deshada abhirudhige vignanada koduge essay in kannada
Answers
Answer:
ಉತ್ತರ ಫೋಟೋ dalli ಇದೆ.
3 photo ಇದೆ
hope it helps ✔︎✔️
Explanation:
ವಿಜ್ಞಾನ-ತಂತ್ರಜ್ಞಾನ ಭಾರತದ ಶಕ್ತಿ. ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ-ತಂತ್ರಜ್ಞಾನ ಕೊಡುಗೆ ಅಪಾರ. ಕೃಷಿ, ಆರ್ಥಿಕ, ಸಾಮಾಜಿಕ ಸ್ಥಿತಿಗಳ ಸುಧಾರಣೆ ಹಾಗೂ ಭಾರತವನ್ನು ಒಗ್ಗೂಡಿಸವಲ್ಲಿ ವಿಜ್ಞಾನದ ಪಾತ್ರ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆಯುತ್ತಿರುವ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಮಾತನಾಡಿದರು. ಬೆಂಗಳೂರು ಮೊದಲು ಗಾರ್ಡನ್ ಸಿಟಿಯಾಗಿತ್ತು. ಆದರೀಗ ಸ್ಟಾರ್ಟಪ್ ಗಳ ನಗರವಾಗಿ ಬದಲಾಗಿದೆ.
ಕಳೆದ 50 ವರ್ಷಗಳಲ್ಲಿ ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನಿಗಳ ಕೊಡುಗೆ ಅಪಾರ. ಯಾರು ಹೊಸ ಅನ್ವೇಷಣೆ ಮಾಡುತ್ತಾರೋ ಅವರಿಗೆ ಪೇಟೆಂಟ್ ಸಿಗುತ್ತೆ. ಸರ್ಕಾರ ಮತ್ತು ಜನಸಾಮಾನ್ಯರ ನಡುವಿನ ಕೊಂಡಿಯಾಗಿ ತಂತ್ರಜ್ಞಾನ ನಿಲ್ಲುತ್ತದೆ. ತಂತ್ರಜ್ಞಾನದಿಂದಲೇ ಸರ್ಕಾರದ ಎಲ್ಲಾ ಯೋಜನೆಗಳೂ ಯಶಸ್ವಿಯಾಗಿ ಜನರನ್ನು ತಲುಪುತ್ತಿವೆ ಎಂದರು.
ನಮ್ಮ ದೇಶದ ಅಭಿವೃದ್ಧಿ ವಿಜ್ಞಾನದ ಮೇಲೆ ನಿಂತಿದೆ. ಗ್ರಾಮೀಣಾಭಿವೃದ್ಧಿಯಲ್ಲಿ ವಿಜ್ಞಾನ ತಂತ್ರಜ್ಞಾನದ ಮಹತ್ವ ಎಷ್ಟು ದೊಡ್ಡದು ಎಂಬುದು ಕಳೆದ ಐದು ವರ್ಷದಲ್ಲಿ ಜನತೆಗೆ ಅರಿವಾಗಿದೆ. ಭಾರತದಲ್ಲಿ ಸ್ಮಾರ್ಟ್ ಫೋನ್ ತುಂಬಾ ಕಡಿಮೆ ದರದಲ್ಲಿ ದೊರೆಯುತ್ತದೆ. ಸ್ವಚ್ಚ ಭಾರತದಿಂದ ಆಯುಷ್ಮಾನ್ ಭಾರತ ಯೋಜನೆವರೆಗೂ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಜನರಿಗೆ ತಲುಪಿದೆ.
ಈ ಯಶಸ್ಸಿನ ಹಿಂದೆ ಮಾಹಿತಿ ತಂತ್ರಜ್ಞಾದ ಕೊಡುಗೆ ಅಪಾರ. ಗ್ರಾಮೀಣ ಭಾಗದಲ್ಲಿ ಮನೆ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತಿವೆ. ಇದಕ್ಕೆ ಡೇಟಾ ವಿಜ್ಞಾನ, ಜಿಐಎಸ್, ರಿಯಲ್ ಟೈಮ್ ಮಾನಿಟರಿಂಗ್ ಬಳಸಿ ಕಾಮಗಾರಿ ಮೇಲೆ ನಿಗಾ ಇಡಲಾಗುತ್ತಿದೆ. ಇದರಿಂದ ಕಾಲಮಿತಿಯಲ್ಲಿ ಕಾಮಗಾರಿ ಮುಗಿಯುತ್ತಿದೆ.
ಬಡವರಿಗೆ 2 ಕೋಟಿ ಮನೆ ಸಕಾಲದಲ್ಲಿ ನಿರ್ಮಾಣವಾಗಲು ವಿಜ್ಞಾನ-ತಂತ್ರಜ್ಞಾನ ಕಾರಣವಾಗಿದೆ. ಮಧ್ಯವರ್ತಿಗಳ ಅಗತ್ಯವಿಲ್ಲದೇ ರೈತರು ಬೆಳೆದ ಬೆಳೆ ಮಾರಾಟವಾಗಲು ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಇಂದು ರೈತರಿಗೆ ಬೆರಳ ತುದಿಯಲ್ಲೇ ಹವಾಮಾನದ ಮಾಹಿತಿ ಸಿಗುತ್ತಿದೆ ಎಂದು ತಿಳಿಸಿದರು.
