India Languages, asked by shobhatlshobhatl, 9 months ago

ಅಲಂಕಾರ ಬಿಡಿಸಿ ಸಮನ್ವಯ ಪಡಿಸಿ......... ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು do this we you are able​

Answers

Answered by Manroopkaur15
2

ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು’ ಎಂದು ಸಾಹಿತಿ ದೇವನೂರ ಮಹಾದೇವ ಹೇಳುತ್ತಾರೆ. ಆದರೆ ಹವಾಮಾನ ವೈಪರೀತ್ಯದಿಂದ ಭೂಮಿಗೆ ಬಿದ್ದ ಬೀಜ ಮೊಳಕೆಯೊಡೆಯವುದೇ ಇಲ್ಲ. ಅಕಸ್ಮಾತ್ ಮೊಳಕೆ ಒಡೆದರೂ ಅದು ಬರೀ ಹುಳುಕು. ಎದೆಯಲ್ಲಿ ಬರೀ ವಿಷವೇ ತುಂಬಿದ್ದರಿಂದ ಅಲ್ಲಿ ಬಿದ್ದ ಅಕ್ಷರವೂ ಫಲ ಕೊಡುವುದು ಡೌಟು.

ಬಲವರ್ಧನ ಸಮಿತಿ ಹಾಗೂ ಕರ್ನಾಟಕ ದಲಿತ ಮಹಿಳಾ ವೇದಿಕೆಯು ಸಿದ್ಧಪಡಿಸಿದ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅನುಷ್ಠಾನದ 2017ರ ವಾರ್ಷಿಕ ವರದಿಯನ್ನು ನೋಡಿದರೆ ಈ ಸಂಶಯ ಇನ್ನಷ್ಟು ಗಟ್ಟಿಯಾಗುತ್ತದೆ. ಈ ವರದಿಯ ಪ್ರಕಾರ ರಾಜ್ಯದಲ್ಲಿ ಪ್ರತಿ ಐದು ದಿನಕ್ಕೊಬ್ಬ ದಲಿತನ ಕೊಲೆಯಾಗುತ್ತದೆ. ಪ್ರತಿ ಎರಡು ದಿನಕ್ಕೆ ದಲಿತ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಯುತ್ತದೆ. ಪ್ರತಿ ನಾಲ್ಕು ಗಂಟೆಗೊಮ್ಮೆ ದಲಿತನೊಬ್ಬನ ಮೇಲೆ ದೌರ್ಜನ್ಯ ನಡೆಯುತ್ತದೆ. 2017ರಲ್ಲಿ 73 ಮಂದಿ ದಲಿತರನ್ನು ಕೊಲೆ ಮಾಡಲಾಗಿದೆ. 190 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಗಮನಿಸಬೇಕಾದ ಮತ್ತು ಹೆಚ್ಚು ಆತಂಕಕ್ಕೆ ದೂಡುವ ಇನ್ನೊಂದು ಸಂಗತಿ ಎಂದರೆ, ದಲಿತರ ಮೇಲಿನ ದೌರ್ಜನ್ಯ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೇ ಹೆಚ್ಚು ಎಂಬುದು.

ಕರುನಾಡ ರಾಜಧಾನಿ ಬೆಂಗಳೂರು, ವಿವಿಧ ಸಂಸ್ಕೃತಿಗಳ ಮಿಶ್ರಣದ ನಗರ. ದೇಶದ ಮತ್ತು ವಿಶ್ವದ ಎಲ್ಲ ಭಾಗದ ಜನರೂ ಇಲ್ಲಿದ್ದಾರೆ. ಎಲ್ಲ ಜನರನ್ನೂ ಇಲ್ಲಿ ಮುಕ್ತ ಮನಸ್ಸಿನಿಂದ ಸ್ವಾಗತಿಸಲಾಗುತ್ತದೆ. ಅಕ್ಷರಸ್ಥರೇ ಹೆಚ್ಚಿದ್ದಾರೆ. ಆದರೂ ದಲಿತರ ಮೇಲಿನ ದೌರ್ಜನ್ಯ ಇಲ್ಲೇ ಹೆಚ್ಚು ಎನ್ನುವುದು ಸಾಮಾನ್ಯ ಸಂಗತಿ ಅಲ್ಲ. ಬೆಂಗಳೂರಿನ ಎಲ್ಲ ಪ್ರಜ್ಞಾವಂತ ನಾಗರಿಕರು ತಲೆ ತಗ್ಗಿಸುವ ವಿಚಾರ ಇದು.

ನಗರ ಕಟ್ಟುವುದು ಎಂದರೆ ಕಟ್ಟಡವನ್ನು ಕಟ್ಟಿದ ಹಾಗಲ್ಲ. ಮೇಲ್ಸೇತುವೆಗಳು, ಗಗನಚುಂಬಿ ಕಟ್ಟಡಗಳು, ಮೆಟ್ರೊ ರೈಲು, ವಿಮಾನ, ಹೆಲಿಕಾಪ್ಟರ್, ವಿಶಾಲವಾದ ರಸ್ತೆ, ದಿನದ 24 ಗಂಟೆ ವಿದ್ಯುತ್, ವೈಫೈ, ಮಾಲ್ ಗಳು, ಪಬ್, ಬಾರ್ ಹೀಗೆ ನಾವು ‘ನಾಗರಿಕ’ ಎಂದುಕೊಂಡ ಸೌಲಭ್ಯಗಳನ್ನು ಒದಗಿಸುವುದಷ್ಟೇ ಅಲ್ಲ. ನಮ್ಮ ನಿಮ್ಮ ಹಾಗೆಯೇ ಮನುಷ್ಯರಾಗಿ ಹುಟ್ಟಿದ ಮನುಷ್ಯರಾಗಿಯೇ ಬದುಕಬೇಕು ಎಂದು ಕನಸು ಕಂಡ ದಲಿತರನ್ನೂ ನಮ್ಮಂತೇ ಮನುಷ್ಯರೆಂದು ಗುರುತಿಸುವ ಮನೋಭಾವ ಬೆಳೆಯುವವರೆಗೂ ಇದನ್ನು ಆರೋಗ್ಯಪೂರ್ಣ ಸಮಾಜ ಎಂದು ಕರೆಯಲಾಗದು. ಕರೆಯಬಾರದು ಕೂಡ.

Similar questions