World Languages, asked by veenaveenashivakumar, 1 month ago

"corona sankramika roga " essay in kannada​

Answers

Answered by sushanthpola980
1

Answer:

BEST ESSAY

Explanation:

ನವದೆಹಲಿ: ಕೊರೋನಾ ವೈರಸ್ ವಿಶ್ವದಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ವೈರಸನ್ನು ಸಾಂಕ್ರಾಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ಬೆನ್ನಲ್ಲೇ, ಇದೀಗ ಭಾರತ ಸರ್ಕಾರ ಎಲ್ಲಾ ರೀತಿಯ ವೀಸಾಗಳನ್ನು ಅಮಾನತು ಮಾಡಿದೆ.

ಹೊಸ ಪ್ರವಾಸಿ ಮಾರ್ಗಸೂಚಿಗಳನ್ನು ಜಾರಿಗೊಳಿಸಿರುವ ಸರ್ಕಾರ, ಮಾರ್ಚ್ 13ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ತಿಳಿಸಿದೆ.

ಹೊಸ ನಿಯಮಗಳು ಇಂತಿವೆ...

ಸಾಗರೋತ್ತರ ಭಾರತೀಯರ ವೀಸಾ ಮುಕ್ತ ಪ್ರವಾಸ ಸವಲತ್ತನ್ನು ಏ.15ರವರೆಗೆ ತಡೆಹಿಡಯಲಾಗಿದೆ.

ಭಾರತಕ್ಕೆ ಅನಿವಾರ್ಯಭೇಟಿ ನೀಡಬೇಕು ಎನ್ನುವ ವಿದೇಶೀಯರು ಸಮೀಪದ ಭಾರತೀಯ ದೂತವಾಸ ಸಂಪರ್ಕಿಸಬೇಕು.

ಚೀನಾ, ಇಟಲಿ, ಇರಾನ್, ಕೊರಿಯಾ, ಫ್ರಾನ್ಸ್, ಸ್ಪೇನ್ ಹಾಗೂ ಜರ್ಮನಿಯಿಂದ ಬರುವ ಎಲ್ಲಾ ಪ್ರವಾಸಿಗರನ್ನು ಕಡ್ಡಾಯವಾಗಿ ಪ್ರತ್ಯೇಕವಾಗಿ ಇರಿಸಿ 14 ದಿನ ತಪಾಸಣೆಗೆ ಒಳಪಡಿಸಲಾಗುವುದು.

ಭಾರತೀಯರು ಹಾಗೂ ವಿದೇಶಿಯರು ಅಗತ್ಯವಿಲ್ಲದೇ ಹೋದರೆ ಭಾರತಕ್ಕೆ ಪ್ರವಾಸ ರದ್ದುಗೊಳಿಸಬೇಕು

Answered by madhaviumale
1

Answer:

ಕೋವಿಡ್ -19 ಕುರಿತು ನೀವು ತಿಳಿಯಲೇ ಬೇಕಾದ ಅಂಶಗಳ ಕುರಿತ ಮಾಹಿತಿ ಇಲ್ಲಿ ನೀಡಲಾಗಿದೆ. ಕೊರೊನಾ ಹರಡುವ ರೀತಿ, ಚಿಕಿತ್ಸೆ, ಪರೀಕ್ಷಾ ವಿಧಾನ, ತಡೆಗಟ್ಟುವ ಬಗೆಯ ಸವಿಸ್ತಾರ ಮಾಹಿತಿ ಇಲ್ಲಿದೆ.

ಕೋವಿಡ್‌ -19 ಎಂದರೇನು

ಕೊರೊನಾ ವೈರಸ್‌ನ ಕುಟುಂಬಕ್ಕೆ ಸೇರಿದ ಸಾಂಕ್ರಾಮಿಕ ಸೊಂಕು ಹೊಂದಿರುವ ವೈರಸ್‌ ಆಗಿದ್ದು, ಇತ್ತೀಚೆಗೆ ಪತ್ತೆಯಾಗಿರುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2019 ರ ಡಿಸೆಂಬರ್ ನಲ್ಲಿ ವ್ಯುಹಾನ್‌ನಲ್ಲಿ ಸೋಂಕು ಪತ್ತೆಯಾಗಿತ್ತು

ಕೋವಿಡ್‌-19 ರೋಗಲಕ್ಷಣಗಳೇನು?