ದೇಶವನ್ನು ಮುನ್ನಡೆಸಲು ಆವಿಷ್ಕಾರ, ಪೇಟೆಂಟ್, ಸಮೃದ್ಧಿ ಮತ್ತು ಉತ್ಪಾದನೆ ಈ ನಾಲ್ಕು ಹೆಜ್ಜೆಗಳು ಮುಖ್ಯ. ನೀವು ಆವಿಷ್ಕರಿಸಿ, ನಾವು ಪೇಟೆಂಟ್ ಮಾಡುತ್ತೇವೆ, ಅದನ್ನು ಉತ್ಪಾದಿಸುವ ಮೂಲಕ ದೇಶ ಸಮೃದ್ಧಿಯಾಗಲಿ. ಹೊಸ ಭಾರತಕ್ಕೆ ಬೇಕಾಗಿರುವುದು ತಂತ್ರಜ್ಞಾನ ಮತ್ತು ತಾರ್ಕಿಕ ಮನಸ್ಥಿತಿ. ಇದರಿಂದ ಸಾಮಾಜಿಕ ಆರ್ಥಿಕ ಮತ್ತು ಅಭಿವೃದ್ಧಿ ದಿಸೆಯಲ್ಲಿ ದೇಶಕ್ಕೆ ಹೊಸ ದಿಕ್ಕು ನೀಡಲು ಸಾಧ್ಯ ಎಂದು ಹೇಳಿದರು.
ಯುವ ವಿಜ್ಞಾನಿಗಳು ದೇಶಕ್ಕಾಗಿ ಏನಾದರೂ ಸಾಧಿಸಬೇಕು ಎಂಬ ಹಂಬಲ ಹೊಂದಿದ್ದಾರೆ. ಈಗಿರುವ ಕನಸನ್ನ ಇನ್ನೊಂದು ಹೆಜ್ಜೆ ಮುಂದಿಟ್ಟು ನನಸು ಮಾಡಿ. ಇದರಿಂದ ನಿಮಗೆ ಮಾತ್ರವಲ್ಲ ಭಾರತದ ಅಭಿವೃದ್ಧಿ ಕೂಡ ಆಗಲಿದೆ. ಸರಕಾರ ಜಲ ಜೀವನ್ ಎಂಬ ಕಾರ್ಯಕ್ರಮ ರೂಪಿಸಿದ್ದು ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಇದಕ್ಕೆ ತಂತ್ರಜ್ಞಾನದ ನೆರವು ಅಗತ್ಯ. ಜಲ ನಿರ್ವಹಣೆ, ನೀರಿನ ಮರು ಬಳಕೆ ಮಾಡುವ ನಿಟ್ಟಿನಲ್ಲಿ ಸರಳ ತಂತ್ರಜ್ಞಾನದ ಅವಶ್ಯಕತೆ ಇದೆ. ಅದನ್ನು ನೀವು ಮಾಡಬೇಕು.
ಕೃಷಿ ವಿಜ್ಞಾನದಲ್ಲಿ ಹೊಸದೊಂದು ಕ್ರಾಂತಿಯಾಗಬೇಕಿದೆ. ರೈತರಿಗೆ ಅನುಕೂಲವಾಗಿ ತಂತ್ರಜ್ಞಾನ ಮತ್ತು ಬಳಕೆಯಾದ ನೀರಿನ ಪುನರ್ ಬಳಕೆ ಕುರಿತ ಸುಧಾರಿತ ವ್ಯವಸ್ಥೆಗಳು ಮತ್ತು ಪರಿಕರಗಳು, ಮಣ್ಣಿನ ಫಲವತ್ತತೆ ಕಾಪಾಡುವ ಹೊಣೆಯೂ ವಿಜ್ಞಾನಿಗಳ ಮೇಲಿದೆ. ಏಕ ಬಳಕೆ ಪ್ಲಾಸ್ಟಿಕ್ ನಿಲ್ಲಿಸಿದ್ದೇವೆ, ಇದಕ್ಕೆ ಪರ್ಯಾಯವಾಗಿ ಬೇರೆ ಮಾರ್ಗ ಕಂಡುಕೊಳ್ಳಿ. ಅದನ್ನು ಅಭಿವೃದ್ಧಿ ಪಡಿಸಿ, ಮಣ್ಣು, ಫೈಬರ್, ಹೊಟ್ಟು, ನಾರು ಬಳಸಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಿ. ಎಲೆಕ್ಟ್ರಿಕ್ ವೇಸ್ಟ್ ಕೂಡ ಸಮಸ್ಯೆಯಾಗಿದೆ. ಅದಕ್ಕೊಂದು ಪರಿಹಾರ ಹುಡುಕಬೇಕಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಜನರ ಮತ್ತು ಸರಕಾರದ ನಡುವೆ ಕೊಂಡಿಯಾಗಬೇಕು ಹೊಸ ವರ್ಷದಲ್ಲಿ ಹೊಸ ಭಾರತದ ಕನಸನ್ನು ಎಲ್ಲರೂ ನನಸು ಮಾಡುತ್ತೀರಿ ಎಂಬ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಹೇಳಿದರು.