India Languages, asked by tiarax313, 10 months ago

dooravani essay in kannada

Answers

Answered by Naeemhamid
2

Answer:

ದೂರದರ್ಶನ

ಇತ್ತೀಚೆಗೆ ದೂರದರ್ಶನ, ಅಂದರೆ ‘ಟಿ.ವಿ.’ ಎಂಬುದು ಎಲ್ಲರಿಗೂ ಜೀವಕ್ಕಿಂತ ಮಿಗಿಲಾಗಿ ಪರಿಣಮಿಸಿದೆ. ಈ ಶಬ್ಧವು ಎಲ್ಲರನ್ನೂ ಮೋಡಿ ಮಾಡಿದೆ, ನಮ್ಮಂತಹ ಮಕ್ಕಳು ಬಾಯಾರಿಕೆ, ಹಸಿವು, ನಿದ್ರೆ, ಅಭ್ಯಾಸ, ಆಟ ಹಾಗೂ ಇನ್ನಿತರ ಕೆಲಸ ಬದಿಗಿಟ್ಟು ದೂರದರ್ಶನ ಕಾರ್ಯಕ್ರಮ ನೋಡುವುದರಲ್ಲಿ ಮಗ್ನರಾಗಿರುವುದು ಕಾಣಿಸುತ್ತಿದೆ. ಆ ಮಕ್ಕಳು ಜೀವನದಲ್ಲಿನ ಅಮೂಲ್ಯ ಹಾಗೂ ಪುನಃ ಎಂದೂ ಬಾರದ ಸಮಯವನ್ನು ವ್ಯರ್ಥಗೊಳಿಸುತ್ತಿದ್ದಾರೆ.

ಮೊದಲ ದೂರದರ್ಶನ ಜಾಹೀರಾತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜುಲೈ 1, 1941 ರಂದು ಬಿತ್ತರಿಸಲ್ಪಟ್ಟಿತು. ವಾಚ್ ತಯಾರಕ ಬುಲೋವಾ ಬ್ರೂಕ್‌ಲಿನ್ ಡಾಜರ್ಸ್ ಮತ್ತು ಫಿಲಾಡೆಲ್ಫಿಯಾ ಫಿಲೀಸ್‌ಗಳ ನಡುವೆ ಒಂದು ಬೇಸ್‌ಬಾಲ್ ಆಟಕ್ಕೂ ಮುಂಚೆ ನ್ಯೂಯಾರ್ಕ್ ಸ್ಟೇಷನ್ ಡಬ್ಲುಎನ್‌ಬಿಟಿಯಲ್ಲಿ ಬದಲಾವಣೆಗಾಗಿ $9 ಗಳನ್ನು ನೀಡಿದ್ದರು. 20-ಸೆಕೆಂಡ್‌‌ನ ಜಾಹೀರಾತು ಯುನೈಟೆಡ್ ಸ್ಟೇಟ್ಸ್‌ನ ನಕ್ಷೆಯ ಮೇಲೆ ಇರಿಸಲ್ಪಟ್ಟ ಒಂದು ಗಡಿಯಾರದ ಚಿತ್ರವನ್ನು ಪ್ರದರ್ಶಿಸಿತು. ಜೊತೆಗೆ ಇದು "ಅಮೇರಿಕಾ ರನ್ಸ್ ಆನ್ ಬುಲೋವಾ ಟೈಮ್" ಎಂಬ ಘೋಷಣೆಯನ್ನೂ ಒಳಗೊಂಡಿತ್ತು.

ನಮ್ಮಲ್ಲಿ ಸುಸಂಸ್ಕಾರ ನಿರ್ಮಾಣವಾಗುವಂತಹ ಕಾರ್ಯಕ್ರಮ, ಉದಾ. ಸಂತರ, ಕ್ರಾಂತಿಕಾರರ ಮತ್ತು ಸಮಾಜಪ್ರಭೋದನೆ ಮಾಡುವಂತಹ ಚಲನಚಿತ್ರಗಳನ್ನು ದೂರದರ್ಶನದಲ್ಲಿ ಅಗತ್ಯವಾಗಿ ನೋಡಬೇಕು, ಆದರೆ ದುರ್ದೈವದಿಂದ ಇಂತಹ ಕಾರ್ಯಕ್ರಮಗಳನ್ನು ಬಹಳ ಕಡಿಮೆ ಮಕ್ಕಳು ನೋಡುತ್ತಾರೆ. ಮಕ್ಕಳು ಅತ್ತೆ-ಸೊಸೆಯ ಕಲಹದ 'ಕೌಟುಂಬಿಕ' ಮಾಲಿಕೆಯನ್ನು ನೋಡುತ್ತಾರೆ, ಅದರಲ್ಲಿನ ಪಾತ್ರದಾರಿಗಳು ದ್ವೇಷದಿಂದ ಜಗಳ ಮಾಡುತ್ತಾರೆ. ಈ ಮಾಲಿಕೆಯಲ್ಲಿ ಅಳುವಂತಹ ದೃಶ್ಯಗಳಿಗ್ಕೆ ಪರ್ಯಾಯವಿರುವುದಿಲ್ಲ. ಮಕ್ಕಳು ಯಾವಾಗಲೂ ಚಲನಚಿತ್ರಗಳ ಸಂಗೀತವನ್ನು ಗೊಣಗುತ್ತಿರುತ್ತಾರೆ. ಇತ್ತೀಚೆಗೆ ಎಲ್ಲರೂ ಹೊಸ ಚಲನಚಿತ್ರಗಳ ವಿಜ್ಞಾಪನೆ, ಕಲಾಕಾರರ ಭೇಟಿ (ಸಂಪರ್ಕ) ಚಲಚನಚಿತ್ರ, ಹಾಡು ಹಾಗೂ ಹಾವಭಾವ ಮಾಡುವಂತಹ ನೃತ್ಯಗಳನ್ನು ನೋಡುತ್ತಾರೆ. ಆದುದರಿಂದ ನಾವು ಸಹ ಹಾಗೆ ಮಾಡಬೇಕೆಂಬ ಭಾವನೆ ಮಕ್ಕಳಲ್ಲಿ ನಿರ್ಮಾಣವಾಗುವುದು.

Similar questions