊಡಲೇಬೇಕಾಗುತ್ತದೆ. ಏನು ಬೇಕಿದ್ದರೂ ಕೇಳು. ಕೊಡುತ್ತೇನೆ' ಎಂದ.
ಶ್ರೀಮಂತ ರೈತ ಮನಸ್ಸಿನಲ್ಲೇ ಸಂತೋಷಪಟ್ಟು 'ಅರಸರು ಪ್ರೀತಿಯಿಂದ ಏನು ಕೊಟ್ಟರೂ ಅದನ್ನು ತೆಗೆದುಕೊಳ್ಳುತ್ತೇನೆ' ಎಂದು ಹೇಳಿದ. ಗಾಡಿ ತುಂಬ ಹಣ್ಣು ತಂದಿರುವ ಇವನು ಬಡವನಲ್ಲಎಂದು ನಿರ್ಧರಿಸಿ ಅರಸ ಆತನ ಬೆರಳುಗಳಲ್ಲಿಉಂಗುರಗಳನ್ನು ಧರಿಸಿರುವ ಗುರುತನ್ನು ಕಂಡು ಆತ ದುಡಿಯುವವನೂ ಅಲ್ಲಅನಿಸಿತು. ಆತ ಬಡ ರೈತ ತಂದುಕೊಟ್ಟಿದ್ದ ಸೇಬು ಹಣ್ಣನ್ನು ಒಳಗಿನಿಂದ ತರಿಸಿ ಶ್ರೀಮಂತ ರೈತನ ಕೈಯಲ್ಲಿಟ್ಟು 'ಇದು ನನಗೆ ತುಂಬಾ ಪ್ರೀತಿಯ ಹಣ್ಣು. ಬಡ ರೈತನೊಬ್ಬನ ಶ್ರಮದ ಫಲ. ಇದರ ಬೆಲೆ ಕಟ್ಟಲಾಗದು. ಇದನ್ನು ತೆಗೆದುಕೊಂಡು ಹೋಗು' ಎಂದು ಹೇಳಿದಾಗ ಶ್ರೀಮಂತ ರೈತ ಪೆಚ್ಚು ಮೋರೆ ಹಾಕಿಕೊಂಡು ಮನೆಗೆ ಬಂದ.
undefined
ಭಾರಿ ಉಳಿತಾಯ! ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021!
ಪುಟಾಣಿ ಕಥೆ: ಹೆಚ್ಚು ಓದಿದ
""ಅರಸನ ಉಡುಗೊರೆ
ಅರಸನ ಉಡುಗೊರೆ
""ಪ್ರಯತ್ನವಿಲ್ಲದೆ ಫಲವಿಲ್ಲ
ಪ್ರಯತ್ನವಿಲ್ಲದೆ ಫಲವಿಲ್ಲ
ಉಪಕಾರಕ್ಕೆ ಪ್ರತಿಫಲ
ಅಪ್ಪನ ಜೀವನ ಪಾಠ
ವಿನಮ್ರ ಹಣತೆ
ವಿಜಯ ಕರ್ನಾಟಕದಿಂದ ಕ್ಷಣ ಕ್ಷಣದ ಸುದ್ದಿಗಳನ್ನು ತಿಳಿಯಿರಿ
ಮಕ್ಕಳ ಕಥೆ: ಉಪಕಾರಕ್ಕೆ ಪ್ರತಿಫಲ
ಮುಂದಿನ ಲೇಖನ
ಕರ್ನಾಟಕ ವೀಡಿಯೋ
""ಸಿಡಿದ ಜಿಲೆಟಿನ್- ಸ್ಫೋಟಕ್ಕೆ ಓರ್ವ ಕಾರ್ಮಿಕ ಬಲಿ!
ಸಿಡಿದ ಜಿಲೆಟಿನ್- ಸ್ಫೋಟಕ್ಕೆ ಓರ್ವ ಕಾರ್ಮಿಕ ಬಲಿ!
""ವಿಟಿಯು ಘಟಿಕೋತ್ಸವ: ಪ್ರತಿಭಾನ್ವಿತ ವಿದ್ಯಾರ್ಥಿಗಳ ಬಂಗಾರದ ಬೇಟೆ..!
ವಿಟಿಯು ಘಟಿಕೋತ್ಸವ: ಪ್ರತಿಭಾನ್ವಿತ ವಿದ್ಯಾರ್ಥಿಗಳ ಬಂಗಾರದ ಬೇಟೆ..!
ಆಲಸ್ಯ ತೋರಿದರೆ ಬೈ ಎಲೆಕ್ಷನ್‌ನಲ್ಲಿ ಅಪಾಯ ಖಚಿತ..! ಶಾಸಕ ರೇಣುಕಾಚಾರ್ಯ ಎಚ್ಚರಿಕೆ
ಮಸ್ಕಿ ವಿಧಾನಸಭೆ ಬೈಎಲೆಕ್ಷನ್‌ನಲ್ಲಿ ಗೆಲುವು ನಮ್ಮದೇ..! ಬಿಜೆಪಿ ಕಾಂಗ್ರೆಸ್ ಟಾಕ್ ಫೈಟ್..!
ಬೀದರ್: ಮಾರುತಿ ಮುಳೆ ವಿರುದ್ಧ ಮಲ್ಲಿಕಾರ್ಜುನ ಖೂಬಾ ಕೆಂಡಾಮಂಡಲ
ಕೋಲಾರ ಡೇರಿಯಲ್ಲಿ 10 ಲಕ್ಷ ರೂ. ಮೌಲ್ಯದ ತುಪ್ಪ ಕದ್ದು ಸಿಕ್ಕಿಬಿದ್ದ ಸಿಬ್ಬಂದಿ..!
ಕೀವರ್ಡ್ಸ್
ಆ್ಯಪ್‌ನಲ್ಲಿ ಓದಿ