ಸಾಮಾನ್ಯವಾಗಿ ಜ್ವರ, ಒಣ ಕೆಮ್ಮು, ಸುಸ್ತು ಆರಂಭಿಕ ಲಕ್ಷಣಗಳು ಎನ್ನಬಹುದು. ಕೆಲವರಿಗೆ ಮೈಕೈ ನೋವು, ಶ್ವಾಸನಾಳದಲ್ಲಿ ಕಿರಿಕಿರಿ, ಗಂಟಲು ನೋವು ಅಥವಾ ಬೇಧಿ ಕಾಣಿಸಿಕೊಳ್ಳಬಹುದು. ಈ ಎಲ್ಲ ಲಕ್ಷಣಗಳು ಆರಂಭದಲ್ಲಿ ತುಂಬಾ ನಿಧಾನಗತಿಯಲ್ಲಿರುತ್ತದೆ ಬಳಿಕ ಒಮ್ಮಿಂದೊಮ್ಮೆಲೇ ಗಂಭೀರ ಸ್ವರೂಪ ಪಡೆದುಕೊಳ್ಳಬಹುದು. ಕೆಲವರಿಗೆ ಯಾವುದೇ ವಿಧವಾದ ಸಾಮಾನ್ಯ ಲಕ್ಷಣಗಳು ಕಾಣಿಸದು. ಹೆಚ್ಚಿನ ಜನರು (80%) ತಮ್ಮ ರೋಗ ನಿರೋಧಕ ಶಕ್ತಿಯ ಮೂಲಕವೇ ಗುಣಮುಖರಾಗುತ್ತಾರೆ. ಪ್ರತಿ 6 ರಲ್ಲಿ ಒಬ್ಬರು ಮಾತ್ರವೇ ಕೋವಿಡ್‌ -19ನಿಂದ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿ, ಉಸಿರಾಟದ ಸಮಸ್ಯೆಗೆ ತುತ್ತಾಗುತ್ತಾರೆ. ರಕ್ತದೊತ್ತಡ, ಹೃದ್ರೋಗ, ಮಧುಮೇಹ ಇತ್ಯಾದಿ ಈಗಾಗಲೇ ಆರೋಗ್ಯ ಸಮಸ್ಯೆ ಹೊಂದಿರುವವರು, ಹಿರಿಯರಲ್ಲಿ ಕೋವಿಡ್‌-19 ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಗಂಟಲು ನೋವು, ಒಣ ಕೆಮ್ಮು, ಉಸಿರಾಟದ ಸಮಸ್ಯೆಯ ಜತೆಗೆ ಜ್ವರ ಕಂಡು ಬಂದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಸೂಕ್ತ.

ಕೊರೊನಾ ಹರಡುವ ಬಗೆ ಹೇಗೆ?

ಕೋವಿಡ್‌-19 ವೈರಸ್‌ ಸಾಂಕ್ರಾಮಿಕ ರೋಗ. ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದ ವೇಳೆ ಮತ್ತೊಬ್ಬ ವ್ಯಕ್ತಿಯ ಮೂಗಿನ ರಂಧ್ರಗಳು, ಬಾಯಿಯ ಮೂಲಕ ವೈರಾಣು ಹರಡುತ್ತದೆ. ಅಲ್ಲದೆ ಸೀನಿದಾಗ ಹೊರಬರುವ ವೈರಾಣುಗಳು ವಸ್ತು ಇತ್ಯಾದಿಗಳ ಮೇಲ್ಮೈನಲ್ಲಿ ಜಾಗಮಾಡಿಕೊಳ್ಳುತವೆ. ಆರೋಗ್ಯವಂತ ವ್ಯಕ್ತಿ ಇದೇ ಮೇಲ್ಮೈನನ್ನು ಮುಟ್ಟಿದಾಗ ಆತನ ಕೈಗಳಲ್ಲಿ ಕೋವಿಡ್‌-19 ವೈರಾಣು ಸೇರಿಕೊಳ್ಳುತ್ತದೆ. ಕೈಗಳಿಂದ ಮೂಗು, ಬಾಯಿ, ಕಣ್ಣುಗಳ ಮೂಲಕ ದೇಹ ಸೇರಿ, ಅನಾರೋಗ್ಯ ಉಂಟು ಮಾಡುತ್ತದೆ. ಇಷ್ಟೇ ಅಲ್ಲದೆ, ಸೋಮಕಿತ ವ್ಯಕ್ತಿಯು ಸೀನಿದಾಗ ಅಥವಾ ಕೆಮ್ಮಿದಾಗ ಹತ್ತಿರವಿರುವ ಆರೋಗ್ಯವಂತ ವ್ಯಕ್ತಿಯ ಉಸಿರಿನ ಮೂಲಕವೂ ವೈರಾಣು ದೇಹ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕಾಗಿಗೇ ಅನಾರೋಗ್ಯ ಅಥವಾ ಕೋವಿಡ್‌-19 ಶಂಕಿತ ವ್ಯಕ್ತಿಗಳಿಂದ ಕನಿಷ್ಠ 1ಮೀಟರ್‌ ಅಂತರ ಕಾಯ್ದುಕೊಳ್ಳುವುದು ಮುಖ್ಯ ಎನ್ನಲಾಗುತ್ತದೆ.

Similar questions